ಶ್ರೀ ರಾಮಕೃಷ್ಣ ಪರಮಹಂಸರಾಗಿ ನಟ ನಾಗಾರ್ಜುನ
ಇದೀಗ ಅವರು ಸ್ವಾಮಿ ವಿವೇಕಾನಂದರ ಗುರು ಹಾಗೂ 19ನೇ ಶತಮಾನದಲ್ಲಿ ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಶ್ರಮಿಸಿದ ಶ್ರೀ ರಾಮಕೃಷ್ಣ ಪರಮಹಂಸರ ಪಾತ್ರವನ್ನು ಪೋಷಿಸಲು ಮುಂದಾಗಿದ್ದಾರೆ. ತೆಲುಗಿನಲ್ಲಿ 'ಶಿರಡಿ ಸಾಯಿ' ಚಿತ್ರವನ್ನು ನಿರ್ಮಿಸಿದ್ದ ಮಹೇಶ್ವರ ರೆಡ್ಡಿ ಅವರೇ ಪರಮಹಂಸ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.
ಸಾಮಾನ್ಯವಾಗಿ ಭಕ್ತಿ ಪ್ರಧಾನ ಪಾತ್ರಗಳನ್ನು ಪೋಷಿಸುವುವುದು ಹಾಗೂ ಅದರಲ್ಲಿ ಯಶಸ್ಸು ಕಾಣುವುದು ಇಂದಿನ ಜಮಾನಾ ನಟರಿಗೆ ಕಷ್ಟಸಾಧ್ಯವಾದ ಕೆಲಸ. ಆದರೆ ನಟ ನಾಗಾರ್ಜುನ ಮಾತ್ರ ಈ ರೀತಿಯ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸುತ್ತಾ ಯಶಸ್ಸಿನ ತುತ್ತತುದಿಯನ್ನು ತಲುಪಿದ್ದಾರೆ. ಪ್ರೇಕ್ಷಕರನ್ನೂ ಮಂತ್ರಮುಗ್ಧಗೊಳಿಸಿದ್ದಾರೆ.
ಪರಮಹಂಸರ ಇನ್ನೂ ಚಿತ್ರದ ಕಥೆ ಸಿದ್ಧವಾಗಿಲ್ಲ. ಈ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಭಕ್ತಿ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ತೆಲುಗಿನ ಕೆ ರಾಘವೇಂದ್ರ ರಾವ್ ಅಥವಾ ಕೋಡಿ ರಾಮಕೃಷ್ಣ ಅವರಿಗೆ ನೀಡುವ ಸಾಧ್ಯತೆಗಳಿವೆ.
ಅದ್ವೈತ ಸಿದ್ಧಾಂತದ ಪ್ರತಿಪಾದಿಸಿದ ಶ್ರೀ ರಾಮಕೃಷ್ಣ ಪರಮಹಂಸರು ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ಪರಮಹಂಸರು ಕಾಳಿಯ ಆರಾಧಕರಾಗಿದ್ದರು.
ಇಂತಹ ಮಹಾನ್ ಚೇತನವನ್ನು ಸಿನೆಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ತರುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಈ ರೀತಿಯ ಭಕ್ತಿ ಪ್ರಧಾನ ಚಿತ್ರಗಳು ಕನ್ನಡದಲ್ಲೂ ಬರುವಂತಾಗಲಿ ಎಂದು ಆಶಿಸೋಣ.


Click it and Unblock the Notifications












