»   » ಕನ್ನಡದ ರೀಮೇಕ್ ಚಿತ್ರದಲ್ಲಿ ಮಿಂಚಲಿದ್ದಾರೆ ತೆಲುಗಿನ ಸ್ಟಾರ್ ಹೀರೋ.!

ಕನ್ನಡದ ರೀಮೇಕ್ ಚಿತ್ರದಲ್ಲಿ ಮಿಂಚಲಿದ್ದಾರೆ ತೆಲುಗಿನ ಸ್ಟಾರ್ ಹೀರೋ.!

Posted By:
Subscribe to Filmibeat Kannada

ಪರಭಾಷೆಯ ರೀಮೇಕ್ ಚಿತ್ರಗಳೇ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗುತ್ತಿರುವಾಗ, ಕನ್ನಡದ ಚಿತ್ರವೊಂದು ತೆಲುಗಿಗೆ ರೀಮೇಕ್ ಆಗುತ್ತಿದೆ. ಕನ್ನಡದ ರೀಮೇಕ್ ಚಿತ್ರದಲ್ಲಿ ತೆಲುಗಿನ ಸ್ಟಾರ್ ಹೀರೋ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಅಂದ್ಹಾಗೆ, ತೆಲುಗಿಗೆ ರೀಮೇಕ್ ಆಗುತ್ತಿರುವ ಕನ್ನಡ ಚಿತ್ರ 'ಬಹದ್ದೂರ್'. ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವ ನಟ ಯಾರು ಅಂದ್ರೆ....


ತೆಲುಗಿನಲ್ಲಿ ಕನ್ನಡದ 'ಬಹದ್ದೂರ್'

2014 ರಲ್ಲಿ ತೆರೆಕಂಡು ಅದ್ಭುತ ಯಶಸ್ಸು ಕಂಡ ಧ್ರುವ ಸರ್ಜಾ ಅಭಿನಯದ ಚೇತನ್ ಕುಮಾರ್ ನಿರ್ದೇಶನದ ಚಿತ್ರ 'ಬಹದ್ದೂರ್' ತೆಲುಗಿಗೆ ರೀಮೇಕ್ ಆಗುತ್ತಿದೆ.[ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ]


'ಬಹದ್ದೂರ್' ರೀಮೇಕ್ ನಲ್ಲಿ ರಾಮ್ ಚರಣ್ ತೇಜಾ

'ಬಹದ್ದೂರ್' ರೀಮೇಕ್ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ನಾಯಕನಾಗಿ ಅಭಿನಯಿಸಲಿದ್ದಾರೆ.[ತೆಲುಗು 'ಬಹದ್ದೂರ್' ಆಗಲಿದ್ದಾರಾ ರಾಮ್ ಚರಣ್?]


ಅಲ್ಲು ಅರ್ಜುನ್ ವಾಯ್ಸ್ ಓವರ್

'ಬಹದ್ದೂರ್' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಾಯ್ಸ್ ಓವರ್ ನೀಡಿದ್ದರು. ಈಗ ತೆಲುಗು ವರ್ಷನ್ ನಲ್ಲಿ ಅಲ್ಲು ಅರ್ಜುನ್ ವಾಯ್ಸ್ ಓವರ್ ನೀಡಲಿದ್ದಾರಂತೆ.


'ಬಹದ್ದೂರ್' ಚಿತ್ರವನ್ನ ಮೆಚ್ಚಿದ್ದ ಅಲ್ಲು ಅರವಿಂದ್

2014 ರಲ್ಲಿಯೇ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ 'ಬಹದ್ದೂರ್' ಚಿತ್ರವನ್ನ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ರೀಮೇಕ್ ರೈಟ್ಸ್ ಕೂಡ ಪಡೆದಿದ್ದರು. ಈಗ ಅದೇ ರೀಮೇಕ್ ಚಿತ್ರಕ್ಕೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ.


ಸಂತಸ ವ್ಯಕ್ತಪಡಿಸುವ ಚೇತನ್

''ನನ್ನ ಚೊಚ್ಚಲ ಚಿತ್ರವೇ ತೆಲುಗಿಗೆ ರೀಮೇಕ್ ಆಗುತ್ತಿದೆ. ಅದರಲ್ಲೂ ರಾಮ್ ಚರಣ್ ತೇಜಾ ಹೀರೋ ಆಗಿ ನಟಿಸುತ್ತಿರುವುದನ್ನು ಕೇಳಿ ಖುಷಿ ಅಗಿದೆ'' ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.


'ಭರ್ಜರಿ' ಬಿಡುಗಡೆ ಆಗಬೇಕು

ಚೇತನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ರೆಡಿ ಆಗುತ್ತಿರುವ 'ಭರ್ಜರಿ' ಇದೇ ವರ್ಷ ಬಿಡುಗಡೆ ಆಗಲಿದೆ.[ಧ್ರುವ ಸರ್ಜಾ ಜನ್ಮದಿನಕ್ಕೆ ಸಿಕ್ಕ 'ಭರ್ಜರಿ' ಉಡುಗೊರೆ ಇದು.!]


English summary
Telugu Actor Ram Charan Teja to star in Telugu Remake of Kannada Movie 'Bahaddur'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada