For Quick Alerts
  ALLOW NOTIFICATIONS  
  For Daily Alerts

  ಮಗಳ ತಲೆಕೆಡಿಸಿ ಮದುವೆ ಆಗಿರುವ ಹುಚ್ಚ ವೆಂಕಟ್ ವಿರುದ್ಧ ಐಶ್ವರ್ಯ ತಾಯಿ ಕೆಂಡಾಮಂಡಲ.!

  By Harshitha
  |

  'ನಾನು ಮದುವೆ ಆಗಿದ್ದೇನೆ'' - ಇದು ಮೊನ್ನೆ ಮೊನ್ನೆಯಷ್ಟೇ ಸಡನ್ ಆಗಿ ಫೇಸ್ ಬುಕ್ ಲೈವ್ ಗೆ ಬಂದ 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಕೊಟ್ಟ ಬ್ರೇಕಿಂಗ್ ನ್ಯೂಸ್.!

  ತಾವೇ ನಟಿಸಿ, ನಿರ್ದೇಶನ ಮಾಡಿರುವ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿರುವ ಐಶ್ವರ್ಯ ಕುತ್ತಿಗೆಗೆ ಹುಚ್ಚ ವೆಂಕಟ್ ಅರಿಶಿನದ ಕೊಂಬು ಕಟ್ಟಿ ಮದುವೆ ಆಗಿದ್ದಾರೆ.

  ಹುಚ್ಚ ವೆಂಕಟ್ ಅವರೇ ಹೇಳಿಕೊಂಡಿರುವಂತೆ ಕಳೆದ ವಾರ ತಾವು ಮದುವೆ ಆಗಿದ್ದಾರೆ. ಮಡಿಕೇರಿಯ ಹೋಮ್ ಸ್ಟೇ ಒಂದರಲ್ಲಿ ಹುಚ್ಚ ವೆಂಕಟ್ ಹಾಗೂ ಐಶ್ವರ್ಯ ತಂಗಿದ್ದಾರಂತೆ.

  ಈ ವಿಚಾರ ತಿಳಿದು ಯಾರಿಗೆ ಶಾಕ್ ಆಗಿದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, ಐಶ್ವರ್ಯ ಕುಟುಂಬದವರಿಗೆ ಮಾತ್ರ ದೊಡ್ಡ ಆಘಾತ ಆಗಿದೆ. ಮಗಳ ತಲೆಕೆಡಿಸಿ ಹುಚ್ಚ ವೆಂಕಟ್ ಮದುವೆ ಆಗಿದ್ದಾನೆ ಅಂತ ಐಶ್ವರ್ಯ ತಾಯಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿರಿ..

  ಕೋಪಗೊಂಡ ಐಶ್ವರ್ಯ ತಾಯಿ

  ಕೋಪಗೊಂಡ ಐಶ್ವರ್ಯ ತಾಯಿ

  ''ಯಾರನ್ನ ಕೇಳಿ ಹುಚ್ಚ ವೆಂಕಟ್ ಮದುವೆ ಮಾಡಿಕೊಂಡಿದ್ದಾನೆ.? ಐಶ್ವರ್ಯ ಮೊನ್ನೆಯಿಂದ ನನ್ನ ಕೈಗೆ ಸಿಕ್ಕಿಲ್ಲ. ಫೋನ್ ಮಾಡಿದ್ರೆ, ಚೆನ್ನೈನಲ್ಲಿ ಇದ್ದೇನೆ ಅಂತಾಳೆ. ಹುಚ್ಚ ವೆಂಕಟ್ ನನ್ನ ಮಗಳ ತಲೆಕೆಡಿಸಿ ಮದುವೆ ಆಗಿದ್ದಾನೆ'' ಎಂದು ಗರಂ ಆಗಿ ಮಾತನಾಡುತ್ತಾರೆ ಐಶ್ವರ್ಯ ತಾಯಿ.

  ಹುಚ್ಚ ವೆಂಕಟ್ ಮತ್ತೊಂದು ಮದುವೆ: ಕೈಹಿಡಿದ ಪುಣ್ಯಾತ್ಗಿತ್ತಿ ಯಾರು.?ಹುಚ್ಚ ವೆಂಕಟ್ ಮತ್ತೊಂದು ಮದುವೆ: ಕೈಹಿಡಿದ ಪುಣ್ಯಾತ್ಗಿತ್ತಿ ಯಾರು.?

