»   » ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!

ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಅನ್ನೋದು ಮಾತ್ರ ಬಹಿರಂಗವಾಗಿತ್ತು. ಅದ್ರಲ್ಲೂ, ಶಿವಣ್ಣ ಸಿ.ಐ.ಡಿ ಆಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ ಅಂತ ಜಗಜ್ಜಾಹೀರಾಗಿದ್ದ ಕಾರಣ 'ಶಿವಲಿಂಗ' ಕ್ರೈಂ ಮಿಸ್ಟ್ರಿ ಸಿನಿಮಾ ಮಾತ್ರ ಅಂತ್ಲೇ ಎಲ್ಲರೂ ಭಾವಿಸಿದ್ದರು.

ಇದನ್ನ ತಲೆಯಲ್ಲಿ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ 'ಶಿವಲಿಂಗ' ಸಿನಿಮಾ ಬಿಗ್ ಸರ್ ಪ್ರೈಸ್ ನೀಡ್ತು. 'ಶಿವಲಿಂಗ' ಟ್ರೈಲರ್ ನಲ್ಲಿ ಕಾಣದ ಹಾರರ್ ಫೀಲ್ ಪರದೆ ಮೇಲೆ ರಿವೀಲ್ ಆಯ್ತು. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಬರದ ಪ್ರೇಕ್ಷಕರು, ಮತ್ತೊಂದು 'ಆಪ್ತಮಿತ್ರ' ಕಂಡು ಚಪ್ಪಾಳೆ ತಟ್ಟಿದರು.


actress-vedika-s-excellent-performance-in-shivalinga

'ಶಿವಲಿಂಗ' ಚಿತ್ರದ ಬಹುದೊಡ್ಡ ಅಚ್ಚರಿ ಅಂದ್ರೆ ನಾಯಕಿ ವೇದಿಕಾ. ಸಿ.ಐ.ಡಿ ಅಧಿಕಾರಿ ಶಿವ ಪತ್ನಿ ಸತ್ಯಭಾಮ ಆಗಿ ಧೈರ್ಯಶಾಲಿಯಾಗಿ ಮಾತನಾಡುವ ವೇದಿಕಾ ದೇಹಕ್ಕೆ ರಹೀಮ್ ಆತ್ಮ ಸೇರಿಕೊಂಡ ನಂತರ ಆಕೆ ನೀಡಿರುವ ಅಭಿನಯ ಅಮೋಘ. ['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


ನಟಿ ವೇದಿಕಾ ಅಭಿನಯ ನೋಡಿದ ಪ್ರೇಕ್ಷಕರಿಗೆ 'ಆಪ್ತಮಿತ್ರ' ಚಿತ್ರದ ನಟಿ ಸೌಂದರ್ಯ ನಟನೆ ನೆನಪಾದರೆ ಅಚ್ಚರಿ ಪಡಬೇಕಿಲ್ಲ. ಸೌಂದರ್ಯಗೆ ಸ್ಪರ್ಧೆಯೊಡ್ಡಿದಂತೆ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ ನಟಿ ವೇದಿಕಾ.


ಹಾಗ್ನೋಡಿದರೆ, 'ಶಿವಲಿಂಗ' ಚಿತ್ರದ ಮೇನ್ ಅಟ್ರ್ಯಾಕ್ಷನ್ ಈ ವೇದಿಕಾ. ಇದುವರೆಗೂ ಕೇವಲ ನಾಯಕ ನಟಿಯಾಗಿ ಹೀರೋ ಜೊತೆಗೆ ಮರ ಸುತ್ತುವ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ವೇದಿಕಾ 'ಶಿವಲಿಂಗ' ಚಿತ್ರದಲ್ಲಿ ತಮ್ಮಲ್ಲಡಗಿದ್ದ ಪ್ರತಿಭೆಯನ್ನ ಹೊರ ಹಾಕಿದ್ದಾರೆ.


ಅಂದು ಸೌಂದರ್ಯ ನಟನೆ ನೋಡಿ ಶಿಳ್ಳೆ ಹೊಡೆದ ಪ್ರೇಕ್ಷಕರು ಇಂದು ವೇದಿಕಾ ನಟನೆಗೆ ಚಪ್ಪಾಳೆ ತಟ್ಟದೆ ಇರಲ್ಲ. ಬೇಕಾದ್ರೆ, ನೀವೇ ಒಮ್ಮೆ 'ಶಿವಲಿಂಗ' ಚಿತ್ರವನ್ನ ವೀಕ್ಷಿಸಿ....

English summary
Kannada Actor Shiva Rajkumar starrer 'Shivalinga' movie has hit the screens today (February 12th). Actress Vedika who has portrayed wife of Shiva Rajkumar in the film has given excellent performance. Vedika's performance reminds Actress Soundarya's acting in 'Apthamitra'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada