»   » ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಅಲ್ಲು ಅರ್ಜುನ್

ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಅಲ್ಲು ಅರ್ಜುನ್

Posted By: ಉದಯರವಿ
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಟಾಲಿವುಡ್ ನಿಂದ ಮತ್ತೊಂದು ಬಂಪರ್ ಆಫರ್ ಬಂದಿದೆ. ಈಗಾಗಲೆ ತೆಲುಗಿನಲ್ಲಿ ಒಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಪವನ್ ಅವರಿಗೆ ಇದು ಮತ್ತೊಂದು ಭರ್ಜರಿ ಚಾನ್ಸ್.

ತೆಲುಗಿನ ಮೋಸ್ಟ್ ಡಿಮ್ಯಾಂಡಿಂಗ್ ಸ್ಟಾರ್ ಎನ್ನಿಸಿಕೊಂಡಿರುವ ಅಲ್ಲು ಅರ್ಜುನ್ ಚಿತ್ರಕ್ಕೆ ಪವನ್ ಆಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸೋದರಳಿಯನಾಗಿರುವ ಅಲ್ಲು ಅರ್ಜುನ್ ಚಿತ್ರಕ್ಕೆ ಕನ್ನಡಿಗರೊಬ್ಬರು ಆಕ್ಷನ್ ಕಟ್ ಹೇಳಲಿರುವುದು ಇದೇ ಮೊದಲು.

Allu Arjun in Pawan Wadeyar direction

ಈ ಹಿಂದೆ 'ಗೋವಿಂದಾಯ ನಮಃ' ತೆಲುಗು ರೀಮೇಕ್ 'ಪೋಟುಗಾಡು' ಚಿತ್ರವಕ್ಕೆ ಪವನ್ ಆಕ್ಷನ್ ಕಟ್ ಹೇಳಿದ್ದರು. ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಅದರ ವಿವರಗಳು ಇನ್ನಷ್ಟೇ ಹೊರಬೀಳಬೇಕು.

ತಮ್ಮ 'ಪೋಟುಗಾಡು' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಲಗಡಪತಿ ಬಾಬು ಈ ಬಾರಿಯೂ ಹಣ ಹಾಕುತ್ತಿದ್ದಾರೆ. ಆದರೆ ಇದು ರೀಮೇಕ್ ಅಲ್ಲ ಎಂಬುದು ವಿಶೇಷ. ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮರ್ ಅವರ 'ರಣವಿಕ್ರಮ' ಚಿತ್ರದ ಗೆಲುವಿನಲ್ಲಿರುವ ಪವನ್ ಅವರಿಗೆ ಇದು ಡಬಲ್ ಸಂಭ್ರಮ ತಂದಿದೆ.

ಗೋವಿಂದಾಯ ನಮಃ, ಗೂಗ್ಲಿ ಹಾಗೂ ರಣವಿಕ್ರಮ ಚಿತ್ರಗಳ ಹ್ಯಾಟ್ರಿಕ್ ಹಿಟ್ ನಿರ್ದೇಶಕ ಎನ್ನಿಸಿಕೊಂಡಿರುವ ಪವನ್ ತೆಲುಗಿನಲ್ಲೂ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಪೋಟುಗಾಡು ಚಿತ್ರದ ಮೂಲಕ ಅವರಿಗೆ ಈಗಾಗಲೆ ತೆಲುಗು ಪ್ರೇಕ್ಷಕರ ನಾಡಿಮಿಡಿತ ಅರಿವಾಗಿರಬೇಕು. ಇನ್ನು ಅಲ್ಲು ಅರ್ಜುನ್ ಚಿತ್ರ ಎಂದರೆ ತೆಲುಗು ಪ್ರೇಕ್ಷಕರ ನಿರೀಕ್ಷೆಗಳು ಕೇಳಬೇಕೆ. 

English summary
Sandalwood Hat Trick hit director Pavan Wadeyar all set to direct Allu Arjun movie in Telugu. The producer is Lagapati Babu who had produced Pavan's earlier Telugu film which was a remake of Govindaya Namaha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada