»   » ಬಿಕಿನಿಗೆ ಹೊಂದುವ ಮೈಮಾಟ ನನ್ನಲಿರಲಿಲ್ಲ: ಐಶ್ವರ್ಯಾ ರೈ

ಬಿಕಿನಿಗೆ ಹೊಂದುವ ಮೈಮಾಟ ನನ್ನಲಿರಲಿಲ್ಲ: ಐಶ್ವರ್ಯಾ ರೈ

Posted By:
Subscribe to Filmibeat Kannada

ವಿಶ್ವ ಸುಂದರಿಯರ ಸ್ಪರ್ಧೆಯ ಒಂದು ಭಾಗವಾದ ಬಿಕಿನಿ ಸುತ್ತಿನ ಬಗ್ಗೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಮನದಾಳದ ಮಾತನ್ನಾಡಿದ್ದಾರೆ.

1994ರಲ್ಲಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದಾಗ ನನಗೆ ಬಿಕಿನಿ ಪ್ರದರ್ಶನಕ್ಕೆ ಬೇಕಾಗಿದ್ದ ಸೂಕ್ತ ಮೈಮಾಟವಿರಲಿಲ್ಲ ಎಂದು ಸೌಂದರ್ಯದ ಗಣಿ ಐಶ್ವರ್ಯಾ ರೈ ಅಂದಿನ ಘಟನೆಯ ಮೆಲುಕು ಹಾಕಿದ್ದಾರೆ.

ಶುಕ್ರವಾರ (ಜ 9) ಐಶ್ವರ್ಯಾ ರೈ ಹದಿನೆಂಟು ವರ್ಷದ ಹಿಂದಿನ ಘಟನೆಯ ಬಗ್ಗೆ ಈಗ ಮಾತನಾಡಲು ಕಾರಣ ಇಲ್ಲದಿಲ್ಲ. ವಿಶ್ವಸುಂದರಿ ಸ್ಪರ್ಧೆಯ ಸಂಘಟಕರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿರುವುದರಿಂದ ಐಶ್ವರ್ಯಾ ಈ ಹೇಳಿಕೆ ನೀಡಿದ್ದಾರೆ.

ವಿಶ್ವಸುಂದರಿಯರ ಸ್ಪರ್ಧೆಯಲ್ಲಿ ಈಗಿದ್ದ ಬಿಕಿನಿ ಸುತ್ತನ್ನು ಕೈಬಿಡಲು ಸಂಘಟಕರು ನಿರ್ಧರಿಸಿದ್ದಾರೆ. ಇನ್ನು ಮುಂದೆ ಈ ತುರುಸಿನ ಸ್ಪರ್ಧೆಯಲ್ಲಿ ಬಿಕಿನಿ ಸುತ್ತು ಇರುವುದಿಲ್ಲ ಎಂದು ಸಂಘಟಕರು ಸ್ಪಷ್ಟ ಪಡಿಸಿದ್ದಾರೆ.

ಸಂಘಟಕರ ಈ ನಿರ್ಧಾರದಿಂದ ಉಲ್ಲಸಿತರಾಗಿ ಐಶ್ವರ್ಯಾ ರೈ ಬಚ್ಚನ್ ಬಿಕಿನಿಗೆ ಸೂಕ್ತವಾದ ಮೈಮಾಟ ನನ್ನರಿರಲಿಲ್ಲ ಎಂದು ಹೇಳಿ, ಸಂಘಟಕರ ನಿರ್ಧಾರಕ್ಕೆ ತನ್ನ ಮೆಚ್ಚುಗೆ ಸೂಚಿಸಿದ್ದಾರೆ.

1994ರ ಘಟನೆಯನ್ನು ನೆನೆಸಿಕೊಂಡ ವಿಶ್ವಸುಂದರಿ ಐಶ್ವರ್ಯಾ

1994ರಲ್ಲಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದೆ. ಆಗ ನನಗೆ ಬಿಕಿನಿ ಸ್ಪರ್ಧೆಗೆ ಹೊಂದುವ ಮೈಮಾಟ ನನ್ನಲಿರಲಿಲ್ಲ. ಆದರೂ ನಾನು ಅಂದು ಈ ಸ್ಪರ್ಧೆಯಲ್ಲಿ ವಿಜೇತಳಾಗಿ ದೇಶಕ್ಕೆ ಹೆಸರು ತಂದಿದ್ದೆ - ಐಶ್ವರ್ಯಾ ರೈ.

ಮಹಿಳೆಯರಿಗೆ ಇಷ್ಟವಾಗುವುದಿಲ್ಲ

ಸಾರ್ವಜನಿಕವಾಗಿ ಬಿಕಿನಿ ಪ್ರದರ್ಶಿಸಲು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಯಾರಿಗೂ ಈ ಉಡುಗೆ ಬೇಕಾಗಿಲ್ಲ. ಸಂಘಟಕರ ಈ ನಿರ್ಧಾರ ಎಲ್ಲಾ ಸ್ಪರ್ಧಿಗಳಿಗೆ ಸಂತೋಷ ನೀಡುತ್ತದೆ ಎಂದು ಅಂದು ಕೊಂಡಿದ್ದೇನೆ - ಐಶ್ವರ್ಯಾ ರೈ.

ಕಳೆದ ವಿಶ್ವಸುಂದರಿ ಸ್ಪರ್ಧೆ

ಕಳೆದ ವಿಶ್ವಸುಂದರಿ ಸ್ಪರ್ಧೆ ಅಂದರೆ ಹೋದ ವರ್ಷ ಡಿಸೆಂಬರ್ ತಿಂಗಳಲ್ಲಿ ಸಂಘಟಕಿ ಜುಲಿಯ ಮಾರ್ಲಿ ಬಿಕಿನಿ ಸುತ್ತನ್ನು ಕೈಬಿಟ್ಟಿರುವುದಾಗಿ ಘೋಷಿಸಿದ್ದರು. ಈ ನಿರ್ಧಾರವನ್ನು ಎಲ್ಲಾ ಸ್ಪರ್ಧಿಗಳು ಬಯಸಿದ್ದರು ಎಂದು ಐಶ್ವರ್ಯಾ ರೈ ಮುಂಬೈನಲ್ಲಿ ಹೇಳಿದ್ದಾರೆ.

ಬಿಕಿನಿ ಮಾನದಂಡವಲ್ಲ

ಬಿಕಿನಿ ಸುತ್ತಲ್ಲಿ ಗೆದ್ದರೆ ಮಾತ್ರ ವಿಶ್ವಸುಂದರಿ ಸ್ಪರ್ಧೆ ಗೆಲ್ಲಲು ಸಾಧ್ಯ ಎನ್ನುವ ತಪ್ಪು ಕಲ್ಪನೆ ಜನರಿಗಿದೆ. ಆದರೆ ಅದು ಸತ್ಯವಲ್ಲ. ಬಿಕಿನಿ ಬೇಕಾದ ಮೈಮಾಟ ಇಲ್ಲದಿದ್ದರೂ ನಾನು ಈ ಸ್ಪರ್ಧೆ ಗೆಲ್ಲಲಿಲ್ಲವೇ ಎಂದು ಐಶ್ವರ್ಯಾ ಹೇಳಿದ್ದಾರೆ.

ಇದಾದ ಐದು ವರ್ಷದ ನಂತರ ಬಿಗ್ ಸ್ಕ್ರೀನಿಗೆ

ಈ ಸ್ಪರ್ಧೆ ನಡೆದ ಸುಮಾರು ಮೂರು ವರ್ಷದ ನಂತರ ಐಶ್ವರ್ಯಾ ಚಿತ್ರರಂಗಕ್ಕೆ ಅಡಿಯಿಟ್ಟರು. ಮಣಿರತ್ನಂ ಅವರ ಇರುವರ್ ಚಿತ್ರದ ಮೂಲಕ ಐಶ್ವರ್ಯಾ ಚಿತ್ರರಂಗ ಪ್ರವೇಶಿಸಿದ್ದರು. ಅದೇ ವರ್ಷ ರಾಹುಲ್ ರವಾಲಿ ನಿರ್ದೇಶನದ ಔರ್ ಪ್ಯಾರ್ ಹೋಗಯಾ ಹಿಂದಿ ಚಿತ್ರದ ಮೂಲಕ ಬಾಲಿವುಡ್ ರಂಗಕ್ಕೂ ಪ್ರವೇಶಿಸಿದರು.

English summary
Aishwarya Rai Bachchan happy at dropping the bikini round at Miss World pageant, says it is not a deciding factor to win the crown.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada