»   » 'ಕಬಾಲಿ' ನೋಡಲು ಹೋಗಿ 'ಕುರಿ' ಆದ ಕನ್ನಡಿಗರು.!

'ಕಬಾಲಿ' ನೋಡಲು ಹೋಗಿ 'ಕುರಿ' ಆದ ಕನ್ನಡಿಗರು.!

Posted By:
Subscribe to Filmibeat Kannada

ಶತಾಯಗತಾಯ 'ಕಬಾಲಿ' ಚಿತ್ರವನ್ನ ಮೊದಲ ದಿನವೇ ನೋಡಬೇಕು ಅಂತ ಬರೋಬ್ಬರಿ 7,860 ರೂಪಾಯಿ ಕೊಟ್ಟು ವಿಮಾನ ಹತ್ತಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಉಂಡೆನಾಮ ತಿಕ್ಕಿದೆ.

ಎಲ್ಲರಿಗಿಂತ ಸೂಪರ್ ಸ್ಪೆಷಲ್ ಆಗಿ ವಿಮಾನದಲ್ಲಿ ಹೋಗಿ 'ಕಬಾಲಿ' ಸಿನಿಮಾ ನೋಡ್ಕೊಂಡು ಬರ್ತೀವಿ ಅಂತ ಶೋ ಆಫ್ ಮಾಡಿದವರು ಈಗ ನಿರಾಶರಾಗಿ ಕೂರಬೇಕಾಗಿದೆ. ಏರ್ ಏಷ್ಯಾ ವಿರುದ್ಧ ಗಲಾಟೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. [ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

ತಮಿಳುನಾಡಿನ ಮೂಲೆ ಮೂಲೆಯಲ್ಲೂ 'ಕಬಾಲಿ' ಸಂಭ್ರಮ ಮುಗಿಲು ಮುಟ್ಟುತ್ತಿರುವಾಗಲೇ ಸಾವಿರಾರು ರೂಪಾಯಿಗಳನ್ನ ತೆತ್ತು ಚೆನ್ನೈನಲ್ಲಿ ನಮ್ಮ ಬೆಂಗಳೂರಿಗರು ಖಾಲಿ ಕೂರಬೇಕಾಗಿದೆ. ಮುಂದೆ ಓದಿ.....

ಏರ್ ಏಷ್ಯಾ ಮಾಡಿದ ಪ್ಲಾನ್ ಏನು?

ಎಲ್ಲೆಡೆ 'ಕಬಾಲಿ' ಚಿತ್ರದ ಟಿಕೆಟ್ ಗಳಿಗೆ ಡಿಮ್ಯಾಂಡ್ ಹೆಚ್ಚಾದಾಗ ಹೊಸ ಐಡಿಯಾ ಮಾಡಿದ ಏರ್ ಏಷ್ಯಾ ಸಂಸ್ಥೆ 'ಕಬಾಲಿ' ಪೋಸ್ಟರ್ ಅಂಟಿಸಿರುವ ನೂತನ ಫ್ಲೈಟ್ ಹೊರತಂತು.[ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

ಫ್ಲೈಟ್ ನಲ್ಲಿ ಹೋಗಿ ಸಿನಿಮಾ ನೋಡಬಹುದು.!

ಅದೇ ವಿಮಾನದಲ್ಲಿ 'ಕಬಾಲಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುವ ಅಭಿಮಾನಿಗಳನ್ನ ಬೆಂಗಳೂರಿನಿಂದ ಚೆನ್ನೈವರೆಗೆ ಕರೆದುಕೊಂಡು ಹೋಗಿ, ಅಲ್ಲಿ ಸಿನಿಮಾ ತೋರಿಸಿ, ವಾಪಸ್ ಕರೆದುಕೊಂಡು ಬರುವ ವಿಶಿಷ್ಟ ಯೋಜನೆ ಆರಂಭಿಸಿತ್ತು. ಅದಕ್ಕಾಗಿ 7,860 ರೂಪಾಯಿ ದರ ನಿಗದಿ ಪಡಿಸಿತ್ತು. ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

ಸತ್ಯಂ ಸಿನಿಮಾಸ್ ನಲ್ಲಿ ಸಿನಿಮಾ ನೋಡಬೇಕಿತ್ತು.!

ಚೆನ್ನೈನಲ್ಲಿರುವ ಪ್ರತಿಷ್ಟಿತ 'ಸತ್ಯಂ ಸಿನಿಮಾಸ್' ನಲ್ಲಿ 'ಕಬಾಲಿ' ಸಿನಿಮಾ ತೋರಿಸುವುದಾಗಿ ಏರ್ ಏಷ್ಯಾ ಸಂಸ್ಥೆ ರಜನಿ ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿತ್ತು. ['ಕಬಾಲಿ' ರಜನಿಯ ಹುಚ್ಚು ಅಭಿಮಾನಿಗಳ 10 ಮುಖಗಳು!]

ಹೋಗಿದ್ದು ಯಾವುದೋ ಸ್ಟುಡಿಯೋಗೆ.!

ಅದೇ ಆಸೆಯೊಂದಿಗೆ ಇಂದು ಮುಂಜಾನೆ ಫ್ಲೈಟ್ ಹತ್ತಿ ಚೆನ್ನೈಗೆ ಇಳಿದ ಪ್ರೇಕ್ಷಕರು ಸೀದಾ ಹೋಗಿದ್ದು ಪ್ರಸಾದ್ ಸ್ಟುಡಿಯೋಗೆ ಹೊರತು 'ಸತ್ಯಂ ಸಿನಿಮಾಸ್'ಗೆ ಅಲ್ಲ.

ಭುಗಿಲೆದ್ದ ಅಸಮಾಧಾನ

''ಯಾವುದೋ ಸ್ಟುಡಿಯೋದಲ್ಲಿ ಚಿತ್ರ ವೀಕ್ಷಿಸುವುದಕ್ಕೆ ನಾವು 7,860 ರೂಪಾಯಿ ನೀಡ್ಲಿಲ್ಲ. ನಮಗೆ ಹೇಳಿದಂತೆ ಏರ್ ಏಷ್ಯಾ ನಡೆದುಕೊಂಡಿಲ್ಲ'' ಅಂತ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಲದಕ್ಕೆ ರೊಚ್ಚಿಗೆದ್ದಿದ್ದಾರೆ.

ತೋರಿಸ್ತಾರೋ? ಇಲ್ಲವೋ?

ಪ್ರೇಕ್ಷಕರು 'ರೆಬೆಲ್' ಆಗ್ತಿದ್ದ ಹಾಗೆ ಎಚ್ಚೆತ್ತುಕೊಂಡಿರುವ 'ಏರ್ ಏಷ್ಯಾ' ಸಂಸ್ಥೆ ಇಂದು ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ 'ಸತ್ಯಂ ಸಿನಿಮಾಸ್' ನಲ್ಲಿ ಶೋ ಅರೇಂಜ್ ಮಾಡುವುದಾಗಿ ಹೇಳಿಕೊಂಡಿದೆ.

ಅಷ್ಟೊಂದು ದುಡ್ಡು ಕೊಟ್ಟು ಹೋಗ್ಬೇಕಿತ್ತಾ?

ತಮಿಳುನಾಡಿನ ಮೂಲೆ ಮೂಲೆಯಲ್ಲೂ ಕೇವಲ 120 ರೂಪಾಯಿಗಳಿಗೆ 'ಕಬಾಲಿ' ಟಿಕೆಟ್ ಗಳು ಮಾರಾಟವಾಗಿದೆ. ಅಂಥದ್ರಲ್ಲಿ ನಮ್ಮ ಬೆಂಗಳೂರಿಗರು ಏಳು ಸಾವಿರ ಕೊಟ್ಟು ಹೋಗಿದ್ದರೂ, ಸರಿಯಾದ ಸೌಲಭ್ಯ ಸಿಕ್ಕಿಲ್ಲ. ಇದು ಬೇಕಿತ್ತಾ ನಮ್ಮವರಿಗೆ.?

English summary
Air Asia has created a mess of 'Kabali' Flight by trying to change Screening Venue from Sathyam Cinemas to Prasad Studio. Now, Air Asia has promised to take Kabali passengers to the promised destination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada