ತಮಿಳಿನಿಂದ ಡಬ್ ಆಗಿರುವ ಚಿತ್ರ ಸತ್ಯದೇವ್ IPS ಸಾಂಗ್
ಗೌತಮ್ ವಾಸುದೇವ ಮೆನನ್ ಬರೆದು, ನಿರ್ದೇಶಿಸಿ, ಅಜಿತ್, ಅನುಷ್ಕಾ ಶೆಟ್ಟಿ, ತ್ರೀಶಾ ಅಭಿನಯಿಸಿದ್ದ 'ಯೆನ್ನೈ ಅರಿಂಧಾಳ್' ಚಿತ್ರ ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಎಂಟ್ರಿ ಪಡೆದುಕೊಂಡಿದೆ. ಜನವರಿ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದ
ನೋವಿನ ಬಾಳಿಂದ ಬೇಸರ ಕಳಿಸೋಣ
ನಗುವಿನ ನಂದನವಾ ಹುಡುಕಿ ಸಾಗೋಣ
ಬಾನಿನ ಅಂಚಲೀ ಹಾರುತ ನಲಿಯೋಣ
ಬಯಸಿದ ಭಾಗ್ಯವನೂ ಬಾಚಿಕೊಳ್ಳೋಣ
ಬಾಳಿನ ಬಾಂದಳಕೆ ಹುಣ್ಣಿಮೆ ಚಂದ್ರಮನ
ತಂಪಿನ ತಂಬೆಲರ ತುಂಬಿಕೊಳ್ಳೋಣ
ಉಸಿರಿನ ಬಸಿರಲ್ಲಿ ಸಂತಸ ಸಂಭ್ರಮದ
ಬದುಕಿನ ಪ್ರೀತಿ ಪದವ ಹಾಡಿಕೊಳ್ಳೋಣ
ಈ ಭೂಮಿ ಬುಗುರಿ ಮೇಲೆ ಅವನಾಟ ನಿಲ್ಲೋದಿಲ್ಲ
ನಾವು ಬಯಸಿದಂತೆ ಎಂದೂ ಈ ಬಾಳು ಸಾಗೋದಿಲ್ಲ....

ಇದು ತಮಿಳಿನಿಂದ ಡಬ್ ಮಾಡಲಾದ ಸತ್ಯದೇವ್ IPS ಚಿತ್ರದ ಹಾಡಿನ ಸಾಲುಗಳು... ಜೀನಾ ಜೀನಾ ಯಹಾ.. ಮರನಾ ಮರನಾ ಯಹಾ, ಜಿಯಾ ತೇರೆ ಜಿಯಾ ಮೇರೆ ಅನ್ನೋ ಕನ್ನಡ ಹಾಡುಗಳಿಗಿಂತ ಕೋಟಿಪಾಲು ಕನ್ನಡದ ಸಾಹಿತ್ಯವಿದೆ.. ಉತ್ತಮವಾಗಿಯೂ ಇದೆ..
ಇನ್ನಾದರೂ 'ಡಬ್ಬಿಂಗ್ ಬಂದರೆ ಭಾಷೆ ಹಾಳಾಗುತ್ತದೆ' ಅನ್ನೋರ ಕಣ್ತೆರೆದೀತೆ? ಅಂದಹಾಗೆ ಸತ್ಯದೇವ್ IPS ಚಿತ್ರದ ಅಷ್ಟೂ ಹಾಡುಗಳನ್ನು ಹಾಡಿರೋದು ಕನ್ನಡಿಗರೇ... ನೀವೊಮ್ಮೆ ಕೇಳಿ.. - ಆನಂದ್ ಗುರು ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಗೌತಮ್ ವಾಸುದೇವ ಮೆನನ್ ಬರೆದು, ನಿರ್ದೇಶಿಸಿ, ಅಜಿತ್, ಅನುಷ್ಕಾ ಶೆಟ್ಟಿ, ತ್ರೀಶಾ ಅಭಿನಯಿಸಿದ್ದ 'ಯೆನ್ನೈ ಅರಿಂಧಾಳ್' ಚಿತ್ರ ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಹ್ಯಾರೀಸ್ ಜಯರಾಜ್ ಕೂಡಾ ಉತ್ತಮ ಸಂಗೀತ ನೀಡುವ ಮೂಲಕ ರೀ ಎಂಟ್ರಿ ಪಡೆದುಕೊಂಡಿದ್ದರು. ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಎಂಟ್ರಿ ಪಡೆದುಕೊಂಡಿದೆ. ಜನವರಿ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











