For Quick Alerts
  ALLOW NOTIFICATIONS  
  For Daily Alerts

  ಕೇರಳದಲ್ಲಿ ಅಂಬಿ-ಸುಹಾಸಿನಿ ಡ್ಯುಯೆಟ್

  By Bharath Kumar
  |
  ಕೆರಳ್ದಲ್ಲಿ ಅಂಬಿ - ಸುಹಾಸಿನಿ ರೋಮ್ಯಾನ್ಸ್ | Filmibeat Kannada

  ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ರಾಜಕೀಯದಿಂದ ಬ್ರೇಕ್ ತೆಗೆದುಕೊಂಡಿರುವ ಅಂಬರೀಶ್ ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಬ್ರೇಕ್ ಇಲ್ಲದೇ, ಸತತವಾಗಿ ಶೂಟಿಂಗ್ ನಡೆಯುತ್ತಿದೆ.

  ಅಂಬರೀಶ್, ಸುದೀಪ್ ಮತ್ತು ಶ್ರುತಿ ಹರಿಹರನ್ ಅವರ ಭಾಗದ ಚಿತ್ರೀಕರಣ ಸೇರಿ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಅಂತಿಮ ಘಟ್ಟಕ್ಕಾಗಿ ಕೇರಳಕ್ಕೆ ತೆರಳಿದೆ.

  ಕೇರಳದ ಕರಾವಳಿಯಲ್ಲಿ ಅಂಬರೀಶ್ ಮತ್ತು ಸುಹಾಸಿನಿ ಅವರ ನಡುವಿನ ದೃಶ್ಯಗಳನ್ನ ಸೆರೆಹಿಡಿಯಲಾಗುತ್ತಿದೆ. ಈ ವೇಳೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಕಾಣಿಸಿಕೊಂಡಿದ್ದು, ಇದು ಹಾಡಿನ ಚಿತ್ರೀಕರಣವಿರಬಹುದು ಎನ್ನಲಾಗಿದೆ.

  ಚುನಾವಣೆಗೆ ಗುಡ್ ಬೈ ಹೇಳಿದ ಅಂಬಿಯ ಹೊಸ ಲೈಫ್ ಸ್ಟೈಲ್ ನೋಡಿಚುನಾವಣೆಗೆ ಗುಡ್ ಬೈ ಹೇಳಿದ ಅಂಬಿಯ ಹೊಸ ಲೈಫ್ ಸ್ಟೈಲ್ ನೋಡಿ

  ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕನಾಗಿದ್ದು, ಅಂಬಿ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ತಮ್ಮ ತೂಕವನ್ನ ಕಡಿಮೆ ಮಾಡಿಕೊಂಡಿದ್ದು, ಕಿಚ್ಚ ಕೂಡ ಹೊಸ ರೀತಿಯಲ್ಲಿ ಮಿಂಚಿದ್ದಾರೆ.

  ಇನ್ನುಳಿದಂತೆ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ತಯಾರಾಗುತ್ತಿದ್ದು, ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇರಲಿದೆ. ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಇದಾಗಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ.

  English summary
  Rebel star Ambaaresh along with producer Jack manju and Imran Sardhariya in Kerala for the final schedule of ambi ning vayassaytho. Rebel and suhasini The two, who look younger for their age seen on the sets of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X