For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗವನ್ನು ಗೆಲ್ಲಿಸಲಿಲ್ಲ 'ಕೆಜಿಎಫ್ 2', 'ಕಾಂತಾರ', 'ಚಾರ್ಲಿ', 'ಜೇಮ್ಸ್', 'ವಿಕ್ರಾಂತ್ ರೋಣ' : 2022ರಲ್ಲೂ ನಷ್ಟ?

  |

  2022 ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದಷ್ಟು ದೊಡ್ಡ ಸಿನಿಮಾಗಳನ್ನು ನೀಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ.

  'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ', 'ಜೇಮ್ಸ್' ಹಾಗೂ 'ವಿಕ್ರಾಂತ್ ರೋಣ' ದಂತಹ ಸಿನಿಮಾಗಳು ಗಳಿಕೆಯಲ್ಲಿ ಟಾಪ್‌ನಲ್ಲಿವೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್ ಚಿತ್ರರಂಗವನ್ನೇ ಮೀರಿಸಿದೆ. ಹೀಗಾಗಿ 2022ರಲ್ಲಿ ಕನ್ನಡ ಚಿತ್ರರಂಗದ ಭರ್ಜರಿ ಲಾಭದಲ್ಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು.

  2022ನೇ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ರಿಲೀಸ್: ಧನುಷ್ ನಂ 1, ಯಶ್ ಎಷ್ಟನೇ ಸ್ಥಾನ?2022ನೇ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ರಿಲೀಸ್: ಧನುಷ್ ನಂ 1, ಯಶ್ ಎಷ್ಟನೇ ಸ್ಥಾನ?

  ಕನ್ನಡ ಚಿತ್ರರಂಗಕ್ಕೆ ಇಷ್ಟು ದೊಡ್ಡ ಹಿಟ್ ಸಿಕ್ಕಿದ್ದರೂ, ಲಾಭದಲ್ಲಿದೆ ಇದೆಯಾ? ಈ ಪ್ರಶ್ನೆಗೆ ಸ್ಯಾಂಡಲ್‌ವುಡ್ ಮಂದಿ ಉತ್ತರ ವಿರುದ್ಧವಾಗಿದೆ. ಹಾಗೇ ವಿಮರ್ಶಕರು ಕೂಡ ಕನ್ನಡ ಚಿತ್ರರಂಗದ ಲಾಭದಲ್ಲಿದೆ ಅನ್ನೋದನ್ನು ಒಪ್ಪಿಕೊಳ್ಳುತ್ತಿಲ್ಲ.

  ಪ್ಯಾನ್ ಇಂಡಿಯಾ ಸಿನಿಮಾ ಒಟ್ಟು ಲಾಭವೇನು?

  ಪ್ಯಾನ್ ಇಂಡಿಯಾ ಸಿನಿಮಾ ಒಟ್ಟು ಲಾಭವೇನು?

  ರಾಕಿ ಭಾಯ್ 'ಕೆಜಿಎಫ್ 2', ಪುನೀತ್ ರಾಜ್‌ಕುಮಾರ್ 'ಜೇಮ್ಸ್', ರಕ್ಷಿತ್ ಶೆಟ್ಟಿ '777 ಚಾರ್ಲಿ', ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಹಾಗೂ ರಿಷಬ್ ಶೆಟ್ಟಿಯ 'ಕಾಂತಾರ'. ಕನ್ನಡ ಈ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ಕಲೆಕ್ಷನ್ ಕರ್ನಾಟಕದಲ್ಲಿ ಅಲ್ಲ, ಇಡೀ ಭಾರತದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಐದು ಸಿನಿಮಾ ಒಟ್ಟು ಗಳಿಕೆ ಸುಮಾರು 2160 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

  ಕೆಜಿಎಫ್ 2 1250 ಕೋಟಿ ರೂ.
  ಜೇಮ್ಸ್ 150 ಕೋಟಿ ರೂ.
  777 ಚಾರ್ಲಿ 150 ಕೋಟಿ ರೂ.
  ವಿಕ್ರಾಂತ್ ರೋಣ 210 ಕೋಟಿ ರೂ.
  ಕಾಂತಾರ 400 ಕೋಟಿ ರೂ.
  ಒಟ್ಟು 2160 ಕೋಟಿ ರೂ.

  ಸ್ಯಾಂಡಲ್‌ವುಡ್‌ ಲಾಭದಲ್ಲಿದ್ಯಾ? ಇಲ್ವಾ?

  ಸ್ಯಾಂಡಲ್‌ವುಡ್‌ ಲಾಭದಲ್ಲಿದ್ಯಾ? ಇಲ್ವಾ?

