»   » ಬೆಳ್ಳಿಪರದೆಗೆ ಸರ್ಜಾ ಕುಟುಂಬದ ಮತ್ತೊಂದು ಕುಡಿ

ಬೆಳ್ಳಿಪರದೆಗೆ ಸರ್ಜಾ ಕುಟುಂಬದ ಮತ್ತೊಂದು ಕುಡಿ

By: ಶಂಕರ್, ಚೆನ್ನೈ
Subscribe to Filmibeat Kannada

ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿಪರದೆ ಅಲಂಕರಿಸುತ್ತಿದೆ. ಈಗಾಗಲೆ ಅರ್ಜುನ್ ಸರ್ಜಾ ಅವರ ಸೋದರಳಿಯರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಈಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಎಂಟ್ರಿ ಕೊಡುತ್ತಿದ್ದಾರೆ.

ತಮಿಳಿನ ವಿಶಾಲ್ ಕೃಷ್ಣ ಅವರ ಜೊತೆ ಐಶ್ವರ್ಯಾ ಅವರು ಅಭಿನಯಿಸಲಿದ್ದಾರೆ. ಭೂಪತಿ ಪಾಂಡ್ಯನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ 'ಪಟ್ಟಥು ಯಾನೈ' (ಪಟ್ಟದ ಆನೆ) ಎಂದು ಹೆಸರಿಡಲಾಗಿದೆ. ಈ ಚಿತ್ರದ ನಾಯಕಿ ಐಶ್ವರ್ಯಾ ಅವರ ಲೇಟೆಸ್ಟ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

ಅರ್ಜುನ್ ಸರ್ಜಾ ಹಿರಿಯ ಪುತ್ರಿಯೇ ಐಶ್ವರ್ಯಾ

ಅರ್ಜುನ್ ಸರ್ಜಾ ಅವರಿಗೆ ಇಬ್ಬರು ಪುತ್ರಿಯರು. ಐಶ್ವರ್ಯಾ ಮತ್ತು ಅಂಜನಾ. ಈಗ ಬೆಳ್ಳಿಪರದೆಗೆ ಅಡಿಯಿಡುತ್ತಿರುವ ಐಶ್ವರ್ಯಾ ಹಿರಿಯ ಪುತ್ರಿ.

ಬೆಳದಿಂಗಳ ಬಾಲೆ ಐಶ್ವರ್ಯಾ ಸರ್ಜಾ

ಫೋಟೋ ನೋಡಿದರೇನೇ ಅರ್ಥವಾಗುತ್ತದೆ. ಈಕೆಯದು ಚಿತ್ರರಂಗಕ್ಕೆ ಹೇಳಿ ಮಾಡಿಸಿದ ಮುಖ ಎಂದು. ಎತ್ತರದ ನಿಲುವು, ಸ್ನಿಗ್ಧ ಚೆಲುವು, ಅಪೂರ್ವ ಕೇಶರಾಶಿ...ಇನ್ನೇನು ಬೇಕು ಚಿತ್ರರಸಿಕರ ಮನಸೂರೆಗೊಳ್ಳಲು.

ಐಶ್ವರ್ಯಾ ಅಭಿನಯ ಹೇಗೋ ಏನೋ?

ನೋಡಲೇನೋ ಮಹಾಲಕ್ಷ್ಮಿ ತರಹ ಇದ್ದಾರೆ. ಆದರೆ ಅಭಿನಯ ಹೇಗೋ ಏನೋ ಎಂದು ಕೆಲವರ ಡೌಟು. ಆದರೆ ಈಕೆಯ ರಕ್ತದಲ್ಲೇ ಅಭಿನಯದ ಬೆರೆತಿದೆ. ಜೊತೆಗೆ ಅಭಿನಯದ ಸರಸ್ವತಿ ಕೃಪಾಕಟಾಕ್ಷವೂ ಇದ್ದೇ ಇರುತ್ತದೆ ಬಿಡಿ ಎನ್ನುತ್ತಿದೆ ಚಿತ್ರರಂಗ.

ವಿದ್ಯಾರ್ಥಿನಿಯಾಗಿ ಚೊಚ್ಚಲ ಅಭಿನಯ

ತಮ್ಮ ಚೊಚ್ಚಲ ಚಿತ್ರದಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿಯಾಗಿ ಐಶ್ವರ್ಯಾ ಅರ್ಜುನ್ ಅಭಿನಯಿಸುತ್ತಿದ್ದಾರೆ. ಆಕ್ಷನ್ ಜೊತೆಗೆ ಕಾಮಿಡಿಯೂ ಚಿತ್ರದಲ್ಲಿರುತ್ತದಂತೆ.

ಅಪ್ಪನ ಕಣ್ಣುಗಳು ಅಮ್ಮನ ಮೈಸಿರಿ

ಐಶ್ವರ್ಯಾ ಅವರನ್ನು ನೋಡುತ್ತಿದ್ದರೆ ಅಪ್ಪನ ಕಣ್ಣುಗಳು, ಅಮ್ಮ ನಿವೇದಿತಾ ಅವರ ಮೈಸಿರಿ ಎರಕ ಹೈಯ್ದಂತಿದ್ದಾರೆ. ಐಶ್ವರ್ಯಾ ಅವರ ತಾಯಿ ನಿವೇದಿತಾ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಯಲ್ಲಿ ರಥಸಪ್ತಮಿಯಲ್ಲಿ ಕಾಣಿಸಿಕೊಂಡಿದ್ದರು.


ಇದೇ ಗುರುವಾರ (ಜ.3) ಅರ್ಜುನ್ ಸರ್ಜಾ ಅವರು ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಐಶ್ವರ್ಯಾ ಅವರ ಲೇಟೆಸ್ಟ್ ಫೋಟೋಗಳನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಆ ಫೋಟೋಗಳನ್ನು ಕಾಣಬಹುದು.
English summary
Action King Arjun Sarja's daughter Aishwarya Arjun is all set to make her debut in films. The star kid will be donning grease paint in a Vishal Krishna starrer forthcoming Tamil movie. Pattathu Yaanai is the title of the film and it is directed by Boopathy Pandian.
Please Wait while comments are loading...