For Quick Alerts
  ALLOW NOTIFICATIONS  
  For Daily Alerts

  ಕೃತಿಚೌರ್ಯ ಆರೋಪಕ್ಕೆ ರಮೇಶ್ ತಿರುಗೇಟು

  By Rajendra
  |

  ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಎಎಂಆರ್ ರಮೇಶ್ ಅವರ 'ಅಟ್ಟಹಾಸ' ಚಿತ್ರ ಕೃತಿಚೌರ್ಯ ಆರೋಪಕ್ಕೆ ಗುರಿಯಾಗಿದೆ. 'ವೀರಪ್ಪನ್: ನರಹಂತಕನ ರುದ್ರ ನರ್ತನ' ಎಂಬ ತಮ್ಮ ಕೃತಿಯಿಂದ ಕತೆಕದ್ದು ಚಿತ್ರಕಥೆ ಮಾಡಿದ್ದಾರೆ ಎಂದು ಮೈಸೂರಿನ ಪತ್ರಕರ್ತ ಟಿ.ಗುರುರಾಜ್ ಗಂಭೀರ ಆರೋಪ ಮಾಡಿದ್ದರು.

  ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್, ನಾನು ಯಾರ ಕತೆಯನ್ನೂ ಕದ್ದಿಲ್ಲ. ಗುರುರಾಜ್ ಅವರನ್ನು ನಾನು ಇದುವರೆಗೂ ಭೇಟಿಯಾಗಿಲ್ಲ. ಅವರ ಕೃತಿಯನ್ನೂ ಓದಿಲ್ಲ. ವೀರಪ್ಪನ್ ಬಗ್ಗೆ ಈಗಾಗಲೆ ಹಲವಾರು ಜನ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅವರಿಗೆಲ್ಲಾ ಕ್ರೆಡಿಟ್ ಕೊಡುಲು ಸಾಧ್ಯವೆ? ಎಂದಿದ್ದಾರೆ.

  ಮುಂದುವರೆದು, 2006ರಿಂದ ವೀರಪ್ಪನ್ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ. ವೀರಪ್ಪನ್ ಜೊತೆಗೆ ಸಂಪರ್ಕವಿದ್ದವರನ್ನು ಸಂದರ್ಶಿಸಿದ್ದೇನೆ. ಇವೆಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿರುವ ದಾಖಲೆಗಳು ನನ್ನ ಬಳಿ ಇವೆ ಎಂದು ತಿಳಿಸಿದ್ದಾರೆ.

  ಆದರೆ ಪತ್ರಕರ್ತ ಗುರುರಾಜ್ ಅವರು ಮಾತ್ರ ತಮ್ಮ ಕೃತಿಯನ್ನು ಬಳಸಿಕೊಂಡಿದಕ್ಕೆ ಕೃತಜ್ಞತೆಗಳನ್ನು ತಿಳಿಸಲೇಬೇಕು ಹಾಗೂ ನನಗೆ ಬರಬೇಕಾಗಿರುವ ಗೌರವಧನ ಬರಲೇಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

  ಈ ಹಿಂದೊಮ್ಮೆ ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎ.ಎಂ.ಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್ ಆರ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ 'ಅಟ್ಟಹಾಸ' ಚಿತ್ರ ಬಿಡುಗಡೆಗೆ ಕೋರ್ಟ್ ನಿರ್ಬಂಧ ಹೇರಿ ಬಳಿಕ ತೆರವುಗೊಳಿಸಿತ್ತು.

  ಚಿತ್ರವೊಂದು ಇನ್ನೇನು ತೀರಾ ಬಿಡುಗಡೆ ಹಂತಕ್ಕೆ ಬಂದಾಗ ವಿವಾದಕ್ಕೀಡಾಗುವುದು ಕನ್ನಡ ಚಿತ್ರೋದ್ಯಮದಲ್ಲಿ ಇತ್ತೀಚೆಗೆ ಸಾಮಾನ್ಯ ಬೆಳವಣಿಗೆಯಾಗಿದೆ. ಪ್ರಚಾರಕ್ಕಾಗಿ ಹೀಗೆ ಮಾಡಲಾಗುತ್ತಿದೆಯೋ ಅಥವಾ ನಿಜವಾಗಿಯೂ ವಿವಾದ ಎದುರಾಗಿದೆಯೋ ಎಂಬುದು ಮಾತ ನಿಗೂಢವಾಗಿದೆ. (ಏಜೆನ್ಸೀಸ್)

  English summary
  Filmmaker AMR Ramesh turns down the plagiarism allegations on his upcoming movie Veerappan Attahasa. He says that he’ll not give credit to anyone. “I’ve never met Gururaj, and have not read his book. There are so many people who’ve written books and articles about Veerappan..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X