  ದೂರು ಕೊಡಲು ಭಯ

  ದೂರು ಕೊಡಲು ಭಯ

  ''ಹುಚ್ಚ ವೆಂಕಟ್ ವಿರುದ್ಧ ದೂರು ಕೊಡುವುದಕ್ಕೂ ಭಯ ಆಗುತ್ತದೆ'' ಎಂದು ಆತಂಕ ವ್ಯಕ್ತಪಡಿಸುವ ಐಶ್ವರ್ಯ ತಾಯಿ ಮಹಿಳಾ ಆಯೋಗದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

  ಹುಚ್ಚ ವೆಂಕಟ್-ಐಶ್ವರ್ಯ ಮದುವೆ ಆಗಿದ್ದು ಯಾವಾಗ.?

  ಹುಚ್ಚ ವೆಂಕಟ್-ಐಶ್ವರ್ಯ ಮದುವೆ ಆಗಿದ್ದು ಯಾವಾಗ.?

  ''ಕಳೆದ ವಾರ ತಲಕಾವೇರಿಯಲ್ಲಿ ಐಶ್ವರ್ಯ ಎಂಬುವರನ್ನ ನಾನು ಮದುವೆ ಆದೆ. ಅದಾದ್ಮೇಲೆ, ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹೀಗಾಗಿ ಮದುವೆ ಆದ ವಿಷಯವನ್ನ ನಾವು ಮನೆಯವರಿಂದ ಮುಚ್ಚಿಟ್ವಿ'' ಎಂದು ಫೇಸ್ ಬುಕ್ ಲೈವ್ ನಲ್ಲಿ ಹುಚ್ಚ ವೆಂಕಟ್ ಹೇಳಿಕೊಂಡಿದ್ದರು.

  ಲವ್ ಮ್ಯಾರೇಜ್

  ಲವ್ ಮ್ಯಾರೇಜ್

  ''ನಾವು ಪ್ರೀತಿಸಿ ಮದುವೆ ಆಗಿರೋದು. ಮನೆಯಲ್ಲಿ ವಿರೋಧ ಇದೆ. ಐಶ್ವರ್ಯ ಬೇರೆ ಯಾರೂ ಅಲ್ಲ. 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್. ಮದುವೆ ಆದ್ಮೇಲೆ, ಮನೆಯವರ ಆಶೀರ್ವಾದ ತೆಗೆದುಕೊಳ್ಳಲು ಫೋನ್ ಮಾಡಿದಾಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹೀಗಾಗಿ ಮದುವೆ ವಿಷಯ ಹೇಳುವುದು ಬೇಡ ಅಂದುಕೊಂಡ್ವಿ'' ಎಂದಿದ್ದರು ಹುಚ್ಚ ವೆಂಕಟ್.

  ನಮ್ಮಿಬ್ಬರನ್ನೂ ದೂರ ಮಾಡ್ಬೇಡಿ

  ನಮ್ಮಿಬ್ಬರನ್ನೂ ದೂರ ಮಾಡ್ಬೇಡಿ

  ''ಮದುವೆ ಆಗಿ ಇಬ್ಬರೂ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನ ಚೆನ್ನಾಗಿ ನೋಡಿಕೊಳ್ತೀನಿ. ನಾನು ಅವಳನ್ನ ಬಹಳ ಪ್ರೀತಿಸುತ್ತೇನೆ. ಅವಳು ನನ್ನನ್ನ ಪ್ರೀತಿಸುತ್ತಾಳೆ. ನಾವು ತಪ್ಪು ಮಾಡಿಲ್ಲ. ಇಬ್ಬರೂ ಪ್ರೀತಿಸಿ ಮದುವೆ ಆಗಿರೋದು. ನಾವಿಬ್ಬರೂ ಮೇಜರ್. ಬಲವಂತವಾಗಿ ಮದುವೆ ಆಗಿಲ್ಲ. ನಮ್ಮಿಬ್ಬರನ್ನೂ ದೂರ ಮಾಡಬೇಡಿ'' ಎಂದು ಕೇಳಿಕೊಂಡಿದ್ದರು ಹುಚ್ಚ ವೆಂಕಟ್. ಆದ್ರೀಗ ಮದುವೆಗೆ ಐಶ್ವರ್ಯ ತಾಯಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮದುವೆ ಕಥೆ ಎಷ್ಟು ದಿನ ನಡೆಯುತ್ತೋ, ನೋಡಬೇಕು.

  English summary
  Kannada Actor, Director Huccha Venkat married Aishwarya, heroine of 'Dictator Huccha Venkat' film. Now Aishwarya mother is annoyed with Huccha Venkat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X