For Quick Alerts
  ALLOW NOTIFICATIONS  
  For Daily Alerts

  ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?

  By Harshitha
  |

  ನಟಿ ಅಮಲಾ ಪೌಲ್ ಸಂಸಾರ ಸರಿಗಮ ತಾಳ ತಪ್ಪಿರುವ ಬಗ್ಗೆ ತಮಿಳು ಸಿನಿ ಅಂಗಳದಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಮದುವೆ ಆದ ಎರಡೇ ವರ್ಷಗಳಲ್ಲಿ ಎ.ಎಲ್.ವಿಜಯ್ ಹಾಗೂ ಅಮಲಾ ಪೌಲ್ ದಾಂಪತ್ಯ, ವಿಚ್ಛೇದನ ನೀಡುವ ಹಂತಕ್ಕೆ ಬಂದು ನಿಂತಿದೆ.

  ಮದುವೆಗೂ ಮುನ್ನ ಮೂರು ವರ್ಷಗಳ ಕಾಲ ಪ್ರೀತಿ-ಪ್ರೇಮ ಅಂತ ಎಲ್ಲೆಡೆ ಕೈಕೈ ಹಿಡಿದುಕೊಂಡು ಓಡಾಡಿದ್ದ ಈ ಜೋಡಿ ಹಕ್ಕಿಗಳ ಮಧ್ಯೆ ಇದೀಗ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. [ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

  ಹಾಗಂತ ಇದು ಜಸ್ಟ್ ಅಂತೆ-ಕಂತೆ ಸುದ್ದಿ ಅಲ್ಲ. ವಿರಸ ಮೂಡಿರುವುದು ನಿಜ ಅಂತ ಖುದ್ದು ನಿರ್ದೇಶಕ ಎ.ಎಲ್.ವಿಜಯ್ ಒಪ್ಪಿಕೊಂಡಿದ್ದಾರೆ. ಅಲ್ಲದೇ, ತಮ್ಮ ತಂದೆ-ತಾಯಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಮುಂದೆ ಓದಿ....

  ವಿಜಯ್ ತಂದೆ-ತಾಯಿ ಏನು ಹೇಳುತ್ತಾರೆ.?

  ವಿಜಯ್ ತಂದೆ-ತಾಯಿ ಏನು ಹೇಳುತ್ತಾರೆ.?

  ಎ.ಎಲ್.ವಿಜಯ್ ಹಾಗೂ ಅಮಲಾ ಪೌಲ್ ನಡುವೆ ಮೂಡಿರುವ ಮನಸ್ತಾಪದ ಕುರಿತು ತಮಿಳು ವಾಹಿನಿಗಳು ವಿಜಯ್ ರವರ ತಂದೆ ಅಳಗಪ್ಪನ್ ರವರನ್ನ ಸಂಪರ್ಕಿಸಿದಾಗ ಸೊಸೆ ಅಮಲಾ ಪೌಲ್ ವಿರುದ್ಧ ಕಿಡಿ ಕಾರಿದ್ದಾರೆ. [ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್]

  ಅಳಗಪ್ಪನ್ ಏನಂತಾರೆ.?

  ಅಳಗಪ್ಪನ್ ಏನಂತಾರೆ.?

  ''ನನ್ನ ಮಗ ವಿಜಯ್ ಮತ್ತು ಅಮಲಾ ಪೌಲ್ ವಿಚ್ಛೇದನ ಪಡೆಯಲು ಮುಂದಾಗಿರುವ ಸುದ್ದಿ 100% ನಿಜ'' ಅಂತ ತಮಿಳು ವಾಹಿನಿಯೊಂದಕ್ಕೆ ಎ.ಎಲ್.ವಿಜಯ್ ರವರ ತಂದೆ ಅಳಗಪ್ಪನ್ ಸ್ಪಷ್ಟಪಡಿಸಿದ್ದಾರೆ. [ಕೊಚ್ಚಿಯಲ್ಲಿ ಸರಳವಾಗಿ ಅಮಲಾ ಪೌಲ್ ನಿಶ್ಚಿತಾರ್ಥ]

  ಮನಸ್ತಾಪಕ್ಕೆ ಕಾರಣ ಏನು.?

  ಮನಸ್ತಾಪಕ್ಕೆ ಕಾರಣ ಏನು.?

  ''ಮದುವೆ ಆದ ನಂತರ ಅಮಲಾ ಹೆಚ್ಚು ಸಿನಿಮಾಗಳನ್ನ ಒಪ್ಪಿಕೊಂಡರು. ಇದರಿಂದ ಕುಟುಂಬದಲ್ಲಿ ಮನಸ್ತಾಪ ಶುರು ಆಯ್ತು. ವಿಜಯ್ ಗೂ ಇದು ಇಷ್ಟವಾಗಲಿಲ್ಲ'' - ಅಳಗಪ್ಪನ್, ಎ.ಎಲ್.ವಿಜಯ್ ರವರ ತಂದೆ.

