For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಮಗುವಿಗೆ ಅಂಬರೀಶ್ ಬುಕ್ ಮಾಡಿದ್ರಂತೆ ಭರ್ಜರಿ ಗಿಫ್ಟ್.!

  |
  Ambareesh : ಯಶ್ ರಾಧಿಕಾ ಪಂಡಿತ್ ಮಗುವಿಗೆ ಅಂಬರೀಶ್ ಬಂಪರ್ ಗಿಫ್ಟ್ | FILMIBEAT KANNADA

  ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಬಾಂಧವ್ಯದ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ಯಾಕಂದ್ರೆ, ಯಶ್ ಅಂಬಿಯನ್ನ ಗಾಡ್ ಫಾದರ್ ರೀತಿ ಕಾಣುತ್ತಿದ್ದರು. ದರ್ಶನ್, ಸುದೀಪ್ ರೀತಿಯಲ್ಲಿ ಯಶ್ ಕೂಡ ಅಂಬಿಗೆ ಆಪ್ತ ವ್ಯಕ್ತಿ.

  ಅದೇ ರೀತಿ ಯಶ್ ಕೂಡ ಅಂಬರೀಶ್ ಅವರ ಮೇಲೆ ಅಷ್ಟೇ ಅಭಿಮಾನ ಹಾಗೂ ಗೌರವ ಇಟ್ಟಿದ್ದರು. ಇನ್ನು ಅಂಬಿ ಸಾವಿನ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಓಡಿ ಬಂದಿದ್ದ ಯಶ್, ಅಂತ್ಯಸಂಸ್ಕಾರ ನಡೆಯೋವರೆಗೂ ಸುಮಲತಾ ಅವರ ಜೊತೆಯಲ್ಲೇ ಇದ್ದು ವಿಧಿವಿಧಾನಗಳನ್ನ ಪೂರೈಸಲು ಸಹಕರಿಸಿದ್ದರು.

  ಲಕ್ಕಿ ಸ್ಥಳದಲ್ಲಿ ರಾಧಿಕಾ ಪಂಡಿತ್ ಸೀಮಂತ: ಅಂಬಿ, ಪುನೀತ್ ಭಾಗಿ

  ಆದ್ರೀಗ, ರಾಕಿಂಗ್ ಸ್ಟಾರ್ ಯಶ್ ಮತ್ತ ರಾಧಿಕಾ ಪಂಡಿತ್ ಮಗಳಿಗೆ ಅಂಬರೀಶ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಈ ಉಡುಗೊರೆ ಸ್ವರ್ಗದಿಂದ ಬಂದಿದೆ ಎಂದೇ ಬಿಂಬಿತವಾಗ್ತಿದೆ. ಯಾಕಂದ್ರೆ, ಅಂಬರೀಶ್ ಅವರು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದ ಗಿಫ್ಟ್ ಇದು. ಅಷ್ಟಕ್ಕೂ, ಈ ಗಿಫ್ಟ್ ವಿಚಾರ ಈಗ ಹೇಗೆ ಗೊತ್ತಾಯ್ತು? ಮುಂದೆ ಓದಿ....

  ತೊಟ್ಟಿಲು ಬುಕ್ ಮಾಡಿದ್ರಂತೆ ಅಂಬಿ

  ತೊಟ್ಟಿಲು ಬುಕ್ ಮಾಡಿದ್ರಂತೆ ಅಂಬಿ

  ರಾಧಿಕಾ ಪಂಡಿತ್ ಗರ್ಭಿಣಿ ಎಂದು ತಿಳಿದ ಮೇಲೆ ರೆಬೆಲ್ ಸ್ಟಾರ್ ಅಂಬರೀಶ್, ಪ್ರೀತಿಯಿಂದ ಅವರಿಗೆ ಏನಾದರೂ ಗಿಫ್ಟ್ ನೀಡಬೇಕು ಎಂದು ಯೋಚಿಸಿ, ಒಂದು ತೊಟ್ಟಿಲು ಬುಕ್ ಮಾಡಿದ್ದರಂತೆ. ಈ ವಿಷ್ಯ ಅಂಬಿಯನ್ನ ಮತ್ತು ತೊಟ್ಟಿಲು ರೆಡಿ ಮಾಡುವ ವ್ಯಕ್ತಿಗೆ ಬಿಟ್ಟರೇ ಬೇರೆ ಯಾರಿಗೂ ಗೊತ್ತಿರಲಿಲ್ಲವಂತೆ.

  ಚಿತ್ರಗಳು: 'ಯಶೋರಾಧೆ' ಅದ್ಧೂರಿ ರಿಸೆಪ್ಷನ್ ನಲ್ಲಿ ಗಣ್ಯಾತಿಗಣ್ಯರ ದಂಡು

  ಸುಮಲತಾ ನಂಬರ್ ಗೆ ಮೆಸೆಜ್ ಬಂದಿದೆ

  ಸುಮಲತಾ ನಂಬರ್ ಗೆ ಮೆಸೆಜ್ ಬಂದಿದೆ

  ಸುಮಲತಾ ಅವರಿಗೆ ಒಂದು ಮಸೆಜ್ ಬಂದಿದೆ. ಆ ಮೆಸೆಜ್ ನಲ್ಲಿ 'ಸರ್ ನೀವು ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧವಾಗಿದೆ. ತೆಗೆದುಕೊಂಡು ಹೋಗಿ' ಎಂದು ಆ ವಾಟ್ಸಾಪ್ ಸಂದೇಶ ಬಂದಿದೆ. ನಾನು ಬುಕ್ ಮಾಡಿಲ್ಲ ಅಲ್ವಾ, ಮಿಸ್ ಆಗಿ ಮೆಸೆಜ್ ಬಂದಿದ್ಯಾ ಎಂದು ತಿಳಿಯಲು ವಾಪಸ್ ಆ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಮಾಡಿದಾಗ ಅಂಬರೀಶ್ ತೊಟ್ಟಿಲು ಬುಕ್ ಮಾಡಿದ ವಿಷ್ಯ ಬಹಿರಂಗವಾಗಿದೆ. ಸಂಪರ್ಕಕ್ಕಾಗಿ ಸುಮಲತಾ ನಂಬರ್ ಕೊಟ್ಟಿದ್ದರಂತೆ. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ ಆ ತೊಟ್ಟಿಲು ಮಾಡುವ ವ್ಯಕ್ತಿಗೆ ಇದು ಅಂಬರೀಶ್ ಅವರು ಮಾಡಿರುವ ಆರ್ಡರ್ ಎಂದು ಗೊತ್ತೇ ಇರಲಿಲ್ಲವಂತೆ.

  ಅಭಿಮಾನಿಗಳ ಪ್ರೀತಿ ಕಂಡು ಮೂಕವಿಸ್ಮಿತರಾದ ರಾಧಿಕಾ ಪಂಡಿತ್

  ಯಶ್ ಗೆ ವಿಷ್ಯ ತಿಳಿಸಿದ ಸುಮಲತಾ

  ಯಶ್ ಗೆ ವಿಷ್ಯ ತಿಳಿಸಿದ ಸುಮಲತಾ

  ನಂತರ ಸುಮಲತಾ ಅವರು ಯಶ್ ಗೆ ಕರೆ ಮಾಡಿ, ಅಂಬರೀಶ್ ಅವರು ನಿಮ್ಮ ಮಗುವಿಗೊಂದು ಗಿಫ್ಟ್ ಬುಕ್ ಮಾಡಿದ್ದರಂತೆ. ಅದು ಸ್ವರ್ಗದಿಂದ ಬಂದಿದೆ ಎಂದು ತಿಳಿಸಿದರಂತೆ. ಬಹುಶಃ ಈ ಮಾತನ್ನ ಕೇಳಿದ ಯಶ್ ಅವರ ಆನಂದಕ್ಕೆ ಪಾರವೇ ಇರಲಿಲ್ಲ ಅನಿಸುತ್ತೆ ಬಿಡಿ.

  ಯಶ್ ಮಗಳ ಜಾತಕದಲ್ಲಿ 'ಸಿಂಹಾಸನ ಯೋಗ': ಮಗಳ ಭವಿಷ್ಯ ಹೇಗಿದೆ?

  ತೊಟ್ಟಿಲು ಬೆಲೆ ಎಷ್ಟು ಗೊತ್ತಾ?

  ತೊಟ್ಟಿಲು ಬೆಲೆ ಎಷ್ಟು ಗೊತ್ತಾ?

  ಅಂದ್ಹಾಗೆ, ಈ ತೊಟ್ಟಿಲು ಬೆಲೆ ಎಷ್ಟು ಅಂತ ಗೊತ್ತಾದ್ರೆ ಒಂದು ಕ್ಷಣ ಶಾಕ್ ಆಗ್ಬಿಡ್ತೀರ. ಹೌದು, ಯಶ್ ಮತ್ತು ರಾಧಿಕಾ ಮಗುವಿಗೆ ಅಂಬರೀಶ್ ಮಾಡಿಸಿದ್ದ ತೊಟ್ಟಿಲು ಒಂದೂವರೆ ಲಕ್ಷ ರೂಪಾಯಿ ಅಂತೆ. ಬಹುಶಃ ಯಶ್ ಮಗಳಿಗೆ ಇದೊಂದು ರೀತಿಯಲ್ಲಿ ತಾತ ನೀಡಿದ ಗಿಫ್ಟ್. ಮರೆಯೋದಕ್ಕೆ ಸಾಧ್ಯವಿಲ್ಲ. ಬಹಳ ಕಾಲ ನೆನಪಿನಲ್ಲಿ ಇಡುವಂತೆ ಆಗಲಿದೆ.

  ರಾಧಿಕಾಗೆ ಯಶ್ ಜೊತೆ ಇಂತಹದೊಂದು ಸಿನಿಮಾ ಮಾಡುವ ಆಸೆ ಇದೆಯಂತೆ

  ಸೀಮಂತ ಕಾರ್ಯಕ್ರಮದಲ್ಲಿ ಅಂಬಿ

  ಸೀಮಂತ ಕಾರ್ಯಕ್ರಮದಲ್ಲಿ ಅಂಬಿ

  ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮದಲ್ಲಿ ಅಂಬರೀಶ್ ದಂಪತಿ ಭಾಗವಹಿಸಿ, ಆಶೀರ್ವಾದ ಮಾಡಿದ್ದರು. ದುರಾದೃಷ್ಟ ಅಂದ್ರೆ, ರಾಧಿಕಾ ಅವರಿಗೆ ಮಗು ಜನಿಸುವ ಮೊದಲೇ ಅಂಬಿ ಇಹಲೋಕ ತ್ಯಜಿಸಿದ್ದರು.

  ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ

  English summary
  On behalf of ambareesh, his wife Sumalatha ambareesh gave a cradle for radhika pandith child. what did ambareesh booked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X