Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೇದ' ಸಿನಿಮಾ ನೋಡಿ, 'ಕ್ರಾಂತಿ'ಗೆ ಹೋಲಿಸಿ ಚಾಟಿ ಬೀಸಿದ ಅಹೋರಾತ್ರ!
ಕಳೆದ ಕೆಲವು ದಿನಗಳಿಂದ ಅಹೋರಾತ್ರ ಹಾಗೂ ದರ್ಶನ್ ನಡುವೆ ಕಿತ್ತಾಟ ನಡೆಯುತ್ತಿದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಅಹೋರಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಹೆಣ್ಣು ನಿಂದಕರು ಎಂದು ಜರಿಯುತ್ತಿದ್ದಾರೆ.
ಅಹೋರಾತ್ರ ಹೀಗೆ ಬ್ಯಾಕ್ ಟು ಬ್ಯಾಕ್ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಲೇ ಇದ್ದಾರೆ. ಇಲ್ಲಿಂದ ದರ್ಶನ್ ಅಭಿಮಾನಿಗಳು ಕೂಡ ಆಹೋರಾತ್ರಗೆ ಸೋಶಿಯಲ್ ಮೀಡಿಯಾದಲ್ಲೇ ಟಕ್ಕರ್ ಕೊಡುತ್ತಲೇ ಇದ್ದಾರೆ.
"ಉರಿಸಬೇಕು
ಅಂತಿದ್ರೆ,
ಒಳ್ಳೆ
ಕೆಲಸ
ಮಾಡಿ
ಉರಿಸುತ್ತಲೇ
ಇರ್ತೀವಿ":
ದರ್ಶನ್
ಹೇಳಿಕೆಗೆ
ಅಪ್ಪು
ಫ್ಯಾನ್ಸ್
ತಿರುಗೇಟು!
ಫಾರ್ ಎ ಚೇಂಜ್ ಎನ್ನುವಂತೆ 'ವೇದ' ಸಿನಿಮಾ ನೋಡಿದ ಖುಷಿ ವ್ಯಕ್ತಪಡಿಸಿದ್ದಾರೆ. ಶಿವರಾಜ್‌ಕುಮಾರ್ 125ನೇ ಸಿನಿಮಾ 'ವೇದ' ನೋಡಿ ಕಣ್ಣೀರು ಹಾಕುತ್ತಾ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಅಲ್ಲದೆ 'ವೇದ' ಮೆಚ್ಚಿಕೊಳ್ಳುತ್ತಲೇ 'ಕ್ರಾಂತಿ' ಸಿನಿಮಾ ವಿರುದ್ಧ ಚಾಟಿ ಏಟು ಬೀಸಿದ್ದಾರೆ. ಈ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ.

'ಹೀರೊಯಿನ್ ರೋಲ್, ಏನಿದು ಬೆಂಕಿ'
"ವೇದ ಸಿನಿಮಾ ಮಾಡಿದ್ದಕ್ಕೆ ನಿಮಗೆ ಸೆಲ್ಯೂಟ್ ಧನ್ಯವಾದ. ನೋಡಿದ್ರೆ ಇಂತಹ ಸಿನಿಮಾ ನೋಡೋಣ. ಹೀರೊಯಿನ್ ರೋಲ್, ಏನಿದು ಬೆಂಕಿ. ನಿಜವಾದ ಹೀರೊ ಆ ಚಿತ್ರಕ್ಕೆ ಹೀರೊಯಿನ್. ಯಾರು ಆ ಕಲಾವಿದೆ ಅಹೋರಾತ್ರನಿಗೆ ಗೊತ್ತಿಲ್ಲ. ತುಂಬಾ ಗೌರವಾನ್ಮಿತ ನಟನೆ. ಗಂಡ ಕೂಡ ಆಕೆಯ ಬಳಿ ಹೋಗಬೇಕು ಅಂದ್ರೆ ಗಡ ಗಡ ನಡುಗಬೇಕು ಅಂತಹ ರೋಲ್. ಏನು ಕ್ರಿಯೇಷನ್ ಅದು. ಡೈರೆಕ್ಟರ್‌ಗೆ ನಮನಗಳು." ಎಂದು ಅಹೋರಾತ್ರ ಹರ್ಷ ವ್ಯಕ್ತಪಡಿಸಿದ್ದಾರೆ.

'ಯಾಕೆ ಈ ಕಣ್ಣಲ್ಲಿ ನೀರು?'
"ಯಾಕೆ ಈ ಕಣ್ಣಲ್ಲಿ ನೀರು. ವೇದ ಸಿನಿಮಾ ನೋಡಿದೆ. ಆ ಗುಂಗಿನಿಂದ ಆಚೆ ಬರುವುದಕ್ಕೆ ಆಗಲಿಲ್ಲ. ಈಗ ನಡೆಯುತ್ತಿರುವ ಎಲ್ಲಾ ವಿಚಾರಗಳ ಸಂಗ್ರಹ ವೇದ ಆಗಿದೆ. ರಸ್ತೆ ರಸ್ತೆಯ ಕಥೆ ವೇದ ಆಗಿದೆ. ಹೆಣ್ಣು ನಿಂದನೆಗಳ ಪರಿಣಾಮ ಏನಾಗಬಹುದು ಎಂದು ಆ ಸಿನಿಮಾದಲ್ಲಿ ತೋರಿಸಿದ್ದಾರೆ. ಅತ್ಯದ್ಭುತವಾದ ಸಿನಿಮಾವಿದು ಎನಿಸಿಕೊಳ್ಳುತ್ತೆ. ನೀವು ಸಂಸಾರ ಜೊತೆ ಹೋಗಿ ಮಕ್ಕಳೊಡನೆ ನೋಡಬೇಕಾದ ಸಿನಿಮಾ." ಎಂದು ಅಹೋರಾತ್ರ ಹೇಳಿದ್ದಾರೆ.

ದರ್ಶನ್ ವಿರುದ್ಧ 'ಅಹೋರಾತ್ರ' ಕಿಡಿ
'ಕ್ರಾಂತಿ' ಸಿನಿಮಾದ ಸಂದರ್ಶನದ ವೇಳೆ ದರ್ಶನ್ ಅದೃಷ್ಟ ದೇವತೆ ಬಗ್ಗೆ ಮಾತಾಡಿದ್ದರು. ಅದು ಹಲವು ಮಂದಿಗೆ ಇಷ್ಟ ಆಗಿರಲಿಲ್ಲ. ಕೆಲವರು ಗಂಭೀರವಾಗಿ ಕಮೆಂಟ್ ಮಾಡಿದ್ದರು. ಅದರಲ್ಲಿ ಅಹೋರಾತ್ರ ಕೂಡ ಒಬ್ಬರು. ಅದೃಷ್ಟ ದೇವತೆ ಬಗ್ಗೆ ಮಾತಾಡುತ್ತಿದ್ದಂತೆ ಅಹೋರಾತ್ರ ಅಖಾಡಕ್ಕೆ ಇಳಿದಿದ್ದರು. ಕಿಚ್ಚ ಸುದೀಪ್ ಬಿಟ್ಟು ದರ್ಶನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ವಾಕ್ ಸಮರ ಸಾರುತ್ತಲೇ ಇದ್ದಾರೆ.

ಜನರನ್ನು ವಶೀಕರಣ ಮಾಡುವುದಕ್ಕೆ ಸಿನಿಮಾ ಮಾಡಿದ್ದೀರಾ?
ಅಹೋರಾತ್ರ 'ವೇದ' ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ನಾಯಕಿಯ ನಟನೆಗೆ ಮರುಳಾಗಿದ್ದಾರೆ. ಇದೇ ವೇಳೆ 'ಕ್ರಾಂತಿ' ಸಿನಿಮಾದ ಹಾಡಿನ ಬಗ್ಗೆಯೂ ಕಿಡಿಕಾರಿದ್ದಾರೆ. "ಹೆಣ್ಣು ದೊಡ್ಡವಳಾಗುವುದಕ್ಕೆ ಪುಷ್ಪವತಿ ಅಂತ ಕರೆಯುತ್ತಾರೆ. ಅದನ್ನು ಅಷ್ಟು ವಿಕೃತ, ವಿಕಾರವಾಗಿ ಮಾಡಿದ್ದೀರಲ್ಲ ಶಾಲಾ ಮಕ್ಕಳಿಗೆ ಅಂತ ಹೇಳಿ. ಜನರನ್ನು ವಶೀಕರಣ ಮಾಡುವುದಕ್ಕೆ ಸಿನಿಮಾ ಮಾಡಿ, ಶಾಲಾ ಮಕ್ಕಳಿಗೆ ಇದ್ದನ್ನೇನಾ ನೀವು ಕಲಿಸೋದು." ಎಂದು ಅಹೋರಾತ್ರ ಕಿಡಿಕಾರಿದ್ದಾರೆ.