Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: 'ಕಾಂತಾರ' ಆದ್ಮೇಲೆ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುವ ಮುಂದಿನ ಸಿನಿಮಾ ರಿಲೀಸ್‌ಗೆ ರೆಡಿ!
ಕನ್ನಡ ಮೂವರು ನಟರ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. 'ಕೆಜಿಎಫ್ 2' ಬಳಿಕ ಯಶ್ ಮುಂದಿನ ಸಿನಿಮಾ ಯಾವುದು? 'ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ಯಾವ ಸಿನಿಮಾ ಗ್ರೀನ್ ಸಿಗ್ನಲ್ ಕೊಡ್ತಾರೆ? 'ಕಾಂತಾರ' ಸೂಪರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಇನ್ನು ಉತ್ತರ ಸಿಗೋದು ಬಾಕಿಯಿದೆ.
ಯಶ್ ಹಾಗೂ ಕಿಚ್ಚ ಸುದೀಪ್ ಮುಂದಿನ ಸಿನಿಮಾದ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಇನ್ನು 'ಕಾಂತಾರ' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಬಗ್ಗೆನೂ ಎಲ್ಲರಲ್ಲೂ ಕುತೂಹಲವಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಿಷಬ್ ಮುಂದಿನ ಸಿನಿಮಾ ಬಗ್ಗೆ ಗುಸು ಗುಸು ಶುರುವಾಗಿದೆ.
ಕೋರ್ಟ್‌ನಲ್ಲೇ
ಮಾತಾಡಬೇಕು..
ಇಲ್ಲಿ
ಮಾತಾಡಬಾರದು':
ವರಾಹ
ರೂಪಂ
ವಿವಾದ
ಬಗ್ಗೆ
ರಿಷಬ್
ಪ್ರತಿಕ್ರಿಯೆ!
'ಕಾಂತಾರ 2'ಗೂ ಮುನ್ನ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾ ಶೀಘ್ರದಲ್ಲಿಯೇ ರಿಲೀಸ್ ಕೂಡ ಆಗುತ್ತೆ ಅಂತಿದೆ ಗಾಂಧಿನಗರ. ಹಾಗಿದ್ದರೆ, ರಿಷಬ್ ಶೆಟ್ಟಿ ಮುಂದೆ ಕಾಣಿಸಿಕೊಳ್ಳಲಿರೋ ಆ ಸಿನಿಮಾ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕಾಂತಾರ' ಆದ್ಮೇಲೆ ಮುಂದಿನ ಸಿನಿಮಾ ಯಾವುದು?
ರಿಷಬ್ ಶೆಟ್ಟಿ 'ಕಾಂತಾರ' ದೇಶಾದ್ಯಂತ ಗಮನ ಸೆಳೆದಿದ್ದಾರೆ. ಒಂದೇ ಒಂದು ಸಿನಿಮಾ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿಸಿದೆ. ಹೀಗಾಗಿ ಇಡೀ ದೇಶವೇ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾವನ್ನೂ ಅತೀ ಕುತೂಹಲದಿಂದ ಎದುರು ನೋಡುತ್ತಿದೆ. ಈ ಕುತೂಹಲ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ಟಿಗಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ಗೂ ಇದೆ. ಆದ್ರೀಗ ಇದೇ ಗಾಂಧಿನಗರದ ಗಲ್ಲಿಯೊಳಗಿಂದ 'ಕಾಂತಾರ' ಬಳಿಕ ರಿಲೀಸ್ ಆಗುತ್ತಿರುವ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಲೀಕ್ ಆಗಿದೆ.

ಹಾಸ್ಟೆಲ್ ಹುಡುಗರ ಜೊತೆ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಅಂತ ಸಿನಿಪ್ರಿಯರು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಆದ್ರೀಗ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿರುವ ಮುಂದಿನ ಸಿನಿಮಾ ಹೆಸರು ರಿವೀಲ್ ಆಗಿದೆ. ಅದುವೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರ ಅಂದ ಮಾತ್ರಕ್ಕೆ ಹೀಗೆ ಬಂದು ಹಾಗೆ ಹೋಗೊ ಪಾತ್ರ ಅಲ್ವ. ರಿಷಬ್ ಪಾತ್ರ ಪ್ರಮುಖವಾಗಿಯೇ ಇರುತ್ತೆ ಅಂತಲೇ ಹೇಳಲಾಗುತ್ತಿದೆ.

ರಿಷಬ್ ಶೆಟ್ಟಿ ಪಾತ್ರವೇನು?
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪಾತ್ರ ಇಂಟ್ರೆಸ್ಟಿಂಗ್ ಆಗಿದೆ. ಹಾಸ್ಟೆಲ್ ಹುಡುಗರ ಸೀನಿಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೀನಿಯರ್ ಹಾಗೂ ಜೂನಿಯರ್ ನಡುವಿನ ಪ್ರಮುಖ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತಿದೆ. ಸದ್ಯ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಶೂಟಿಂಗ್ ಮುಗಿದಿದ್ದು, ಬಿಡುಗಡೆ ಸಜ್ಜಾಗಿದೆ. ಆದರೆ, ಚಿತ್ರತಂಡ ಇನ್ನೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ.

'ಕಾಂತಾರ 2'ಗೆ ರಿಷಬ್ ಶೆಟ್ಟಿ ರೆಡಿ?
'ಕಾಂತಾರ'ದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ಸೀಕ್ವೆಲ್‌ಗೆ ರೆಡಿಯಾಗುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಈಗಾಗಲೇ ರಿಷಬ್ ಶೆಟ್ಟಿ ಅದೇ ತಯಾರಿಯಲ್ಲಿದ್ದಾರೆ ಅನ್ನೋ ಸುದ್ದಿನೂ ಇದೆ. ಈಗಾಗಲೇ ದಿಗಂತ್ ಕೂಡ ರಿಷಬ್ ಶೆಟ್ಟಿ 'ಕಾಂತಾರ 2'ನಲ್ಲಿ ಬ್ಯುಸಿಯಾಗಿದ್ದಾರೆ ಅಂತ ಹೇಳಿದ್ದರು. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ಇದೇ ಕುತೂಹಲವಿದೆ. ಆದರೆ, ಮುಂದಿನ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಇದೂವರೆಗೂ ಯಾವುದೇ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.