  ಕನ್ನಡದ ನಿರ್ಮಾಪಕರಿಗೆ ಕೇವಲ ಐದು ಸಿನಿಮಾಗಳಿಂದ 2160 ಕೋಟಿ ರೂ. ಬ್ಯುಸಿನೆಸ್ ಆಗಿದೆ. ಹೀಗಿದ್ರೂ ಸ್ಯಾಂಡಲ್‌ವುಡ್‌ಗೆ ನಷ್ಟ ಆಗಿದೆ ಅನ್ನೋ ವಾದ ವಿಮರ್ಶಕರ ವಲಯದಲ್ಲಿ ಹರಿದಾಡುತ್ತಿದೆ. "ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 200 ಸಿನಿಮಾಗಳು ರಿಲೀಸ್ ಆಗಿವೆ. ಇವುಗಳಲ್ಲಿ ಕನ್ನಡ ಐದು ಫ್ಯಾನ್ ಇಂಡಿಯಾ ಸಿನಿಮಾಗಳು ಭರ್ಜರಿ ಬ್ಯುಸಿನೆಸ್ ಮಾಡಿವೆ. ಹಿಂದೆಂದಿಗಿಂತೂ ಇದು ಅದ್ಭುತ ಕಲೆಕ್ಷನ್. ಆದರೆ, ಉಳಿದ 195 ಸಿನಿಮಾಗಳ ಕತೆಯೇನು? ಅಂತ ನೋಡಿದರೆ, ಅಲ್ಲಿ ನಷ್ಟ ಅನ್ನೋದು ಕಣ್ಮುಂದೆ ಬರುತ್ತೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತರೂ, ಸ್ಯಾಟಲೈಟ್, ಓಟಿಟಿಯಲ್ಲಿ ನಿರ್ಮಾಪಕರಿಗೆ ಸಿಗುತ್ತಿದ್ದ ಹಣದಿಂದ ಸೇಫ್ ಆಗುತ್ತಿದ್ದರು. ಆದರೆ, ಈ ಬಾರಿ ಶೇ.10ರಷ್ಟು ಸಿನಿಮಾ ಮಾತ್ರ ಓಟಿಟಿಗೆ ಸೇಲ್ ಆಗಿದೆ. ಹೀಗಾಗಿ ಕನ್ನಡ ಚಿತ್ರರಂಗ ನಷ್ಟದಲ್ಲೇ ಇದೆ." ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ಯಾಮ್ ಪ್ರಸಾದ್.

  ಮಲಯಾಳಂ ಚಿತ್ರರಂಗಕ್ಕೆ ಹೆಚ್ಚು ಲಾಭ

  ಮಲಯಾಳಂ ಚಿತ್ರರಂಗಕ್ಕೆ ಹೆಚ್ಚು ಲಾಭ

  ಕೊರೊನಾ ಬಳಿಕ ಕನ್ನಡ ಚಿತ್ರರಂಗಕ್ಕೆ ಜನರು ಬರುತ್ತಿಲ್ಲ ಅನ್ನೋ ಅಳುಕು ನಿರ್ಮಾಪಕರಲ್ಲಿ ಇತ್ತು. ಆದರೆ, ಕನ್ನಡದ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ಆ ಆತಂಕವನ್ನು ದೂರು ಮಾಡಿತ್ತು. ಅದು ಬಿಟ್ಟಿರೆ, ಉಳಿದ ಸುಮಾರು 180ಕ್ಕೂ ಅಧಿಕ ನಿರ್ಮಾಪಕರಿಗೆ ನಷ್ಟನೇ ಆಗಿದೆ ಅನ್ನೋ ಲೆಕ್ಕಾಚಾರ ಚಿತ್ರರಂಗ ನೀಡುತ್ತಿದೆ. ಸ್ಮಾಲ್ ಬಜೆಟ್ ಸಿನಿಮಾಗಳನ್ನು ಮಾಡಿದ್ರೂ, ಮಲಯಾಳಂ ಚಿತ್ರರಂಗ ಹೆಚ್ಚು ಲಾಭದಲ್ಲಿದೆ. "ಸ್ಯಾಟಲೈಟ್ ಹಾಗೂ ಓಟಿಟಿ ರೈಟ್ಸ್‌ನಿಂದ ನಿರ್ಮಾಪಕರಿಗೆ ಹಾಕಿದ ಬಂಡವಾಳ ಬರುತ್ತೆ. ಮಲಯಾಳಂನಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾಗಳು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್, ಸೋನಿ ಲೈವ್, ಜೀ 5 ಅಂತಹ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಿದೆ. ಅದೇ ಕನ್ನಡದ ಸಿನಿಮಾಗಳು ಶೇ.10ರಷ್ಟು ರಿಲೀಸ್ ಆಗಿದೆ. ಹಾಗೇ ಸ್ಯಾಟಲೈಟ್‌ ಕೂಡ ಸೇಲ್ ಆಗಿಲ್ಲ. ಹೀಗಾಗಿ ಲಾಭ ಅಂತ ಬಂದಿದ್ದು ಕಡಿಮೆನೇ." ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ಯಾಮ್ ಪ್ರಸಾದ್.

  'ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ'

  'ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ'

  "ಕಳೆದ ಎರಡು ದಶಕಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗ ಅತ್ಯುತ್ತಮ ಬ್ಯುಸಿನೆಸ್ ಅಂತ ಮಾಡಿದ್ದು ಇದೇ ವರ್ಷ. 2022ರಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡಿವೆ. ಇದರಿಂದ ಚಿತ್ರರಂಗಕ್ಕೆ ಲಾಭದಲ್ಲಿದೆ ಎನ್ನುವುದಕ್ಕೆ ಆಗುವುದಿಲ್ಲ. ಇದು ಆ ಐದು ಸಿನಿಮಾಗಳನ್ನು ಮಾಡಿರೋ ನಿರ್ಮಾಪಕರು, ವಿತರಕರಿಗಷ್ಟೇ ಲಾಭ. ಆದರೆ, ಉಳಿದ ಸಿನಿಮಾಗಳ ನಿರ್ಮಾಪಕರು ನಷ್ಟದಲ್ಲೇ ಇದ್ದಾರೆ. ಒಂದಂತೂ ಹೇಳಬಹುದು. ಇಲ್ಲಿವರೆಗೂ ಕನ್ನಡ ಚಿತ್ರರಂಗಕ್ಕೆ ಸಿಗದಷ್ಟು ಜನಪ್ರಿಯತೆ ಸಿಕ್ಕಿದೆ ಅಷ್ಟೇ." ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

  English summary
  After blockbusters like KGF 2, Kantara,Charlie Kannada Film Industry In Lose, Know More.
  Wednesday, December 28, 2022, 15:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X