»   » ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!

ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!

Posted By:
Subscribe to Filmibeat Kannada

ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನೂತನ ಸಂಪುಟದಲ್ಲಿ ವಸತಿ ಸಚಿವ, ಕನ್ನಡ ಚಲನಚಿತ್ರ ನಟ 'ರೆಬೆಲ್ ಸ್ಟಾರ್ ಅಂಬರೀಶ್'ಗೆ ಸ್ಥಾನ ನೀಡಿಲ್ಲ.

ಸಚಿವ ಸ್ಥಾನದಿಂದ ಅಂಬರೀಶ್ ರವರನ್ನ ಕೆಳಗಿಳಿಸಿರುವುದಕ್ಕೆ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಸಿದ್ದರಾಮಯ್ಯ ರವರ ನಡೆ ಖಂಡಿಸಿ ಅಂಬರೀಶ್ ಅಭಿಮಾನಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.[ಸಂಪುಟದಿಂದ ಹೊರಹೋಗಲಿರುವ 13 ಸಚಿವರು]

ಕ್ಯಾಬಿನೆಟ್ ನಿಂದ ಅಂಬರೀಶ್ ರವರಿಗೆ ಗೇಟ್ ಪಾಸ್ ಸಿಕ್ಕಿರುವುದಕ್ಕೆ ಅಂಬಿ ಅಪ್ಪಟ ಅಭಿಮಾನಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಮಧ್ಯೆ 'ಕಾರಣ'ವಿಲ್ಲದೇ ಸಚಿವ ಸಂಪುಟದಿಂದ ಅಂಬರೀಶ್ ರವರನ್ನು ಕೈ ಬಿಟ್ಟಿರುವುದಕ್ಕೆ ಕನ್ನಡ ಚಿತ್ರರಂಗ ಕೂಡ ಬಂದ್ ಗೆ ಕರೆ ನೀಡಿದೆ. ಮುಂದೆ ಓದಿ....

ಇಂದು ದಿಢೀರ್ ಸುದ್ದಿ ಗೋಷ್ಠಿ.!

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಎ.ಮಂಜು, ಕೆ.ಮಂಜು ಸೇರಿದಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಸುದ್ದಿ ಗೋಷ್ಠಿ ನಡೆಸಿ, ಸಂಪುಟದಿಂದ ಅಂಬರೀಶ್ ರವರಿಗೆ ಕೋಕ್ ನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಾಳೆ ಚಿತ್ರೋದ್ಯಮ ಬಂದ್.!

ಏಕಾಏಕಿ ಅಂಬರೀಶ್ ರವರನ್ನ ಕಿಕ್ ಔಟ್ ಮಾಡಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನಿರ್ಧಾರವನ್ನು ವಿರೋಧಿಸಿ ನಾಳೆ ಕನ್ನಡ ಚಿತ್ರೋದ್ಯಮ ಬಂದ್ ಗೆ ಕರೆ ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಾಳೆ ಪ್ರತಿಭಟನೆ ನಡೆಯಲಿದೆ.

ಚಿತ್ರರಂಗದ ಎಲ್ಲಾ ಕೆಲಸಗಳು ಸ್ತಬ್ಧ

ನಾಳೆ (ಜೂನ್ 20) ಬೆಳಗ್ಗೆ 9 ಗಂಟೆ ಇಂದ ಸಂಜೆ 6 ರವರೆಗೆ ಕನ್ನಡ ಚಿತ್ರಗಳ ಚಿತ್ರೀಕರಣ ನಡೆಯುವುದಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಮೌನ ಪ್ರತಿಭಟನೆ ನಡೆಯಲಿದೆ.

ಯಶ್ ಏನಂದರು.?

''ಎಲ್ಲರಿಗೂ ಬೇಜಾರಾಗಿದೆ. ರಾಜಕೀಯದಲ್ಲಿ ಭ್ರಷ್ಟಾಚಾರ ಎಷ್ಟಿದೆ ಅಂತ ಎಲ್ರಿಗೂ ಗೊತ್ತು. ಆದ್ರೆ, ಅಂಬರೀಶ್ ಅಣ್ಣ ಭ್ರಷ್ಟಾಚಾರ ಮಾಡಿಲ್ಲ. ಅವರು ದುಡ್ಡಿಗಾಗಿ ಆಸೆ ಪಡಲ್ಲ. ತುಂಬಾ ಕೆಲಸ ಮಾಡಿದ್ದಾರೆ. ಅವರ ಕಾರ್ಯ ವೈಖರಿ ಚೆನ್ನಾಗಿದೆ. ವಸತಿ ಇಲಾಖೆಯಲ್ಲಿ ಆಗಿರುವ ಕೆಲಸದ ಬಗ್ಗೆ ಆರ್.ಟಿ.ಐ ನಲ್ಲಿ ಪಡೆದುಕೊಳ್ಳಬಹುದು. ಆದ್ರೆ, ಅವರು ಯಾವುದನ್ನೂ ಹೇಳಿಕೊಂಡಿಲ್ಲ. ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಯಾವ ಆಧಾರದ ಮೇಲೆ ಅವರನ್ನ ಕೈಬಿಡಲಾಗಿದೆ ಎಂಬುದು ಪ್ರಶ್ನೆ ಆಗಿದೆ. ಕಾರಣ ಇಲ್ಲದೆ ತೆಗೆದಿರುವುದು ನನಗೂ ನೋವಾಗಿದೆ'' ಅಂತ ಬೇಸರ ವ್ಯಕ್ತಪಡಿಸುತ್ತಾರೆ ನಟ ಯಶ್.

ಕೆ.ಮಂಜು ಹೇಳಿದ್ದೇನು.?

''ಅಂಬರೀಶ್ ರವರನ್ನು ಸಂಪುಟದಿಂದ ಕೈಬಿಡಬಾರದು. ಯಾಕಂದ್ರೆ ಕೆಲಸದಲ್ಲಿ ಅಂಬರೀಶ್ ಚುರುಕು. ಅಂತಹ ವ್ಯಕ್ತಿಯನ್ನು ಸಂಪುಟದಿಂದ ಕೈಬಿಟ್ಟಿರುವುದು ತುಂಬಾ ನೋವಾಗಿದೆ. ದಯವಿಟ್ಟು ಸರ್ಕಾರ ಇದನ್ನ ಗಮನಿಸಿ, ಅವರನ್ನ ಸಂಪುಟದಿಂದ ಕೈಬಿಡದೆ ಮುಂದುವರಿಸಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ'' ಎಂದರು ನಿರ್ಮಾಪಕ ಕೆ.ಮಂಜು

English summary
Since, Kannada Actor, Congress Politician, Housing Minister Ambareesh dropped for C.M Siddaramaiah's Cabinet, Karnataka Film Chamber of Commerce has called for Kannada Film Industry Bandh tomorrow (June 20th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada