»   » ಹೆಣ್ಣು ಮಗುವಿಗೆ ಅಪ್ಪ ಆದ ತೆಲುಗು ನಟ ಅಲ್ಲು ಅರ್ಜುನ್

ಹೆಣ್ಣು ಮಗುವಿಗೆ ಅಪ್ಪ ಆದ ತೆಲುಗು ನಟ ಅಲ್ಲು ಅರ್ಜುನ್

Posted By:
Subscribe to Filmibeat Kannada

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ನಿನ್ನೆ (ನವೆಂಬರ್ 21) ರಾತ್ರಿ 8.30 ಕ್ಕೆ ಖಾಸಗಿ ಆಸ್ವತ್ರೆಯಲ್ಲಿ ಸ್ನೇಹಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಷ್ಯವನ್ನ ಸ್ವತಃ ಅಲ್ಲು ಅರ್ಜುನ್ ಅವರೇ ಖಚಿತ ಪಡಿಸಿದ್ದಾರೆ. ಇನ್ನೂ ಮಗು ಹಾಗೂ ತಾಯಿ ಇಬ್ಬರು ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

Allu Arjun and Sneha Reddy blessed with a baby girl

2011 ರಲ್ಲಿ ವಿವಾಹವಾಗಿದ್ದ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿಗೆ, ಈ ಮೊದಲು ಅಲ್ಲು ಆರ್ಯನ್ ಎಂಬ ಗಂಡು ಮಗುವಿದೆ.

ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್ ಟ್ವೀಟರ್ ನಲ್ಲಿ ''ನನಗೆ ಈಗ ತುಂಬಾ ಸಂತೋಷವಾಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು, ಮುಂದೆ ನಾನು ಇನ್ನು ಏನನ್ನು ಅಪೇಕ್ಷಿಸಲಾರೆ. ಶುಭಾಶಯ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು'' ಎಂದು ಟ್ವೀಟಿಸಿದ್ದಾರೆ. 

English summary
Actor Allu Arjun and his wife Sneha Reddy have become parents to a baby girl. The actor took to social media to share the happy news about his newborn and thank his fans for their wishes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada