twitter
    For Quick Alerts
    ALLOW NOTIFICATIONS  
    For Daily Alerts

    '6ನೇ ಮೈಲಿ' ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು.!

    By Harshitha
    |

    ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ '6ನೇ ಮೈಲಿ' ಸಿನಿಮಾ ನಾಳೆ (ಜುಲೈ 6) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ '6ನೇ ಮೈಲಿ' ಟ್ರೈಲರ್ ಈಗಾಗಲೇ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ. ಇನ್ನೇನಿದ್ದರೂ, ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗುವುದೊಂದು ಬಾಕಿ ಇದೆ.

    '6ನೇ ಮೈಲಿ' ಚಿತ್ರವನ್ನ ಜನ ಮೆಚ್ಚಿಕೊಂಡರೆ, ಚಿತ್ರದಿಂದ ಬರುವ ದುಡ್ಡನ್ನ ಸಾಮಾಜಿಕ ಕಾರ್ಯಗಳಲ್ಲಿ ಬಳಸಿಕೊಳ್ಳಲು ನಿರ್ಮಾಪಕ ಡಾ.ಶೈಲೇಶ್ ಕುಮಾರ್ ತೀರ್ಮಾನಿಸಿದ್ದಾರೆ.

    ಅಷ್ಟಕ್ಕೂ, '6ನೇ ಮೈಲಿ' ಸಿನಿಮಾ ಡಾ.ಶೈಲೇಶ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನ ಕೊಡಬೇಕು ಎಂಬ ಪ್ಯಾಶನ್ ಇಟ್ಟುಕೊಂಡು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ ನಿರ್ಮಾಪಕ ಡಾ.ಶೈಲೇಶ್ ಕುಮಾರ್. ಮುಂದೆ ಓದಿರಿ...

    ವೃತ್ತಿಯಲ್ಲಿ ವೈದ್ಯರು

    ವೃತ್ತಿಯಲ್ಲಿ ವೈದ್ಯರು

    ಡಾ.ಬಿ.ಎಸ್.ಶೈಲೇಶ್ ಕುಮಾರ್ ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನವರು. ಬೆಂಗಳೂರಿನಲ್ಲಿ ಓದು ಮುಗಿಸಿ, ಬೆಳಗಾವಿಯಲ್ಲಿ ಎಂ.ಬಿ.ಬಿ.ಎಸ್ ಮಾಡಿರುವ ಡಾ.ಬಿ.ಎಸ್.ಶೈಲೇಶ್ ಕುಮಾರ್ ನ್ಯೂರೋ ಸರ್ಜನ್.

    '6ನೇ ಮೈಲಿ' ಚಿತ್ರಕ್ಕಿದೆ '6'ರ ನಂಟು: ಹೀಗೂ ಉಂಟು.!'6ನೇ ಮೈಲಿ' ಚಿತ್ರಕ್ಕಿದೆ '6'ರ ನಂಟು: ಹೀಗೂ ಉಂಟು.!

    ಸ್ವಂತ ಆಸ್ಪತ್ರೆ ನಿರ್ಮಾಣ

    ಸ್ವಂತ ಆಸ್ಪತ್ರೆ ನಿರ್ಮಾಣ

    ಡಾ.ಶೈಲೇಜ್ ಕುಮಾರ್ ಫೌಂಡೇಶನ್ ಎಂಬ ಎನ್.ಜಿ.ಓ ಮೂಲಕ ಸದ್ಯ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಹೊರಟಿದ್ದಾರೆ. 18 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ಡಾ.ಶೈಲೇಶ್ ಕುಮಾರ್, 200 ಕ್ಕೂ ಹೆಚ್ಚು ಮೆಡಿಕಲ್ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದಾರೆ. ಬ್ರೇನ್ ಟೂಮರ್ ಸೇರಿದಂತೆ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿದ್ದ 45ಕ್ಕೂ ಹೆಚ್ಚು ಪೇಷೆಂಟ್ ಗಳನ್ನು ಏರ್ ಲಿಫ್ಟ್ ಮಾಡಿದ್ದಾರೆ. ಹರಿಹರ ತಾಲೂಕಿನಲ್ಲಿ ಫ್ರೀ ಮೊಬೈಲ್ ಆಂಬ್ಯುಲೆನ್ಸ್ ಸರ್ವೀಸ್ ಕೂಡ ಕೊಟ್ಟಿದ್ದಾರೆ. ಸಮಾಜಕ್ಕೆ ಇವರು ನೀಡಿರುವ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವಾರ್ಡ್, ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ರಾಜೀವ್ ಗಾಂಧಿ ಶಿರೋಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಡಾ.ಶೈಲೇಶ್ ಕುಮಾರ್ ಮುಡಿಗೇರಿಸಿಕೊಂಡಿದ್ದಾರೆ.

    ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್

    ಚಿತ್ರರಂಗದವರ ಜೊತೆಗೆ ಒಡನಾಟ

    ಚಿತ್ರರಂಗದವರ ಜೊತೆಗೆ ಒಡನಾಟ

    ಡಾ.ಶೈಲೇಶ್ ಕುಮಾರ್ ಅವರಿಗೆ ಚಿತ್ರರಂಗದವರ ಜೊತೆ ಒಡನಾಟ ಇತ್ತು. ಹೀಗಾಗಿ ಸಿನಿಮಾದ ಬಗ್ಗೆ ಪ್ಯಾಶನ್ ಶುರು ಆಯ್ತು. ಚಿಕ್ಕವಯಸ್ಸಿನಿಂದ ಡಾ.ರಾಜ್ ಕುಮಾರ್ ಅಭಿಮಾನಿ ಆಗಿರುವ ಇವರು ಕನ್ನಡ ಚಿತ್ರರಂಗದ ಮೇಲಿನ ಅಭಿಮಾನದಿಂದ ಹೊಸತನದ ಸಿನಿಮಾಗಳನ್ನು ಮಾಡುವ ಬಯಕೆಯಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

    ಟ್ರೆಕ್ಕಿಂಗ್ ಮೂಲಕ '6ನೇ ಮೈಲಿ' ಚಿತ್ರತಂಡ ವಿನೂತನ ಪ್ರಚಾರಟ್ರೆಕ್ಕಿಂಗ್ ಮೂಲಕ '6ನೇ ಮೈಲಿ' ಚಿತ್ರತಂಡ ವಿನೂತನ ಪ್ರಚಾರ

    ಸಿನಿಮಾದಿಂದ ಬರುವ ಆದಾಯ ಸಮಾಜ ಸೇವೆಗೆ

    ಸಿನಿಮಾದಿಂದ ಬರುವ ಆದಾಯ ಸಮಾಜ ಸೇವೆಗೆ

    ಕನ್ನಡ ಚಿತ್ರರಂಗಕ್ಕೆ ಕ್ವಾಲಿಟಿ ಚಿತ್ರಗಳನ್ನು ಕೊಡಲು ಮುಂದಾಗಿರುವ ಡಾ.ಶೈಲೇಶ್ ಕುಮಾರ್ ಸದ್ಯ '6ನೇ ಮೈಲಿ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. '6ನೇ ಮೈಲಿ' ಚಿತ್ರದಿಂದ ಬರುವ ಆದಾಯದ 20% ರಷ್ಟನ್ನು ತಮ್ಮ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲು ತೀರ್ಮಾನಿಸಿದ್ದಾರೆ.

    ಅದಾಗಲೇ ಇನ್ನೆರಡು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.!

    ಅದಾಗಲೇ ಇನ್ನೆರಡು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.!

    '6ನೇ ಮೈಲಿ' ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಹೀಗಿರುವಾಗಲೇ, ಅದಾಗಲೇ ಇನ್ನೆರಡು ಚಿತ್ರಗಳಿಗೆ ಬಂಡವಾಳ ಹಾಕಲು ಡಾ.ಶೈಲೇಶ್ ಕುಮಾರ್ ಸಮ್ಮತಿ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇಂತಹ ಪ್ಯಾಶನ್ ಇರುವ ನಿರ್ಮಾಪಕರು ಬರ್ತಿದ್ರೆ, ಕ್ವಾಲಿಟಿ ಇಂಪ್ರೂವ್ ಆಗೋದ್ರಲ್ಲಿ ಡೌಟೇ ಇಲ್ಲ.

    English summary
    Read the article to know more about Kannada Movie '6ne Maili' producer Dr.Shailesh Kumar and his social work.
    Thursday, July 5, 2018, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X