For Quick Alerts
  ALLOW NOTIFICATIONS  
  For Daily Alerts

  'ಅಮರ್' ಹಾಡಿಗೆ ಅದ್ಭುತ ಪ್ರತಿಕ್ರಿಯೆ : ಮತ್ತೊಂದು ಹಿಟ್ ನೀಡಿದ ಸಂಚಿತ್

  |

  'ಮರೆತು ಹೋಯಿತು ನನ್ನೆಯ ಹಾಜರಿ...' ಎಂದು ಅಭಿಷೇಕ್ ಅಂಬರೀಶ್ ಹಾಡು ಹಾಡಿದ್ದರು. ಈ ಹಾಡು ಈಗ ಪ್ರೇಕ್ಷಕರ ಪ್ರೀತಿ ಪಡೆದಿದೆ. 'ಅಮರ್' ಸಿನಿಮಾದ ಮೊದಲ ಹಾಡು ಗೆದ್ದಿದ್ದು, ಚಿತ್ರತಂಡದ ಆತ್ಮವಿಶ್ವಾಸ ಜಾಸ್ತಿಯಾಗಿದೆ.

  ವಿಡಿಯೋ : 'ಅಮರ್' ಸಿನಿಮಾದ ಮೊದಲ ಹಾಡು ಕೇಳಿ

  'ಅಮರ್' ಸಿನಿಮಾದ ಮೊದಲ ಹಾಡು ನಾಲ್ಕು ದಿನದ ಹಿಂದೆ ಬಿಡುಗಡೆಯಾಗಿತ್ತು. ಈಗ ಈ ಹಾಡು ಯೂಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಡಿಗೆ ಒಂದು ಮಿಲಿಯನ್ ಹಿಟ್ಸ್ ಸಿಕ್ಕಿದೆ. ಹಾಡು ಕೇಳಿದ ಬಹುತೇಕರು ಇಷ್ಟ ಪಟ್ಟಿದ್ದಾರೆ.

  ಈ ಹಾಡನ್ನು ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಇತ್ತೀಚಿಗೆ ಸಂಚಿತ್ ಹಾಡಿದ ಎಲ್ಲ ಹಾಡುಗಳು ಹಿಟ್ ಆಗುತ್ತಿವೆ. 'ಅಮರ್' ಸಿನಿಮಾದ ಈ ಹಾಡು ಕೂಡ ಹಿಟ್ ಲಿಸ್ಟ್ ಸೇರಿದೆ. ಅರ್ಜುನ್ ಜನ್ಯ ಸಂಗೀತ ಹಾಗೂ ಕವಿರಾಜ್ ಪದಗಳು ಹಾಡಿನಲ್ಲಿದೆ. ಅಭಿಷೇಕ್ ಮತ್ತು ತಾನ್ಯ ಹೂಪ್ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

  'ಅಮರ್' ನಾಗಶೇಖರ್ ನಿರ್ದೇಶನದ ಸಿನಿಮಾಗಿದೆ. ಅಂಬಿ ಗೆಳೆಯ ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

  English summary
  Actor Abhishek Ambareesh's 'Amar' kannada movie 1st song 1 million views on youtube. Arjun Janya composed music for 'Amar'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X