»   » ಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳು

ಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳು

Posted By:
Subscribe to Filmibeat Kannada
Upendra Daughter, Aishwarya Upendra to make a Sandalwood Debut

ನಟ ಉಪೇಂದ್ರ ಅವರ ಪುತ್ರಿ ಐಶ್ವರ್ಯ ಉಪೇಂದ್ರ ಈಗ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ತಂದೆ ಉಪೇಂದ್ರ ಮತ್ತು ತಾಯಿ ಪ್ರಿಯಾಂಕಾ ಉಪೇಂದ್ರ ಅವರ ರೀತಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಐಶ್ವರ್ಯ ಸಿದ್ಧವಾಗಿದ್ದಾರೆ.

ಸದ್ಯ, ಉಪೇಂದ್ರ ಸಿನಿಮಾದಿಂದ ದೂರವಾಗಿ ಪ್ರಜಾಕೀಯದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ, ಉಪ್ಪಿ ಮಗಳು ಬಿಗ್ ಸ್ಕ್ರೀನ್ ಮೇಲೆ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರ ಹೊಸ ಸಿನಿಮಾದಲ್ಲಿ ಐಶ್ವರ್ಯ ನಟಿಸಲಿದ್ದಾರೆ.

ಉಪೇಂದ್ರ ಮುದ್ದಿನ ಮಗಳಿಗೆ ನಾಯಿ ಕಂಡರೆ ಸಖತ್ ಲವ್

ಅಂದ್ಹಾಗೆ, ಐಶ್ವರ್ಯ ಉಪೇಂದ್ರ ನಟಿಸುತ್ತಿರುವ ಆ ಹೊಸ ಚಿತ್ರದ ಕೆಲವೊಂದು ಮಾಹಿತಿ ಮುಂದಿದೆ ಓದಿ...

ಚಿತ್ರರಂಗಕ್ಕೆ ಉಪ್ಪಿ ಮಗಳ ಎಂಟ್ರಿ

ನಟ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ನಟನೆಯ ಹೊಸ ಚಿತ್ರ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ನಟಿಸಲಿದ್ದಾರೆ.

ಪಾತ್ರ ಏನು..?

'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ನಟಿಸುವುದು ಪಕ್ಕಾ ಆಗಿದ್ದು, ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ. ಆದರೆ ಚಿತ್ರದಲ್ಲಿ ಐಶ್ವರ್ಯ ಒಂದು ಒಳ್ಳೆಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

'ಮಮ್ಮಿ' ನಿರ್ದೇಶಕ

ಈ ಹಿಂದೆ ಪ್ರಿಯಾಂಕ ಉಪೇಂದ್ರ ಅವರ ಜೊತೆ 'ಮಮ್ಮಿ' ಸಿನಿಮಾವನ್ನು ಮಾಡಿದ್ದ ಲೋಹಿತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ.

ಹಿಂದೆಯೇ ಆಫರ್ ಬಂದಿತ್ತು

ಈ ಹಿಂದೆಯೇ 'ಮಮ್ಮಿ' ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಮಗಳ ಪಾತ್ರದಲ್ಲಿ ಐಶ್ವರ್ಯ ನಟಿಸಬೇಕಾಗಿತ್ತು. ಆದರೆ ಕೊನೆಗೆ ಚಿತ್ರದ ಆ ಪಾತ್ರದಲ್ಲಿ ಯುವಿನಾ ಅಭಿನಯಿಸಿದ್ದರು.

ನಾಯಿ ಅಂದರೆ ಸಖತ್ ಲವ್

ಐಶ್ವರ್ಯ ಉಪೇಂದ್ರ ಶ್ವಾನ ಪ್ರಿಯೆ. ಉಪೇಂದ್ರ ಮನೆಯಲ್ಲಿ ನಾಲ್ಕು ನಾಯಿಗಳಿದ್ದು, ಅವುಗಳನ್ನು ಕಂಡರೆ ಪುಟ್ಟ ಹುಡುಗಿ ಐಶ್ವರ್ಯಗೆ ಸಖತ್ ಲವ್. ಹಾಗೆ ನೋಡಿದರೆ ಐಶ್ವರ್ಯ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಆಕೆಗಿಂತ ಆಕೆಯ ನಾಯಿಗಳ ಫೋಟೋಗಳೇ ಹೆಚ್ಚಿವೆ.!

ಉಪ್ಪಿ ಅಣ್ಣನ ಮಗ

ಉಪೇಂದ್ರ ಅಣ್ಣ ಸುದೀಂದ್ರ ಅವರ ಪುತ್ರ ನಿರಂಜನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾಂಕ ಉಪೇಂದ್ರ ನಟನೆಯ 'ಸೆಕೆಂಡ್ ಆಫ್' ಚಿತ್ರದ ಮೂಲಕ ಮೊದಲ ಬಾರಿಗೆ ನಿರಂಜನ್ ಬಣ್ಣ ಹಚ್ಚಿದ್ದಾರೆ.

English summary
Actor Upendra daughter Aishwarya Upendra to make Sandalwood Debut through Kannada Movie 'Howrah Bridge' directed by Lohith NK.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada