»   » 'ಹೆಬ್ಬುಲಿ' ಸಿನಿಮಾ ಆದ್ಮೇಲೆ 'ಅಮಲಾ ಪೌಲ್' ಯಾರ ಕೈಗೂ ಸಿಗ್ತಿಲ್ಲವಂತೆ

'ಹೆಬ್ಬುಲಿ' ಸಿನಿಮಾ ಆದ್ಮೇಲೆ 'ಅಮಲಾ ಪೌಲ್' ಯಾರ ಕೈಗೂ ಸಿಗ್ತಿಲ್ಲವಂತೆ

Posted By: Naveen
Subscribe to Filmibeat Kannada

ಕಾಲಿವುಡ್ ಸಿನಿರಂಗದ ಸಹಜ ಸುಂದರಿ ಅಮಲಾ ಪೌಲ್. ದಕ್ಷಿಣ ಭಾರತ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದ ಅಮಲಾ ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ರು. ಈ ಮೂಲಕ ಚಂದನವನಕ್ಕೆ ಚಂದದ ನಟಿಮಣಿ ಬಲಗಾಲಿಟ್ಟು ಬಂದಿದ್ದಳು.['ಹೆಬ್ಬುಲಿ' ಗೆದ್ದಿದ್ದಕ್ಕೆ 'ಕಿಚ್ಚ'ನ ಮನೆಯಲ್ಲಿ ಸಕ್ಸಸ್ ಪಾರ್ಟಿ!]

ಅದ್ಯಾವ ಟೈಂ ನಲ್ಲಿ ಕಿಚ್ಚ 'ಸುಂದರಿ... ಸುಂದರಿ... ' ಅಂತ ಈಕೆಯ ಜೊತೆ ಹಾಡಿದ್ರೋ, ಅಲ್ಲಿಂದ ಅಮಲಾ ಪೌಲ್ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿಬಿಟ್ಟಿದೆ. ಈಗ ಯಾರಾದ್ರೂ ತಮ್ಮ ಸಿನಿಮಾಗೆ ಅಮಲಾ ಪೌಲ್ ನಾಯಕಿ ಆಗಬೇಕು ಅಂತ ಕನಸು ಹೊಂದಿದ್ರೆ, ಅದನ್ನ ಸ್ವಲ್ಪ ಮುಂದೆ ಹಾಕುವುದು ಒಳ್ಳೆಯದು. ಯಾಕಂದ್ರೆ, ಈಗ ಅಮಲಾ ಪೌಲ್ ಈ ವರ್ಷ ಪೂರ್ತಿ ಬಿಜಿ ಇದ್ದಾರೆ.

ಅಮಲಾ ಈಗ ತಮಿಳು ಮತ್ತು ಮಲಯಾಳಂ ನಲ್ಲಿ ಸಖತ್ ಬುಸ್ಸಿಯಾಗಿದ್ದು, ಆಕೆಯ ಕೈ ತುಂಬ ಸಿನಿಮಾಗಳಿವೆ. ಇವೆಲ್ಲದರ ಜೊತೆಗೆ 'ಹೆಬ್ಬುಲಿ' ಸಿನಿಮಾ 100 ಕೋಟಿ ಗಳಿಕೆ ಮಾಡಿದೆ ಎಂಬ ಅಂತೆ ಕಂತೆ ಬೇರೆ. ಇದರಿಂದ ಅಮಲಾ ಪೌಲ್ ಡಿಮ್ಯಾಂಡ್ ಡಬಲ್ ಆಗಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಮುಂದೆ ಓದಿ...

ಅಮಲಾ ಕೈನಲ್ಲಿವೆ ಬರೋಬ್ಬರಿ 7 ಸಿನಿಮಾಗಳು

'ಹೆಬ್ಬುಲಿ' ಸಿನಿಮಾದ ಬಳಿಕ ಅಮಲಾ ಸಖತ್ ಬಿಜಿಯಾಗಿದ್ದಾರೆ. ಬರೋಬ್ಬರಿ 7 ಸಿನಿಮಾಗಳು ಈಗ ಅವರ ಕೈನಲ್ಲಿವೆ. ಅದೇ ಕಾರಣದಿಂದ ಈ ಚಿತ್ರಗಳು ಮುಗಿಯುವವರೆಗೂ ಬೇರೆ ಯಾವ ಸಿನಿಮಾದವರಿಗೂ ಆಕೆ ಕೈಗೆ ಸಿಗಲ್ಲ.

ತಮಿಳಿನಲ್ಲಿ 5 ಸಿನಿಮಾಗಳು

ಕಾಲಿವುಡ್ ನ ಐದು ಸಿನಿಮಾಗಳು ಈಗ ಅಮಲಾ ಅಕೌಂಟ್ ನಲ್ಲಿದೆ. ಈ ಪೈಕಿ ಮೂರು ಸಿನಿಮಾಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ.

'ವಿ ಐ ಪಿ 2'

ಧನುಷ್ ಮತ್ತು ಅಮಲಾ ಪೌಲ್ ಕಾಂಬಿನೇಷನ್ 'ವಿ ಐ ಪಿ' ಸಿನಿಮಾ ಸೂಪರ್ ಹಿಟ್ ಆಗಿತು. ಈಗ 'ವಿ ಐ ಪಿ 2' ಸಿನಿಮಾದಲ್ಲಿ ಸಹ ಅಮಲಾ ನಾಯಕಿಯಾಗಿದ್ದಾರೆ. 'ವಿ ಐ ಪಿ 2' ಚಿತ್ರದ ಮತ್ತೊಬ್ಬ ನಾಯಕಿಯಾಗಿ ಕಾಜಲ್ ಕಾಣಿಸಿಕೊಳ್ತಿದ್ದಾರೆ.

ಮಲೆಯಳಂ ನ 2 ಸಿನಿಮಾಗಳು

ಮಾಲಿವುಡ್ ಸಿನಿಮಾದಿಂದ ಬಣ್ಣ ಲೋಕಕ್ಕೆ ಬಂದ ಅಮಲಾ ಆಗಾಗ ಅಲ್ಲಿ ಸಿನಿಮಾ ಮಾಡುತ್ತಿರುತ್ತಾರೆ. ಸದ್ಯ ಮಲೆಯಳಂ ನ ಎರಡು ಹೊಸ ಸಿನಿಮಾಗಳಲ್ಲಿ ಅಮಲಾ ಕಾಣಿಸಿಕೊಳ್ತಿದ್ದಾರೆ.['ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ]

ಮಾಲಿವುಡ್ 'ಕ್ವೀನ್'

ಬಾಲಿವುಡ್ ನ 'ಕ್ವೀನ್' ಸಿನಿಮಾ ಈಗ ಮಲೆಯಳಂ ನಲ್ಲಿ ರೀಮೇಕ್ ಆಗಲಿದೆ. ಕಂಗನಾ ನಟಿಸಿದ್ದ ಪಾತ್ರದಲ್ಲಿ ಅಮಲಾ ಪೌಲ್ ಅಭಿನಯಿಸುತ್ತಿದ್ದಾರೆ.

'ಅಮಲು' ಜೋರಾಗಿದೆ

ಅಮಲಾ ಇಲ್ಲಿಯವರೆಗೂ ಒಂದು ವರ್ಷಕ್ಕೆ 5 ಸಿನಿಮಾ ಮಾಡಿದ್ದೇ ಹೆಚ್ಚು. ಅದ್ರೇ ಈ ವರ್ಷ 'ಹೆಬ್ಬುಲಿ' ಸೇರಿ 8 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಸೌತ್ ಸಿನಿಮಾಭಿಮಾನಿಗಳು ಅಮಲಾ ಪೌಲ್ ರವರ ಅಮಲಿನಲ್ಲಿ ತೇಲುವ ತರಹ ಆಗಿದೆ.

English summary
Actress Amala Paul's demand doubled after 'Hebbuli' movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada