For Quick Alerts
  ALLOW NOTIFICATIONS  
  For Daily Alerts

  ಹಿಂದಿ ನಟನ ಜತೆಗೆ 'ಜಂಗ್ಲಿ ಶಿವಲಿಂಗು' ಎಂದು ಕನ್ನಡ ಹಾಡಿಗೆ ಕುಣಿದ ಐಂದ್ರಿತಾ ರೇ

  |

  ಇತ್ತೀಚೆಗಷ್ಟೇ ಟಿಕ್ ಟಾಕ್‌ಗೆ ಎಂಟ್ರಿ ಕೊಟ್ಟಿದ್ದ ಬೆಡಗಿ ಐಂದ್ರಿತಾ ರೇ, ಮೊದಲ ಪ್ರಯತ್ನದಲ್ಲಿ ಇಂಗ್ಲಿಷ್ ಹಾಡೊಂದಕ್ಕೆ ಮಾದಕವಾಗಿ ನರ್ತಿಸಿ ಗಮನ ಸೆಳೆದಿದ್ದರು. ಐಂದ್ರಿತಾರ ಈ ನೃತ್ಯ ಇನ್‌ಸ್ಟಾಗ್ರಾಂನಲ್ಲಿಯೇ ಒಂದೂವರೆ ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

  ಐಂದ್ರಿತಾರ ಈ ವಿಡಿಯೋವನ್ನು ಅನೇಕರು ಮೆಚ್ಚಿಕೊಂಡು ಇನ್ನಷ್ಟು ಪ್ರಯತ್ನಗಳನ್ನು ಮಾಡಿ ಎಂದು ಬೆಂಬಲಿಸಿದ್ದರು. ಇನ್ನು ಅನೇಕರು ಮೊದಲಿಗೇ ಇಂಗ್ಲಿಷ್ ಹಾಡು ಬೇಕೇ? ನೀವು ಮೊದಲು ನಟಿಸಿದ್ದ ಕನ್ನಡದಲ್ಲಿ. ಕನ್ನಡದ ಹಾಡನ್ನೇ ಮಾಡಬೇಕಿತ್ತು ಎಂದು ಆಕ್ಷೇಪ ಹಾಗೂ ಸಲಹೆ ನೀಡಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದಿರುವ ಐಂದ್ರಿತಾ ಈ ಬಾರಿ ಕನ್ನಡದ ಪ್ರಸಿದ್ಧ ಹಾಡಿಗೆ ನರ್ತಿಸಿದ್ದಾರೆ. ಟಿಕ್‌ಟಾಕ್‌ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದ ವಿಶೇಷವೆಂದರೆ ಐಂದ್ರಿತಾ ಜತೆಗೆ ಹೆಜ್ಜೆ ಹಾಕಿರುವುದು ಹಿಂದಿ ಕಿರುತೆರೆಯ ಪ್ರಸಿದ್ಧ ನಟ ಕರಣವೀರ್ ಬೋಹ್ರಾ.

  ಟಿಕ್‌ಟಾಕ್‌ಗೆ ಬಂದರು ಐಂದ್ರಿತಾ ರೇ: ಮೊದಲ ವಿಡಿಯೋದಲ್ಲೇ ಮಾದಕ ನೃತ್ಯಟಿಕ್‌ಟಾಕ್‌ಗೆ ಬಂದರು ಐಂದ್ರಿತಾ ರೇ: ಮೊದಲ ವಿಡಿಯೋದಲ್ಲೇ ಮಾದಕ ನೃತ್ಯ

  ಅಭಿಮಾನಿಗಳ ಮನವಿಗೆ ಸ್ಪಂದನೆ

  ಅಭಿಮಾನಿಗಳ ಮನವಿಗೆ ಸ್ಪಂದನೆ

  'ಕನ್ನಡದಲ್ಲಿ ಟಿಕ್ ಟಾಕ್ ಮಾಡುವಂತೆ ಅಭಿಮಾನಿಗಳಿಂದ ಮನವಿ ಬಂದಿದ್ದರಿಂದ ನನ್ನದೇ 'ಜಂಗ್ಲಿ' ಸಿನಿಮಾದ ಹಾಡನ್ನು ಏಕೆ ಮಾಡಬಾರದು ಎಂದು ಯೋಚಿಸಿದ್ದೆ. ಕರಣ್ವೀರ್ ಬೋಹ್ರಾ ಅದ್ಭುತವಾಗಿ ನರ್ತಿಸಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಸಲಾಮ್ ಎಂದು ಐಂದ್ರಿತಾ ಹೇಳಿದ್ದಾರೆ.

  ಜಂಗ್ಲಿ ಶಿವಲಿಂಗು ಹಾಡು

  ಐಂದ್ರಿತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ತಮ್ಮ ಎರಡನೆಯ ಟಿಕ್ ಟಾಕ್ ವಿಡಿಯೋದಲ್ಲಿ ದುನಿಯಾ ಸೂರಿ ನಿರ್ದೇಶನದ 2009ರಲ್ಲಿ ತೆರೆ ಕಂಡ 'ಜಂಗ್ಲಿ' ಚಿತ್ರದ 'ಜಂಗ್ಲಿ ಶಿವಲಿಂಗು' ಹಾಡಿಗೆ ನೃತ್ಯ ಮಾಡಿದ್ದಾರೆ. ಇದರಲ್ಲಿ ಕನ್ನಡದ ಸಾಲುಗಳಿಗೆ ಕರಣ್ವೀರ್ ಬೋಹ್ರಾ ಅಷ್ಟೇ ಚೆನ್ನಾಗಿ ತಮ್ಮ ತುಟಿ ಚಲನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  ದಿಗಂತ್ ಜತೆ ಮಾಡಬೇಕಿತ್ತು

  ದಿಗಂತ್ ಜತೆ ಮಾಡಬೇಕಿತ್ತು

  ಹಾಗೆಂದು ಐಂದ್ರಿತಾರ ಈ ವಿಡಿಯೋಗೂ ಆಕ್ಷೇಪ ಹಾಗೂ ತಗಾದೆಗಳು ಬಂದಿಲ್ಲವೆಂದಿಲ್ಲ. ಕನ್ನಡದ ಹಾಡಿಗೆ ಟಿಕ್ ಟಾಕ್ ಮಾಡುವಂತೆ ಅಭಿಮಾನಿಗಳು ಕೋರಿಕೊಂಡರೆ ಮಾತ್ರ ಮಾಡುತ್ತೀರಾ ಎಂದು ಕೆಲವರು ಸಿಟ್ಟು ತೋರಿಸಿದ್ದರೆ, ನೀವು ಬೇರೆಯವರ ಜತೆ ಹೀಗೆ ನರ್ತಿಸಬೇಡಿ, ದಿಗಂತ್ ಜತೆಯೇ ನರ್ತಿಸಿ ಎಂದು ಅನೇಕರು ಬೇಸರ ಹೊರಹಾಕಿದ್ದಾರೆ.

  ಮದುವೆ ನಂತರ ಹೊಸ ಸಿನಿಮಾ ಒಪ್ಪಿಕೊಂಡ ಐಂದ್ರಿತಾ ರೇಮದುವೆ ನಂತರ ಹೊಸ ಸಿನಿಮಾ ಒಪ್ಪಿಕೊಂಡ ಐಂದ್ರಿತಾ ರೇ

  ಯಾರಿದು ಕರಣ್ವೀರ್?

  ಯಾರಿದು ಕರಣ್ವೀರ್?

  ಕರಣ್ವೀರ್ ಬೋಹ್ರಾ ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ. ನಿರ್ಮಾಣ ಹಾಗೂ ವಿನ್ಯಾಸ ಕ್ಷೇತ್ರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಶರಾರಾತ್, ನಾಗಿನ್ 2, ಖುಬೂಲ್ ಹೈ ಮುಂತಾದ ಕಿರುತೆರೆ ಧಾರಾವಾಹಿಗಳು, ಕಿಸ್ಮತ್ ಕನೆಕ್ಷನ್, ಲವ್ ಯೂ ಸೋನಿಯೆ, ಮುಂಬೈ 125 ಕೆಎಂ ಮತ್ತಿತರ ಚಿತ್ರಗಳಲ್ಲಿ ಸಹ ನಟಿಸಿದ್ದಾರೆ. 2018ರಲ್ಲಿ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದರು.

  English summary
  Actress Aindrita Ray has shared a TikTok video of Kannada movie Junglee song Junglee Shivalingu with Hindi actor Karanvir Bohra.
  Friday, March 13, 2020, 11:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X