For Quick Alerts
  ALLOW NOTIFICATIONS  
  For Daily Alerts

  'ಡೆಡ್ಲಿ' ಆದಿತ್ಯರ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ದರ್ಶನ್ ಸಾಥ್

  By Suneetha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ಡೆಡ್ಲಿ' ಖ್ಯಾತಿಯ ನಟ ಆದಿತ್ಯ ಸಿಂಗ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಇವರು 'ಸ್ನೇಹನಾ ಪ್ರೀತಿನಾ' ಎಂಬ ಚಿತ್ರದಲ್ಲಿ ಒಂದಾಗಿದ್ದರು. ತದನಂತರ ಇವರು ಯಾವುದೇ ಸಿನಿಮಾದಲ್ಲಿ ಒಂದಾಗಿರಲಿಲ್ಲ.

  ಇದೀಗ ಮತ್ತೆ ದರ್ಶನ್ ಮತ್ತು ಆದಿತ್ಯ ಅವರು ಒಂದಾಗಿದ್ದಾರೆ. ಈ ಬಾರಿ ಸಿನಿಮಾದಲ್ಲಿ ಒಂದಾಗದಿದ್ದರೂ ಕೂಡ, ಆದಿತ್ಯ ಅವರ ಹೊಸ ಚಿತ್ರ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರಕ್ಕೆ ದರ್ಶನ್ ಅವರು ಕ್ಲಾಪ್ ಮಾಡಿ ಮತ್ತೆ ತಮ್ಮ ಹಳೇ ಸ್ನೇಹವನ್ನು ಚಿಗುರಿಸಿದ್ದಾರೆ.['ಬೆಂಗಳೂರು ಅಂಡರ್ ವರ್ಲ್ಡ್‌' ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ]

  'ರೆಬೆಲ್' ಚಿತ್ರದ ನಂತರ ಆದಿತ್ಯ ಅವರು ಕನ್ನಡ ಚಿತ್ರರಂಗದಲ್ಲಿ ಮಾಯಾವಾಗಿದ್ದರು. ತದನಂತರ ಅವರು ತಮಿಳು ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದರು. ಇದೀಗ 'ಡೆಡ್ಲಿ ಸೋಮ' ಮತ್ತು 'ಎದೆಗಾರಿಕೆ' ಚಿತ್ರದ ನಂತರ ಮತ್ತೆ ಭೂಗತ ಲೋಕದ ಚಿತ್ರಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

  ನಿರ್ದೇಶಕ ಪಿ.ಎನ್ ಸತ್ಯ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ನಿರ್ಮಾಪಕರಾದ ಸುಧಾಕರ್ ಮತ್ತು ಆನಂದ್ ಅವರು ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

  ಬೆಂಗಳೂರಿನ ಭೂಗತ ಲೋಕದ ಒಳ ಸುಳಿಗಳ ಬಗ್ಗೆ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ಹಂತ-ಹಂತವಾಗಿ ಬಿಡಿಸಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡುತ್ತಿದ್ದಾರೆ. ಮೂಹೂರ್ತದ ಫೋಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ...

  English summary
  Kannada Actor Aditya starrer 'Bengaluru Underworld' goes on floors. 'Bengaluru Underworld' is directed by Director P N Satya himself has written the story, screenplay and dialogues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X