For Quick Alerts
  ALLOW NOTIFICATIONS  
  For Daily Alerts

  ಮಹಿಳಾ ಪ್ರಧಾನವಾದ ಕನ್ನಡದ 'ಶುದ್ಧಿ'ಗೆ ಶತದಿನದ ಸಂಭ್ರಮ

  By Suneel
  |

  ಸ್ಯಾಂಡಲ್ ವುಡ್ ನಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳ ಮತ್ತು ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಪ್ರಶಂಸೆ ಸಿಗುತ್ತಿದ್ದು, ಕನ್ನಡ ಚಿತ್ರಗಳಿಗೆ ಪರ್ವಕಾಲ ಆರಂಭವಾಗಿದೆ. ಅದಕ್ಕೆ ಉದಾಹರಣೆಯಾಗಿ ಕೆಲವು ತಿಂಗಳುಗಳ ಹಿಂದೆ ಪವನ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಚಿತ್ರ ಮತ್ತು ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಈ ಚಿತ್ರಗಳ ಸಾಲಿಗೆ 'ಶುದ್ಧಿ' ಚಿತ್ರ ಸೇರಿಕೊಂಡಿದೆ.

  ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ

  ಹೌದು. ಆದರ್ಶ್ ಎಚ್‌.ಈಶ್ವರಪ್ಪ ಎಂಬುವವರು ಡೈರೆಕ್ಟರ್ ಕ್ಯಾಪ್ ತೊಟ್ಟ ಮೊದಲ ಸಿನಿಮಾವೇ ಮಲ್ಟಿಪ್ಲೆಕ್ಸ್ ಗಳಲ್ಲಿ 100 ದಿನಗಳನ್ನು ಪೂರೈಸಿದ್ದು, ಹೊಸಬರ ಸಿನಿಮಾಗಳಿಗೆ ಮತ್ತೊಂದು ಮೈಲಿಗಲ್ಲು ಸಿಕ್ಕಂತಾಗಿದೆ. ಈ ಚಿತ್ರಕ್ಕೆ ಆದರ್ಶ್ ಎಚ್.ಈಶ್ವರಪ್ಪ ರವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರು. ಮಹಿಳಾ ಶೋ‍ಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಉತ್ತಮ ಕಥಾಹಂದರವನ್ನು ಈ ಚಿತ್ರ ಹೊಂದಿತ್ತು. ಈಗ ಚಿತ್ರಕ್ಕೆ ಉತ್ತಮ ಗೆಲುವು ಸಿಕ್ಕಿದ್ದು ನೂರು ದಿನಗಳನ್ನು, ಅದೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪೂರೈಸಿದ್ದು ಚಿತ್ರತಂಡ ಯಶಸ್ಸಿನ ಸಂಭ್ರಮವನ್ನು ಪತ್ರಿಕಾಗೋಷ್ಠಿ ನಡೆಸಿ ಆಚರಿಸಿಕೊಂಡಿದೆ.

  ಸದ್ದಿಲ್ಲದೇ ವಿದೇಶಕ್ಕೆ ಹಾರುತ್ತಿದೆ ಕನ್ನಡದ 'ಶುದ್ಧಿ'

  ಅಂದಹಾಗೆ ಶೋ‍ಷಿತ ಸಮಾಜವನ್ನು ಶುದ್ಧೀಕರಿಸುವ ಹಿನ್ನೆಲೆಯ 'ಶುದ್ಧಿ' ಚಿತ್ರದಲ್ಲಿ ನಟಿ ನಿವೇದಿತಾ, ಅಮೆರಿಕ ಮೂಲದ ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ, ಸುಧಾ ಬೆಳವಾಡಿ ಮತ್ತು ಇತರರು ನಟಿಸಿದ್ದರು. ಮಹಿಳಾ ಪ್ರಧಾನವಾದ ಈ ಚಿತ್ರ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದಿದ್ದಲ್ಲದೇ ಅಮೆರಿಕದಲ್ಲು ಬಿಡುಗಡೆ ಆಗಿತ್ತು.

  ಮಾರ್ಚ್ 17 ರಂದು ಬಿಡುಗಡೆ ಆಗಿದ್ದ 'ಶುದ್ಧಿ' ಚಿತ್ರವನ್ನು ಸಾನ್ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದರು. ಜೆಸ್ಸಿ ಕ್ಲಿಂಟನ್ ಸಂಗೀತ ಸಂಯೋಜನೆ, ಆಂಡ್ರು ಆಯಿಲೋ ಛಾಯಾಗ್ರಹಣ ನಿರ್ವಹಣೆ ಮಾಡಿದ್ದರು.

  English summary
  Adarsh Eshwarappa's debut film 'Shuddi' has completed a 100 day run in the multiplex and to mark the occasion, the team held a press meet recently and celebrated the success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X