For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನಟಿ ವಿಜಯಲಕ್ಷ್ಮಿ, ಆಸ್ಪತ್ರೆಗೆ ದಾಖಲು

  |

  ನಾಗಮಂಡಲ, ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ವಿಡಿಯೋ ಮಾಡಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ಇದು ನನ್ನ ಕಡೆಯ ವಿಡಿಯೋ ಎಂದು ಹೇಳಿರುವ ವಿಜಯಲಕ್ಷ್ಮಿ ನನ್ನ ಸಾವಿಗೆ ಸೀಮನ್ ಮತ್ತು ಹರಿಂದರನ್ ಅವರುಗಳೇ ಕಾರಣ ಎಂದು ಸಹ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

  ನಟಿ ವಿಜಯಲಕ್ಷ್ಮಿ-ರವಿಪ್ರಕಾಶ್ ಪ್ರಕರಣಕ್ಕೆ ಸಖತ್ ಟ್ವಿಸ್ಟ್ನಟಿ ವಿಜಯಲಕ್ಷ್ಮಿ-ರವಿಪ್ರಕಾಶ್ ಪ್ರಕರಣಕ್ಕೆ ಸಖತ್ ಟ್ವಿಸ್ಟ್

  ತಮಿಳು ಹಾಗೂ ಕನ್ನಡದಲ್ಲಿ ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೀನಿ ಎಂಬ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆ. ಮಹಿಳೆಯಾಗಿ ನಾನು ಎಷ್ಟು ತಡೆದುಕೊಳ್ಳಬೇಕು ಅಷ್ಟು ತಡೆದುಕೊಂಡಿದ್ದೇನೆ. ಇನ್ನುಮುಂದೆ ತಡೆದುಕೊಳ್ಳಲಾಗದು ಎಂದು ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿದ್ದಾರೆ.

  ಸೀಮನ್, ಹರಿಂದ್ರನ್ ಅವರನ್ನು ಶಿಕ್ಷಿಸಿ: ವಿಜಯಲಕ್ಷ್ಮಿ

  ಸೀಮನ್, ಹರಿಂದ್ರನ್ ಅವರನ್ನು ಶಿಕ್ಷಿಸಿ: ವಿಜಯಲಕ್ಷ್ಮಿ

  ನಾನು ಬದುಕಿದಿದ್ದಿದ್ದೇ ನನ್ನ ಅಮ್ಮ ಮತ್ತು ನನ್ನ ಅಕ್ಕನಿಗಾಗಿ. ಆದರೆ ಈಗ ನನಗೆ ಸಾಕಾಗಿದೆ. ನನ್ನ ಸಾವು ಎಲ್ಲರಿಗೂ ಪಾಠವಾಗಬೇಕು ಎಂದಿರುವ ವಿಜಯಲಕ್ಷ್ಮಿ, ಸೀಮನ್ ಮತ್ತು ಹರಿಂದ್ರನ್ ಅವರನ್ನು ಬಿಡಬೇಡಿ, ಅವರನ್ನು ಶಿಕ್ಷಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

  ವೇಶ್ವಾವಾಟಿಕೆ ಮಾಡುತ್ತೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ

  ವೇಶ್ವಾವಾಟಿಕೆ ಮಾಡುತ್ತೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ

  ನಾನು ಪಿಲ್ಲೈ ಸಮುದಾಯದವಳು, ಎಲ್‌ಟಿಟಿಇ ಯ ಪ್ರಭಾಕರನ್ ಸಹ ಅದೇ ಸಮುದಾಯದವರು, ಅವರಿಂದಲೇ ಸಿಮನ್ ಇಂದು ಬದುಕುತ್ತಿರುವುದು. ಆದರೆ ಆತ ನನ್ನ ಜಾತಿಯನ್ನು ಅವಮಾನಿಸುತ್ತಿದ್ದಾನೆ. ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

  ಎರಡು ಗಂಟೆಯಲ್ಲಿ ಸಾಯುತ್ತೇನೆಂದ ವಿಜಯಲಕ್ಷ್ಮಿ

  ಎರಡು ಗಂಟೆಯಲ್ಲಿ ಸಾಯುತ್ತೇನೆಂದ ವಿಜಯಲಕ್ಷ್ಮಿ

  ನಾನು ಈಗಾಗಲೇ ಎರಡು ಬಿಪಿ ಮಾತ್ರೆಗಳನ್ನು ಹಾಕಿಕೊಂಡಿದ್ದೇನೆ. ಇನ್ನು ಎರಡು ಗಂಟೆಗಳಲ್ಲಿ ನನಗೆ ಬಿಪಿ ಲೋ ಆಗುತ್ತದೆ, ನಾನು ಸಾಯಲಿದ್ದೇನೆ. ಆದರೆ ನನ್ನ ಸಾವು ಹಲವರಿಗೆ ಪಾಠವಾಗಬೇಕು. ಸಿಮನ್ ಮತ್ತು ಹರಿಂದ್ರನ್ ಅವರನ್ನು ಬಿಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ವಿಡಿಯೋ ಮಾಡಿದ್ದ ರವಿಪ್ರಕಾಶ್

  ವಿಡಿಯೋ ಮಾಡಿದ್ದ ರವಿಪ್ರಕಾಶ್

  ವಿಜಯಲಕ್ಷ್ಮಿ ಈ ಹಿಂದೆ ಲೈಂಗಿಕ ಕಿರುಕುಳದ ದೂರು ನೀಡಿದ್ದ ರವಿಪ್ರಕಾಶ್ ಇಂದು ವಿಡಿಯೋ ಒಂದನ್ನು ಮಾಡಿ, ವಿಜಯಲಕ್ಷ್ಮಿ ಸಹೋದರಿ ತನಗೆ ಕರೆ ಮಾಡಿ ಕ್ಷಮಾಪಣೆ ಕೇಳಿದ್ದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲದೆ ಅವರ ಕ್ಷಮಾಪಣೆಯನ್ನು ನಾನು ಸ್ವೀಕರಿಸಿಲ್ಲ, ಅವರಿಗೆ ಸಮನ್ಸ್ ಕಳಿಸಲಿದ್ದೇನೆ ಎಂದಿದ್ದರು.

  English summary
  Actress Vijayalakshmi post video in Facebook. She said she will commit suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X