»   » 'ಅಂಬರೀಶ' ಚಿತ್ರಕ್ಕೆ ಮೇನ್ ಥಿಯೇಟರ್ ಸಿಕ್ತು..!?

'ಅಂಬರೀಶ' ಚಿತ್ರಕ್ಕೆ ಮೇನ್ ಥಿಯೇಟರ್ ಸಿಕ್ತು..!?

Posted By:
Subscribe to Filmibeat Kannada

ಬಿಡುಗಡೆಯ ಹೊಸ್ತಿಲಲ್ಲಿರುವ 'ಅಂಬರೀಶ' ಕಳೆದ ವಾರದಿಂದ ಗಾಂಧಿನಗರದಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಿರುವುದು ಥಿಯೇಟರ್ ವಿಷ್ಯದಲ್ಲಿ. 'ಅಂಬರೀಶ' ಚಿತ್ರಕ್ಕೆ ಕೆ.ಜಿ ರೋಡ್ ನಲ್ಲಿರುವ ಪ್ರಮುಖ ಚಿತ್ರಮಂದಿರ ಸಿಗುತ್ತಿಲ್ಲ. ಆದ್ರೇನಂತೆ, ಮಿಕ್ಕ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡ್ತೀವಿ, ಹೊಸ ಟ್ರೆಂಡ್ ಶುರುಮಾಡ್ತೀನಿ ಅಂತ ದರ್ಶನ್ ಟ್ವೀಟ್ ಕೂಡ ಮಾಡಿದ್ದರು.

ಇದೇ ಟ್ವೀಟ್ ನೊಂದಿಗೆ ದರ್ಶನ್ ಅಡ್ಡದಿಂದ ಬಂದಿರುವ ಮತ್ತೊಂದು ಟ್ವೀಟ್ ಪ್ರಕಾರ 'ಅಂಬರೀಶ' ಚಿತ್ರ ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರವೊಂದರಲ್ಲಿ ರಿಲೀಸ್ ಆಗುತ್ತಿದೆ. ಅದರ ಅಫೀಶಿಯಲ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಬೇಕಾದ್ರೆ ನೀವೇ ನೋಡಿ...

ಕೆ.ಜಿ.ರೋಡ್ ನ ಯಾವ ಥಿಯೇಟರ್ ನಲ್ಲಿ 'ಅಂಬರೀಶ' ರಿಲೀಸ್ ಆಗುತ್ತದೆ ಅಂತ ಇನ್ನೂ ಪಕ್ಕಾ ಆಗದ ಕಾರಣ, ಬರೀ ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ಅಂಬರೀಶ' ದರ್ಬಾರ್ ಶುರುವಾಗಲಿದೆ ಅನ್ನುವ ಪೋಸ್ಟರ್ ನ ದರ್ಶನ್ ಅಭಿಮಾನಿಗಳ ಸಂಘ 'ಡಿ'ಕಂಪನಿ ಟ್ವೀಟ್ ಮಾಡಿದೆ.

Ambareesha1

ಅಲ್ಲಿಗೆ, 'ಅಂಬರೀಶ' ಚಿತ್ರಕ್ಕೆ ಮೆಜೆಸ್ಟಿಕ್ ನಲ್ಲಿ ಥಿಯೇಟರ್ ಸಿಕ್ತಾ ಅಂದ್ರೆ, ಅದರ ಬಗ್ಗೆ ಯಾರೂ ಬಾಯಿಬಿಡುತ್ತಿಲ್ಲ. ಅಸಲಿಗೆ, ಗಾಂಧಿನಗರದಲ್ಲಿ ಎಲ್ಲಾ ಚಿತ್ರಮಂದಿರಗಳು ಸಿನಿಮಾಗಳಿಂದ ತುಂಬಿತುಳುಕುತ್ತಿಲ್ಲ. ಕೆಲ ಥಿಯೇಟರ್ ಗಳು ಖಂಡಿತ ಲಭ್ಯವಿದೆ. ಆದ್ರೆ ಅವು ದರ್ಶನ್ ಚಿತ್ರಕ್ಕೆ ಸೂಕ್ತವಿಲ್ಲ ಅನ್ನುವುದು ಕೆಲವರ ಅಭಿಪ್ರಾಯ. ['ಅಂಬರೀಶ' ಬಗ್ಗೆ ಮೌನ ಮುರಿದ ಚಾಲೆಂಜಿಂಗ್ ಸ್ಟಾರ್]

Ambareesha2

ಗಾಂಧಿನಗರದ ಉತ್ತಮ ಚಿತ್ರಮಂದಿರಕ್ಕೋಸ್ಕರ ಚಿತ್ರತಂಡ ಪ್ರಯತ್ನಿಸುತ್ತಿದೆ. ಒಂದ್ವೇಳೆ ಅದು ಸಿಕ್ಕರೆ, ಕೆ.ಜಿ.ರೋಡ್ ನ ಚಿತ್ರಮಂದಿರ ಜೊತೆಗೆ ಬೆಂಗಳೂರಿನ ಪ್ರಸನ್ನ, ನವರಂಗ್. ಸಿದ್ಧೇಶ್ವರ, ಗೋವರ್ಧನ್, ಬಾಲಾಜಿ. ಈಶ್ವರಿ, ಸೇರಿದಂತೆ ಮೈಸೂರಿನ ಶಾಂತಲ, ಸಂಗಮ್, ಮಂಡ್ಯದ ಸಂಜಯ್, ಬೆಳಗಾವಿಯ ಚಿತ್ರ, ಬಾಗಲಕೋಟೆಯ ವಾಸವಿ ಸೇರಿದಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ರಾಜ್ಯಾದ್ಯಂತ ದರ್ಶನ್ 'ಅಂಬರೀಶ' ಆರ್ಭಟ ಶುರುವಾಗಲಿದೆ. ಇಲ್ಲದಿದ್ದರೆ 'ಅಂಬರೀಶ' ಹೊಸ ಟ್ರೆಂಡ್ ಹುಟ್ಟುಹಾಕುವುದು ಖಚಿತ. (ಫಿಲ್ಮಿಬೀಟ್ ಕನ್ನಡ)

English summary
Challenging Star Darshan starrer Ambareesha movie is set to release on 20th November. But Ambareesha is yet to get main theatre in K.G.Road. Without confirmation of the main theatre, Darshan fans have prepared the list of other theatres where Ambareesha is releasing. Meanwhile, Ambareesha movie team is trying their best to get one of the best theatres in K.G.Road.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada