For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಸಿನಿಮಾ ವಿಮರ್ಶೆ ಮಾಡಿದಕ್ಕೆ ಕೊಲೆ-ಅತ್ಯಾಚಾರ ಬೆದರಿಕೆ

  By Pavithra
  |

  ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ 'ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ' ಸಿನಿಮಾ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು. ಖುದ್ದು ಅಲ್ಲು ಅರ್ಜುನ್ ಅಭಿಮಾನಿಗಳೇ ಸಿನಿಮಾ ನೋಡಿ ನಮಗೆ ಕೋಪ ಬರುತ್ತಿದೆ ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು.

  ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ಚಿತ್ರ ಮಲೆಯಾಳಂ ನಲ್ಲಿ ಡಬ್ ಆಗಿ ಕೇರಳದಲ್ಲಿಯೂ ಬಿಡುಗಡೆ ಆಗಿತ್ತು. ಎಲ್ಲರಿಗೂ ತಿಳಿದಿರುವಂತೆ ಅಲ್ಲು ಅರ್ಜುನ್ ಕೇರಳದಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲಿಯ ಅಭಿಮಾನಿಗಳು ಚಿತ್ರ ನೋಡಿ ಬೇಸರಗೊಂಡಿದ್ದರು. ಕೇರಳ ಮೂಲಕ ಮಹಿಳಾ ವಿಮರ್ಶಕಿ ಚಿತ್ರದ ರಿವ್ಯೂ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

  ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!

  ಅಭಿಮಾನಿಗಳ ಬೇದರಿಕೆಯನ್ನು ತಾಳಲಾರದೆ ವಿಮರ್ಶಕಿ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯಾರು ಆ ವಿಮರ್ಶಿಕಿ? ಆಕೆ ಚಿತ್ರದ ಬಗ್ಗೆ ಬರೆದ ರಿವ್ಯೂ ಏನು? ಬೆದರಿಕೆ ಹಾಕುತ್ತಿರುವವರು ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ವಿಮರ್ಶೆ ಮಾಡಿದಕ್ಕೆ ಬೆದರಿಕೆ

  ವಿಮರ್ಶೆ ಮಾಡಿದಕ್ಕೆ ಬೆದರಿಕೆ

  ಇತ್ತೀಚಿಗಷ್ಟೆ ಬಿಡುಗಡೆ ಆದ ಅಲ್ಲು ಅರ್ಜುನ್ ಅಭಿನಯದ ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ ಸಿನಿಮಾದ ವಿಮರ್ಶೆ ಮಾಡಿದಕ್ಕೆ ಕೇರಳ ಮೂಲಕ ಅಪರ್ಣಾ ಪ್ರಶಾಂತಿ ಎನ್ನುವ ವಿಮರ್ಶಕಿಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ.

  ಚಿತ್ರ ತಲೆ ನೋವು ತಂದಿದೆ

  ಚಿತ್ರ ತಲೆ ನೋವು ತಂದಿದೆ

  ಅಪರ್ಣಾ ಪ್ರಶಾಂತಿ ಕೇರಳ ಮೂಲದ ಫ್ರಿಲ್ಯಾನ್ಸರ್ ಸಿನಿಮಾ ವಿಮರ್ಶಕಿ. ಸಾಕಷ್ಟು ವರ್ಷಗಳಿಂದ ತಮ್ಮ ಫೇಸ್ ಬುಕ್ ಬಳಸಿಕೊಂಡು ಚಿತ್ರಗಳ ರಿವ್ಯೂ ಮಾಡುತ್ತಾರೆ. ಅದರಂತೆಯೇ ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ ಸಿನಿಮಾದ ವಿಮರ್ಶೆಯನ್ನ ಒಂದೇ ವಾಕ್ಯದಲ್ಲಿ "ಚಿತ್ರ ತಲೆ ನೋವು ತರುತ್ತಿದೆ. ಅರ್ಧಕ್ಕೆ ಎದ್ದು ಹೋಗೋಣ ಎಂದರೆ ಥಿಯೆಟರ್ ಹೊರಗೆ ಮಳೆ ಬರುತ್ತಿದೆ" ಎಂದು ಬರೆದಿದ್ದರು.

  ಕಮೆಂಟ್ ಮೂಲಕ ಬೆದರಿಕೆ

  ಕಮೆಂಟ್ ಮೂಲಕ ಬೆದರಿಕೆ

  ಅಪರ್ಣಾ ಪ್ರಶಾಂತಿ ಅವರ ವಿಮರ್ಶೆಯನ್ನ ನೋಡಿದ ಅಲ್ಲು ಅರ್ಜುನ್ ಅಭಿಮಾನಿಗಳು ಒಂದು ಗುಂಪು ಮಾಡಿಕೊಂಡು ಅಪರ್ಣಾ ಅವರಿಗೆ ಫೇಸ್ ಬುಕ್ ಕಮೆಂಟ್ ಮಾಡುವ ಮೂಲಕ ಬೇದರಿಕೆ ಹಾಕಲು ಶುರು ಮಾಡಿದ್ದಾರೆ. ಇದರಿಂದ ಬೇಸತ್ತಾ ಅಪರ್ಣಾ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.

  ಅತ್ಯಾಚಾರ ಮತ್ತು ಬೆದರಿಕೆ

  ಅತ್ಯಾಚಾರ ಮತ್ತು ಬೆದರಿಕೆ

  ನಾಲ್ಕು ವರ್ಷದಿಂದ ವಿಮರ್ಶಕಿ ಆಗಿ ಕೆಲಸ ಮಾಡುತ್ತಿರುವ ಅಪರ್ಣಾ ಪ್ರಶಾಂತಿ ಅವರಿಗೆ ಬೆದರಿಕೆ ಮಾತ್ರವಲ್ಲದೆ ಅತ್ಯಾಚಾರ ಮಾಡುವುದಾಗಿಯೂ ಕಮೆಂಟ್ ಮಾಡಿದ್ದಾರೆ ಅಭಿಮಾನಿಗಳು. ಸಾಮಾನ್ಯವಾಗಿ ವಿಮರ್ಶೆಗೆ ವಿರೋಧ ವ್ಯಕ್ತವಾಗುತ್ತದೆ. ಆದರೆ ಈ ರೀತಿಯಲ್ಲಿ ಬಹಳ ಕೆಟ್ಟದಾಗಿ ಅಭಿಮಾನಿಗಳು ನಡೆದುಕೊಳ್ಳುತ್ತಿರುವುದು ಇದೇ ಮೊದಲು ಎಂದಿದ್ದಾರೆ ಅಪರ್ಣಾ.

  ಕ್ಷಮೆ ಕೇಳಲು ಒತ್ತಾಯ

  ಕ್ಷಮೆ ಕೇಳಲು ಒತ್ತಾಯ

  ಅಪರ್ಣಾ ಪ್ರಶಾಂತಿ ಅಲ್ಲು ಅರ್ಜುನ್ ಅವರಿಗೆ ಕ್ಷಮೆ ಕೇಳಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಫೇಸ್ ಬುಕ್ ನಲ್ಲಿರುವ ಅನೇಕ ಸ್ನೇಹಿತರು ಕೂಡ ಕ್ಷಮೆ ಕೇಳಿಬಿಡು ಸುಮ್ಮನೆ ಜಗಳ ಏಕೆ ಎಂದು ಸಂದೇಶ ಕಳುಹಿಡುತ್ತಿದ್ದಾರಂತೆ. ನಟ ಅಲ್ಲು ಅರ್ಜುನ್ ಮಾತ್ರ ಈ ವಿಚಾರ ಗೊತ್ತೆ ಇಲ್ಲದಂತೆ ಪ್ರತಿಕ್ರಿಯಿಸದೆ ಸುಮ್ಮನ್ನಿದ್ದಾರೆ.

  ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.!ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.!

  English summary
  Allu Arjun starrer Naa Peru Surya Naa Illu India. This patriotic drama Naa Peru Surya was released in Kerela earlier. A movie critic named Aparna Prashanthi had written negatively on Naa Peru Surya Naa Illu India. some of the Malayalam fans threatened to kill Aparna and even threatened her of rape.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X