»   » ಐಶ್ವರ್ಯಾ ರೈ ಮಗಳ ಜೊತೆ ಮಂಗ್ಳೂರಿಗೆ ಬಂದೋದ್ರು!

ಐಶ್ವರ್ಯಾ ರೈ ಮಗಳ ಜೊತೆ ಮಂಗ್ಳೂರಿಗೆ ಬಂದೋದ್ರು!

Posted By:
Subscribe to Filmibeat Kannada

ಬಾಲಿವುಡ್ ನಟಿ, ಕುಡ್ಲದ ಪೊಣ್ಣು (ಮಂಗಳೂರಿನ ಹುಡುಗಿ) ಐಶ್ವರ್ಯಾ ರೈ ಪುತ್ರಿ ಆರಾಧ್ಯ ಜೊತೆ ಸದ್ದಿಲ್ಲದೆ ಮಂಗಳೂರಿಗೆ ಬಂದು ಮುಂಬೈಗೆ ವಾಪಾಸಾಗಿದ್ದಾರೆ. ಸೋದರತ್ತೆಯ ಮೊಮ್ಮಗಳ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಂದೆ ಕೃಷ್ಣರಾಜ ರೈ ಹಾಗೂ ವೃಂದಾ ರೈ ಜೊತೆ ಐಶು ಮಂಗಳೂರಿಗೆ ಆಗಮಿಸಿದ್ದರು.

ನವೆಂಬರ್ 9ಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಅವರು ಸಂಜೆ ಮುಂಬೈಗೆ ವಾಪಾಸಾಗಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಐಶ್ವರ್ಯಾ ರೈ ಅಲ್ಲಿಂದ ನೇರವಾಗಿ ಮಂಗಳೂರಿನ ನವಭಾರತ್ ಸರ್ಕಲ್ ನಲ್ಲಿರುವ ಓಷಿಯನ್ ಪರ್ಲ್ ಹೋಟೆಲ್ ಗೆ ತೆರಳಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ.

Aishwarya Rai visits Mangalore

ಬಳಿಕ ಸೀಮಂತ ಕಾರ್ಯಕ್ರಮ ನಡೆಯುತ್ತಿರುವ ಎಂ.ಜಿ.ರಸ್ತೆಯಲ್ಲಿರುವ ದೀಪಾ ಕಂಫಟ್ರ್ಸ್ ಹೋಟೆಲ್ ಗೆ ಆಗಮಿಸಿದ್ದಾರೆ. ಅಲ್ಲಿ ಕಾರ್ಯಕ್ರಮ ಮುಗಿಸಿದ ಬಳಿಕ ಅತ್ತಾವರದಲ್ಲಿರುವ ಕಾಸ್ತಾ ಗ್ರ್ಯಾಂಡ್ ಫ್ಲ್ಯಾಟ್ ನಲ್ಲಿ ಸಂಬಂಧಿಕರ ಮನೆಗೆ ಭೇಟಿ ನೀಡಿದರು. ಬಳಿಕ ಅಲ್ಲೇ ಸಮೀಪದ ಇನ್ನೊಬ್ಬರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಏರ್‍ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮುಂಬೈಗೆ ವಾಪಾಸಾಗಿದ್ದಾರೆ.

ನ.16ಕ್ಕೆ ಆರಾಧ್ಯ ಬರ್ತ್ ಡೇ: ಇದೇ ನವೆಂಬರ್ 16ರಂದು ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾಗೆ ಮೂರು ವರ್ಷ ತುಂಬುತ್ತಿದೆ. ಇವೆಲ್ಲದರ ನಡುವೆ ಕುಟುಂಬದ ಶುಭ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. [ಹದಿನಾರರ ಪ್ರಾಯಕ್ಕೆ ಐಶ್ವರ್ಯಾ ರೈ ರೀ ಎಂಟ್ರಿ]

ಸೆಲೆಬ್ರಿಟಿ ಎಂಬ ಹಮ್ಮಿಲ್ಲ: ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈಗೆ ಸೆಲೆಬ್ರಿಟಿ ಎಂಬ ಹಮ್ಮಿರಲಿಲ್ಲ. ಐಶೂ ಎಲ್ಲರ ಜೊತೆಗೆ ಮನೆ ಮಗಳಂತೆ ಬೆರೆತರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳು ಆರಾಧ್ಯಾಳ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಮಗಳ ಜೊತೆ ಐಶ್ವರ್ಯಗೆ ಇದು ಮೊದಲ ಮಂಗಳೂರು ಭೇಟಿಯಾಗಿತ್ತು.

ಇದಕ್ಕೂ ಮುನ್ನ ಅಭಿಷೇಕ್ ಬಚ್ಚನ್ ಜೊತೆ ತನ್ನ ತಂದೆಯ ಬರ್ತ್ ಡೇಗೆ ಬಂದಿದ್ದರು. ಆದರೆ ಐಶ್ವರ್ಯಾ ರೈ ಆಗಮನದ ಬಗ್ಗೆ ಮಂಗಳೂರಿನ ಪೊಲೀಸರಿಗೆ ಹಾಗೂ ಮಾಧ್ಯಮಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. (ಕೃಪೆ: ಪಬ್ಲಿಕ್ ಟಿವಿ)

English summary
Big B Amitabh Bachchan bahu Aishwaray Rai Bachchan flew down to her hometown Mangalore (Renamed as Mangaluru) with daughter Aaradhya and her parents, Vrinda Rai and Krishnaraj Rai. The entire family was there to attend a family event.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada