For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗೆ ಬಂದಿಳಿದ ಪಾಕಿಸ್ತಾನಿ ಸೆಕ್ಸ್ ಬಾಂಬ್

  By Rajendra
  |

  ಪಾಕಿಸ್ತಾನದ ರಾವಲ್ಪಿಂಡಿ ಹಾಟ್ ತಾರೆ ವೀಣಾ ಮಲಿಕ್ ಕಡೆಗೂ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಚಿತ್ರದ ಫೋಟೋ ಶೂಟ್‌ಗಾಗಿ ವೀಣಾ ಗುರುವಾರ (ಮೇ 24) ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಬಂದಿಳಿದರು.

  ವೀಣಾ ಮಲಿಕ್ ಆಗಮನದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಬಂದಂತಾಗಿದೆ. ವೀಣಾ ಮಲಿಕ್‌ರನ್ನು ಕನ್ನಡಕ್ಕೆ ಕರೆತರುವ ಸಾಹಸ ಮಾಡಿರುವವರು ನಿರ್ಮಾಪಕ ವೆಂಕಟಪ್ಪ. ಅವರ ನಿರ್ಮಾಣದ 'ಡರ್ಟಿ ಪಿಕ್ಚರ್ : ಸಿಲ್ಕ್ ಸಖತ್ ಮಗಾ' ಚಿತ್ರದ ಐಟಂ ಸಾಂಗ್‌ನಲ್ಲಿ ವೀಣಾ ತಮ್ಮ ಮೈಮಾಟದ ಮೂಲಕ ಮೋಡಿ ಮಾಡಲಿದ್ದಾರೆ.

  ಗುರುವಾರ ಸಂಜೆ 'ಡರ್ಟಿ ಪಿಕ್ಚರ್' ಚಿತ್ರದ ಫೋಟೋ ಶೂಟ್ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ. ವೀಣಾ ಮಲಿಕ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಗಳೂರು ಹವಾಗುಣಕ್ಕೆ ಮನಸೋತಿದ್ದೇನೆ ಎಂದರು.

  ಬೆಂಗಳೂರು, ಬೆಂಗಳೂರಿಗರು ಎಂದರೆ ನನಗೆ ತುಂಬಾ ಇಷ್ಟ ಎಂದ ಅವರು ಬಳಿಕ ತಮ್ಮ ಕಾರನ್ನು ಹತ್ತಿ ಹೋಗುತ್ತಾ ಬೆಂಗಳೂರಿಗರಿಗೆ ಫ್ಲೈಯಿಂಗ್ ಕಿಸ್ ಕಳುಹಿಸಿದರು. ಮೇ 18ರಂದೇ ಬೆಂಗಳೂರಿಗೆ ವೀಣಾ ಮಲಿಕ್‌ ಬರಬೇಕಾಗಿತ್ತು. ಆದರೆ ಆಕೆಯ ವೀಸಾ ಅವರಿಧಿ ಮುಗಿದಿದ್ದ ಕಾರಣ ಆಕೆ ಅಂದು ಬರಲು ಸಾಧ್ಯವಾಗಿರಲಿಲ್ಲ. (ಏಜೆನ್ಸೀಸ್)

  English summary
  Pakistan actress Veena Malik lands at the Bangalore International Airport (BIAL). Veena has been signed in to play Silk Smitha in Trishul’s Dirty picture – Silk Sakath Maga. As soon as she landed in airport and boarded car, she gave a flying kiss to Bagaloreans, said " I love Bangalore"

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X