ಐಟಿ ದಾಳಿ: ರಶ್ಮಿಕಾ ಮಂದಣ್ಣ ಈಗ ಎಲ್ಲಿದ್ದಾರೆ?
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿಯಾಗಿದೆ. ಆದರೆ, ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಇದ್ದಾರೆ.
ಇಂದು (ಜನವರಿ 16) ತಮಿಳು ಸಿನಿಮಾದ ಚಿತ್ರೀಕರಣದಲ್ಲಿ ರಶ್ಮಿಕಾ ಭಾಗಿಯಾಗಬೇಕಾಗಿದೆ. ಸೂರ್ಯ ಈ ಸಿನಿಮಾದ ನಾಯಕನಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಇರುವ ಕಾರಣ ರಶ್ಮಿಕಾ ಹೈದರಾಬಾದ್ ವಿಮಾನ ನಿಲ್ದಾಣದಿಂದ ಚೆನ್ನೈಗೆ ಹೊರಟಿದ್ದಾರೆ.
ನಿನ್ನೆ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದು, 'ಪೊಗರು' ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮಾಡಿದ್ದಾರೆ. ಸಂಜೆ 7 ವರೆಗೆ ಡಬ್ಬಿಂಗ್ ಮಾಡಿದ ರಶ್ಮಿಕಾ ಮರಳಿ ಹೈದರಾಬಾದ್ ಗೆ ಹೋಗಿದ್ದಾರೆ. ಹೆಚ್ಚು ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಹೈದರಾಬಾದ್ ನಲ್ಲಿಯೇ ವಾಸ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಸಂಭಾವನೆ ಕೂಡ ಕೋಟಿ ದಾಟಿದೆ. ಇದು ರಶ್ಮಿಕಾ ಮನೆ ಮೇಲೆ ಐಟಿ ದಾಳಿಯಾಗಲು ಕಾರಣಗಳಲ್ಲಿ ಒಂದಾಗಿದೆ.
English summary
Amidst IT raid actress Rashmika Mandanna traveling to chennai shooting.


Click it and Unblock the Notifications