»   » ಮೆಜೆಸ್ಟಿಕ್ ನಲ್ಲಿ ಡರ್ಟಿ ಪಿಕ್ಚರ್ ಶೂಟಿಂಗ್ ಕ್ಯಾನ್ಸಲ್

ಮೆಜೆಸ್ಟಿಕ್ ನಲ್ಲಿ ಡರ್ಟಿ ಪಿಕ್ಚರ್ ಶೂಟಿಂಗ್ ಕ್ಯಾನ್ಸಲ್

Posted By:
Subscribe to Filmibeat Kannada

ಬೆಂಗಳೂರು ಜನನಿಬಿಡ ಪ್ರದೇಶ ಮೆಜೆಸ್ಟಿಕ್ ನಲ್ಲಿ ಪಾಕಿಸ್ತಾನದ ಸೆಕ್ಸ್ ಬಾಂಬ್ ವೀಣಾ ಮಲಿಕ್ ಬಂದಿಳಿದಾಗ ನಾ ಮುಂದು ತಾ ಮುಂದು ಎಂದು ಜನ ಆಕೆಯನ್ನು ನೋಡಲು ಮುಗಿಬಿದ್ದರು. ಈ ಅಪರೂಪದ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಸನ್ನಿವೇಶವನ್ನು ನೀವಿಲ್ಲಿ ಕಾಣಬಹುದು.

ಸುಮಾರು 20,000ಕ್ಕೂ ಅಧಿಕ ಮಂದಿ ಜಮಾಯಿಸಿದ ಕಾರಣ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಶೂಟಿಂಗ್ ಕ್ಯಾನ್ಸಲ್ ಆಯಿತು. ಆದರೂ ವೀಣಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ಧಾರಾಳವಾಗಿ ಹಸ್ತಾಕ್ಷರ ನೀಡಿದರು. ಬಿಂಕ ಬಿಟ್ಟು ಅವರ ಜೊತೆ ಫೋಟೋಗಿಳಿದರು.

ಅಭಿಮಾನಿಗಳನ್ನು ನಿಭಾಯಿಸಲು ಸಾಧ್ಯವಾಗದೆ ಕಡೆಗೆ ನಿರ್ಮಾಪಕರು ಪೊಲೀಸರ ಮೊರೆಹೋಗಬೇಕಾಯಿತು. ವೀಣಾರನ್ನು ಅಭಿಮಾನಿಗಳು ಮುತ್ತಿಗೆ ಹಾಕುತ್ತಿರುವುದು ಇದು ಎರಡನೇ ಸಲ. ಈ ಹಿಂದೆ ಆಸ್ಟ್ರೇಲಿಯಾದ ಫಿಜಿಯಲ್ಲೂ ಹೀಗೇ ಆಗಿತ್ತು. ವೀಣಾ ಪಾಲಿಗೆ ಅದು ಮೆಜೆಸ್ಟಿಕ್ ಆದರೂ ಒಂದೇ ಮಲೇಷಿಯಾ ಆದರೂ ಒಂದೇ ಎಂಬುದು ಸಾಬೀತಾಗಿದೆ.

ಕೇವಲ ಅರ್ಧ ಗಂಟೆ ಕಾಲ ಮಾತ್ರ ನಡೆದ ಚಿತ್ರೀಕರಣದಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಜನರ ನೂಕು ನುಗ್ಗಲು ಹೆಚ್ಚಾದ ಕಾರಣ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು. ಒಂದು ಸಣ್ಣ ಸನ್ನಿವೇಶದ ಚಿತ್ರೀಕರಣಕ್ಕಾಗಿ ವೀಣಾ ಮೆಜೆಸ್ಟಿಕ್ ಗೆ ಬಂದಿದ್ದರು.

ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ವೀಣಾ ತಮ್ಮ ಪಾತ್ರಕ್ಕಾಗಿ ಕೊಂಚ ಮೈಕೈ ತುಂಬಿಕೊಂಡಿದ್ದಾರೆ. ತಮ್ಮ ದೇಹದ ತೂಕವನ್ನು 5 ಕೆ.ಜಿ ಹೆಚ್ಚಿಸಿಕೊಂಡು ದುಂಡಗೆ ಗುಂಡಗೆ ಕಾಣಿಸಲಿದ್ದಾರೆ. ಚಿತ್ರದಲ್ಲಿ ತಮ್ಮದು ವೇಶ್ಯೆಯ ಪಾತ್ರವಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಈ ಭಾರಿ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿರುವವರು ವೆಂಕಟಪ್ಪ. ಈ ಚಿತ್ರಕ್ಕಾಗಿ ವೀಣಾರಿಗೆ ರು.70ರಿಂದ 80 ಲಕ್ಷ ಸಂಭಾವನೆ ಸಂದಾಯವಾಗಿದೆಯಂತೆ. ಅಂದರೆ ನಮ್ಮ ರಮ್ಯಾ, ರಾಗಿಣಿಯರ ಎರಡೂವರೆ ಪಟ್ಟು ಜಾಸ್ತಿ. ಇಷ್ಟೆಲ್ಲಾ ಸಂಭಾವನೆ ಕೊಟ್ಟರೂ ವರ್ಕ್‌ಔಟ್ ಆಗುತ್ತಾ ಎಂದರೆ ಚಿತ್ರದ ನಿರ್ಮಾಪಕರು ಖಂಡಿತ ಎಂದು ತಲೆತೂಗುತ್ತಾರೆ. ಹಾಕಿದ ದುಡ್ಡು ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿ ಅವರದು. (ಒನ್ ಇಂಡಿಯಾ ಕನ್ನಡ)

English summary
Shooting of Kannada Version Dirty Picture was halted because of the Veena Malik Crazy fans. Where she was filming a shot of her upcoming movie the frantic fans mobbed her and wanted one glimpse of Bollywood Golden Girl Veena.
Please Wait while comments are loading...