»   » ಲಿಂಗಾ ದಾಖಲೆ ಪಕ್ಕಕ್ಕೆ ಸರಿಸಿದ ಅಜಿತ್ ಟೀಸರ್

ಲಿಂಗಾ ದಾಖಲೆ ಪಕ್ಕಕ್ಕೆ ಸರಿಸಿದ ಅಜಿತ್ ಟೀಸರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ', ವಿಕ್ರಮ್ ನಟನೆಯ 'ಐ' ಹಾಗೂ ಇತ್ತೀಚಿಗೆ ಯಶಸ್ವಿ ಕಂಡ ವಿಜಯ್ ಅವರ 'ಕತ್ತಿ' ಚಿತ್ರದ ದಾಖಲೆಯನ್ನು ಅಜಿತ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರದ ಟೀಸರ್ ಧೂಳಿಪಟ ಮಾಡಿದೆ.

ಅಜಿತ್ ಅವರ ಯೆನ್ನೈ ಅರಿಂದಾಳ್ ಚಿತ್ರದ ಟೀಸರ್ 48 ಗಂಟೆಗಳಲ್ಲಿ 2 ಮಿಲಿಯನ್ ಹಿಟ್ಸ್ ಪಡೆದುಕೊಂಡು ಹೊಸ ದಾಖಲೆ ಬರೆದಿದೆ. ಜೊತೆಗೆ ಟೀಸರ್ ಗೆ ಸಿಕ್ಕಿರುವ ಲೈಕ್ಸ್ ಗಳು ಕೂಡಾ ಹೊಸ ಇತಿಹಾಸ ಸೃಷ್ಟಿಸಿದೆ.

ಎ.ಎಂ ರತ್ನಂ ನಿರ್ಮಾಣದ ಯೆನ್ನೈ ಅರಿದಾಂಳ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಅವರ ಜೊತೆಗೆ ತ್ರೀಷಾ ಕೃಷ್ಣನ್, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

Ajith-starrer ‘Yennai Arindhaal’ teaser creates new record

ಗೌತಮ್ ಮೆನನ್ ಹಾಗೂ ಸಂಗೀತ ನಿರ್ದೇಶಕ ಹ್ಯಾರೀಸ್ ಜಯರಾಜ್ ಜೋಡಿ ಮತ್ತೊಮ್ಮೆ ಒಂದಾಗಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ವಾರಣಂ ಆರಿಯಂ ನಂತರ ಮತ್ತೊಮ್ಮೆ ಈ ಯಶಸ್ವಿ ಜೋಡಿ ಒಂದಾಗಿ ಕೆಲಸ ಮಾಡುತ್ತಿದೆ.

ಹೊಸ ದಾಖಲೆ: ಸೋನಿ ಮ್ಯೂಸಿಕ್ ಹೊರತಂದಿರುವ ಈ ಟೀಸರ್ ಯೂಟ್ಯೂಬ್ ನಲ್ಲಿ ಈ ಸಮಯಕ್ಕೆ 2,575,097ವೀಕ್ಷಣೆ,62,208 ಲೈಕ್ಸ್ ಜೊತೆಗೆ 3769 ಡಿಸ್ ಲೈಕ್ಸ್ ಕೂಡಾ ಪಡೆದುಕೊಂಡಿದೆ.ಟೀಸರ್ ನೋಡಿದ ಅಭಿಮಾನಿಗಳು ಇತರೆ ಚಿತ್ರದೊಡನೆ ಅಜಿತ್ ಚಿತ್ರದ ಜನಪ್ರಿಯತೆಯನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ.

* ಬ್ಯಾಂಗ್ ಬ್ಯಾಂಗ್: 61,420 ಲೈಕ್ಸ್, 15M ವೀಕ್ಷಣೆ ಪಡೆಯಲು 5 ತಿಂಗಳು ಬೇಕಾಯಿತು.
* ಯೆನೈ ಅರಿಂದಾಳ್ ಚಿತ್ರ 62,208 ಪ್ಲಸ್ ಲೈಕ್ಸ್ 58 ಗಂಟೆಗಳಲ್ಲಿ, 2.5 ಮಿಲಿಯನ್ ವೀಕ್ಷಣೆ
* ಧೂಮ್ 3 : 55759 ಲೈಕ್ಸ್ 16 ಮಿಲಿಯನ್ ವೀಕ್ಷಣೆಗೆ 15 ತಿಂಗಳು ಬೇಕಾಯಿತು.

* ಲಿಂಗಾ ಟೀಸರ್ 19,000 ಲೈಕ್ಸ್, 32 ದಿನ
* ಕತ್ತಿ ಚಿತ್ರದ ಟೀಸರ್ 32,000 ಲೈಕ್ಸ್, 2 ತಿಂಗಳು
* ಅಂಜಾನ್ ಟೀಸರ್ 18,000 ಲೈಕ್ಸ್ 6 ತಿಂಗಳು
* ಚಿತ್ರದ ಟೀಸರ್ 41,234 ಲೈಕ್ಸ್ 3 ತಿಂಗಳು

English summary
The teaser of the Ajith-starrer Yennai Arindhaal has recorded over 2.5 million hits in 58 hours making it the highest for any South Indian film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada