»   » ದಿಗಂತ್ ಜೊತೆ ನಟಿ ಐಂದ್ರಿತಾ ರೇ ಐಟಂ ಡಾನ್ಸ್

ದಿಗಂತ್ ಜೊತೆ ನಟಿ ಐಂದ್ರಿತಾ ರೇ ಐಟಂ ಡಾನ್ಸ್

Posted By:
Subscribe to Filmibeat Kannada

ನಟಿ ಐಂದ್ರಿತಾ ರೇ ಸುದೀರ್ಘ ಗ್ಯಾಪ್ ನ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ. ಅವರ ಅಭಿನಯದ 'ಟೋನಿ' ಹಾಗೂ 'ಭಜರಂಗಿ' ಚಿತ್ರಗಳ ಬಳಿಕ ಅವರು ಗಾಂಧಿನಗರದಿಂದ ಬಹುತೇಕ ಮಾಯವಾಗಿದ್ದಾರೆ.

ಇದೀಗ ಮತ್ತೊಂದು ಐಟಂ ಸಾಂಗ್ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ದೂದ್ ಪೇಡ ದಿಗಂತ್ ಅವರ 'ಶಾರ್ಪ್ ಶೂಟರ್' ಚಿತ್ರದಲ್ಲಿ ಐಂದ್ರಿತಾ ರೇ ಸೊಂಟ ಬಳುಕಿಸಲಿದ್ದಾರೆ. ಈಗಾಗಲೆ ಈ ಚಿತ್ರದ ಶೂಟಿಂಗ್ ಸದ್ದಿಲ್ಲದಂತೆ ಮುಗಿದಿದೆ.

Aindrita Ray Item number in Diganth movie Sharp Shooter

ಆದರೆ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಅವುಗಳಲ್ಲಿ ಈ ಐಟಂ ಸಾಂಗ್ ಸಹ ಒಂದು ಎನ್ನುತ್ತದೆ ಚಿತ್ರತಂಡ. ಇದೀಗ ಈ ಐಟಂ ಹಾಡಿಗೆ ಐಂದ್ರಿತಾ ರೇ ಅವರನ್ನು ಫೈನಲ್ ಮಾಡಲಾಗಿದೆ.

ಈ ರೀತಿ ವಿಶೇಷ ಹಾಡಿನಲ್ಲಿ ಐಂದ್ರಿತಾ ರೇ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಕಡ್ಡಿಪುಡಿ' ಚಿತ್ರದಲ್ಲಿ ಇದೇ ರೀತಿಯ ಸ್ಪೆಷಲ್ ಹಾಡಿನಲ್ಲಿ ತಮ್ಮ ಸೊಂಟ ಬಳುಕಿಸಿದ್ದರು.

ಗೀತರಚನೆಕಾರರಾಗಿ ಗುರುತಿಸಿಕೊಂಡಿರುವ ಗೌಸ್ ಪೀರ್ ಅವರ ನಿರ್ದೇಶನದ ಚಿತ್ರ ಇದಾಗಿದೆ. ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಜೂಲಿ ಲಕ್ಷ್ಮಿ, ಸುಧಾರಾಣಿ ಹಾಗೂ ಮಿತ್ರ ಸೇರಿದಂತೆ ಹಲವು ತಾರೆಗಳಿದ್ದಾರೆ. ಶಿವಸಂತೋಷ್ ಅವರ ಸಂಗೀತ ಹಾಗೂ ಕರುಣಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಏಜೆನ್ಸೀಸ್)

English summary
Actress Aindrita Ray is all set to be seen in an item number in Diganth starrer 'Sharp Shooter'. The shooting for the item number will be starting in a couple of days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada