ಅಂಬರ ಚಿತ್ರೀಕರಣದಲ್ಲಿ ಸದಾಶಿವಯ್ಯ ದುರಂತ ಸಾವು

By Rajendra

Sadashivaiah
ನಟ ಯೋಗೀಶ್ ಹಾಗೂ ತಾರೆ ಭಾಮಾ ಅಭಿನಯಿಸುತ್ತಿರುವ ಅಂಬರ ಚಿತ್ರೀಕರಣದ ಶೂಟಿಂಗ್ ಹರಿದ್ವಾರ, ಹೃಷಿಕೇಷ, ಡಾರ್ಜಲಿಂಗ್ ಹಾಗೂ ಸಿಕ್ಕಿಂನಲ್ಲಿ ಭರದಿಂದ ಸಾಗುತ್ತಿದೆ. ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದೆ. ಈ ಚಿತ್ರದ ಸಹಾಯಕ ಕಲಾ ನಿರ್ದೇಶಕ ಸದಾಶಿವಯ್ಯ (48) ಬುಧವಾರ (ನ.14) ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕಳೆದ ಹತ್ತು ದಿನಗಳಿಂದ ಹೃಷಿಕೇಷದಲ್ಲಿ ಅಂಬರ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣಕ್ಕಾಗಿ ಲೊಕೇಷನ್ ನೋಡಲು ಬೋಟ್ ನಲ್ಲಿ ಹೋಗಿದ್ದಾಗ ಆಯತಪ್ಪಿ ಅವರು ನದಿಗೆ ಬಿದ್ದಿದ್ದಾರೆ. ನದಿ ನೀರು ರಭಸವಾಗಿ ಹರಿಯುತ್ತಿದ್ದು ಅವರು ಕೊಚ್ಚಿಹೋಗಿದ್ದಾಗಿ ಚಿತ್ರತಂಡ ತಿಳಿಸಿದೆ.

ಸುಮಾರು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಅವರು ನದಿಗೆ ಬಿದ್ದ ಕೂಡಲೆ ಅವರನ್ನು ರಕ್ಷಿಸಲು ಚಿತ್ರತಂಡ ಹರಸಾಹಸ ಪಟ್ಟಿದೆಯಾದರೂ ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಅವರ ದೇಹ ಪತ್ತೆಯಾಗಿಲ್ಲ.

ಕಳೆದ 20 ವರ್ಷಗಳಿಂದ ಅವರು ಸದಾಶಿವಯ್ಯ ಅವರು ಕಲಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು. ಶಶಿಧರ ಅಡಪ, ಹೊಸ್ಮನೆ ಮೂರ್ತಿ ಸೇರಿದಂತೆ ಹಲವಾರು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿ 400ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

ಸೇನ್ ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಅಂಬರ'ಕ್ಕೆ ನಾಗರಾಜ್ ಕೋಟೆ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ರವಿಕುಮಾರ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಯೋಗರಾಜ್ ಭರಣಿ ಸಹ ನಿರ್ದೇಶನ, ಅನಿಲ್ ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ರಾಜು ಸಹ ನಿರ್ಮಾಪಕರಾಗಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada films senior assistant art director Sadashivaiah drowned in Ganga river while searching location in a boat for Kannada film 'Ambara'. He is yet to be traced. Sadashivaiah has worked for over 400 Kannada films as assistant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X