  ಮಾತು ತಪ್ಪಿದ ಅಮಲಾ

  ಮಾತು ತಪ್ಪಿದ ಅಮಲಾ

  ''ಕುಟುಂಬದ ಬಗ್ಗೆ ಅಮಲಾ ಹೆಚ್ಚು ಗಮನ ಹರಿಸಬೇಕು ಎಂಬುದು ವಿಜಯ್ ಬಯಕೆ ಆಗಿತ್ತು. ಆದ್ರೆ, ಅದಕ್ಕೆ ಅಮಲಾ ರೆಡಿ ಇರ್ಲಿಲ್ಲ. ಇದೇ ವಿಚಾರದ ಕುರಿತಾಗಿ ವಾಗ್ವಾದ ಆದ ನಂತರ ಹೆಚ್ಚು ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ ಅಂತ ಅಮಲಾ ಹೇಳಿದ್ದರು. ಆದ್ರೆ, ಮಾತನ್ನ ತಪ್ಪಿ 'ವಡ ಚೆನ್ನೈ' ಸಿನಿಮಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಮೂರು ವರ್ಷ ಕಾಲ್ ಶೀಟ್ ಕೂಡ ನೀಡಿದ್ದಾರೆ'' - ಅಳಗಪ್ಪನ್, ಎ.ಎಲ್.ವಿಜಯ್ ರವರ ತಂದೆ. [ಕಂದಮ್ಮನ ನಿರೀಕ್ಷೆಯಲ್ಲಿ ತಾರೆ ಅಮಲಾ ಪೌಲ್?]

  ತಂದೆ-ತಾಯಿ ಮಾತನ್ನೂ ಕೇಳುತ್ತಿಲ್ಲ.!

  ತಂದೆ-ತಾಯಿ ಮಾತನ್ನೂ ಕೇಳುತ್ತಿಲ್ಲ.!

  ''ಹೆತ್ತ ತಂದೆ-ತಾಯಿ ಮಾತನ್ನ ಕೇಳುವುದಕ್ಕೂ ಅಮಲಾ ರೆಡಿ ಇಲ್ಲ. ಸದ್ಯಕ್ಕೆ ವಿಜಯ್-ಅಮಲಾ ನಿರ್ಧಾರ ಏನು ಎಂಬುದು ನನಗೆ ಗೊತ್ತಿಲ್ಲ. ಆದ್ರೆ ನಮಗೆ ನಮ್ಮ ಮಗ ಮುಖ್ಯ. ಆತನ ನೆಮ್ಮದಿ ಮುಖ್ಯ'' - ಅಳಗಪ್ಪನ್, ಎ.ಎಲ್.ವಿಜಯ್ ರವರ ತಂದೆ.

  ಅಮಲಾ ಏನು ಹೇಳ್ತಾರೆ.?

  ಅಮಲಾ ಏನು ಹೇಳ್ತಾರೆ.?

  ತಮ್ಮ ವಿರುದ್ಧ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದರೂ, ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಗೋಜಿಗೆ ಅಮಲಾ ಪೌಲ್ ಹೋಗಿಲ್ಲ.

  ಅಳಗಪ್ಪನ್ ಹಿನ್ನಲೆ....

  ಅಳಗಪ್ಪನ್ ಹಿನ್ನಲೆ....

  ಅಮಲಾ ಪೌಲ್ ಮಾವ, ಎ.ಎಲ್.ವಿಜಯ್ ರವರ ತಂದೆ ಎ.ಎಲ್.ಅಳಗಪ್ಪನ್ ತಮಿಳು ಚಿತ್ರಗಳ ನಿರ್ಮಾಪಕ.

  ಎ.ಎಲ್.ವಿಜಯ್-ಅಮಲಾ ಮದುವೆ

  ಎ.ಎಲ್.ವಿಜಯ್-ಅಮಲಾ ಮದುವೆ

  'ದೈವ ತಿರುಮಗಳ್' ಚಿತ್ರದ ಶೂಟಿಂಗ್ ವೇಳೆ ವಿಜಯ್ ಹಾಗೂ ಅಮಲಾ ಲವ್ ಸ್ಟೋರಿ ಶುರು ಆಗಿದ್ದು. ಮೂರು ವರ್ಷಗಳ ಡೇಟಿಂಗ್ ನಂತರ 2014, ಜೂನ್ 12 ರಂದು ಈ ಜೋಡಿ ಮದುವೆ ಆದರು.

  English summary
  Kollywood Actress Amala Paul and Director AL Vijay, the much-celebrated star couple is on the verge of divorce. In the recent interview given to a Tamil media, Vijay's father AL Alagappan heavily thrashed Amala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X