»   » ಗೌರಿ ಲಂಕೇಶ್ ಸಿನಿಮಾಗೆ ಆರಂಭದಲ್ಲೇ ಎದುರಾಯ್ತು ಸಮಸ್ಯೆ.!

ಗೌರಿ ಲಂಕೇಶ್ ಸಿನಿಮಾಗೆ ಆರಂಭದಲ್ಲೇ ಎದುರಾಯ್ತು ಸಮಸ್ಯೆ.!

Posted By:
Subscribe to Filmibeat Kannada

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತು ಸಿನಿಮಾ ಮಾಡಲಿದ್ದೇನೆ ಎಂದು ನಿರ್ದೇಶಕ ಎ.ಎಂ.ಆರ್ ರಮೇಶ್ ಹೇಳಿದ್ದರು. ಆದ್ರೆ, ಸಿನಿಮಾ ಆರಂಭವಾಗುವುದಕ್ಕೆ ಮುಂಚೆ ಈಗ ವಿಘ್ನ ಎದುರಾಗಿದೆ.

ಹೌದು, ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರು ''ತಮ್ಮ ಮಗಳ ಬಗ್ಗೆ ಸಿನಿಮಾ ಮಾಡಬಾರದು'' ಎಂದು ಎ.ಎಂ.ಆರ್ ರಮೇಶ್ ಮತ್ತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕನ್ನಡದಲ್ಲಿ ಶುರುವಾಗಲಿದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಿನಿಮಾ!

ಹೀಗಿದ್ದರೂ, ನಿರ್ದೇಶಕರು ಸಿನಿಮಾ ಮಾಡೇ ಮಾಡ್ತೀನಿ ಎನ್ನುತ್ತಿದ್ದಾರೆ. ಹಾಗಿದ್ರೆ, ಗೌರಿ ಲಂಕೇಶ್ ಅವರ ಸಿನಿಮಾದಲ್ಲಿ ಎ.ಎಂ.ಆರ್ ರಮೇಶ್ ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನ ಸ್ವತಃ ಅವರೇ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಸಿನಿಮಾ ಮಾಡುವುದು ಖಚಿತಾ

''ಗೌರಿ ಲಂಕೇಶ್ ಅವರ ಬಗ್ಗೆ ಸಿನಿಮಾ ಮಾಡ್ತೀನಿ ಎನ್ನುವುದು ಸತ್ಯ. ಆದ್ರೆ, ಸಿನಿಮಾ ಮಾಡಬಾರದು ಅಂತ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ನಾನು ಮಾಧ್ಯಮಗಳಲ್ಲೇ ನೋಡಿದ್ದೇ. ಯಾವುದೇ ನೋಟಿಸ್ ನನ್ನ ಕೈಗೆ ಸೇರಿಲ್ಲ'' - ಎ.ಎಂ.ಆರ್.ರಮೇಶ್, ನಿರ್ದೇಶಕ

ಇದು ನನ್ನ ವೈಯಕ್ತಿಕ ಆಸಕ್ತಿ

''ಸಿನಿಮಾ ಮಾಡೋದು ಬಿಡೋದು ನನ್ನ ವೈಯಕ್ತಿಕ ವಿಷಯ. ಗೌರಿ ಲಂಕೇಶ್ ಹತ್ಯೆಯಾಗಿದೆ. ಅದು ನಿಜ. ಸಾರ್ವಜನಿಕ ಚರ್ಚೆಯಲ್ಲಿದೆ. ಆಗಿರುವ ವಿಷ್ಯವನ್ನ ನಾನು ಸಿನಿಮಾ ಮಾಡ್ತೀನಿ'' - ಎ.ಎಂ.ಆರ್.ರಮೇಶ್, ನಿರ್ದೇಶಕ

ಕಥೆಯಲ್ಲಿ ಏನೇನಿರುತ್ತೆ?

''ಈ ಚಿತ್ರದಲ್ಲಿ ಅವರ ವೈಯಕ್ತಿಕವಾಗಿ ಯಾವುದು ಬರಲ್ಲ. ಗೌರಿ ಲಂಕೇಶ್ ಅವರ ಪರ್ಸನಲ್ ನಾವು ಟಾರ್ಗೆಟ್ ಮಾಡ್ತಿಲ್ಲ. ನಾನು ಇಂದ್ರಜಿತ್ ಲಂಕೇಶ್ ಅವರ ಜೊತೆ ವರ್ಕ್ ಮಾಡಿದ್ದೀನಿ. ವೈಯಕ್ತಿಕವಾಗಿ ಗೌರಿ ಲಂಕೇಶ್ ಅವರ ಪರಿಚಯ ಇದೆ. ಅಷ್ಟು ಮಾತ್ರ ನಾನು ತೋರಿಸುತ್ತೇನೆ'' - ಎ.ಎಂ.ಆರ್.ರಮೇಶ್, ನಿರ್ದೇಶಕ

ಸಂಶೋಧನ ಹಂತದಲ್ಲಿದೆ

''ನಾನು ಈಗಲೇ ಸಿನಿಮಾ ಮಾಡುತ್ತಿಲ್ಲ. ಸದ್ಯಕ್ಕೆ ರಿಸರ್ಚ್ ಹಂತದಲ್ಲಿದೆ. ಪೋಲಿಸರಿಗೆ ಸಿಕ್ಕಿರುವ ಮಾಹಿತಿಯನ್ನ ಕಾನೂನಾತ್ಮಕವಾಗಿ ಪಡೆದುಕೊಳ್ಳುತ್ತೇನೆ. ನಾನು ಪರ್ಸನಲ್ ಆಗಿ ರಿಸರ್ಚ್ ಮಾಡಿರುವ ಮಾಹಿತಿ ಇಟ್ಕೊಂಡು ಸಿನಿಮಾ ಮಾಡ್ತೀನಿ'' - ಎ.ಎಂ.ಆರ್.ರಮೇಶ್, ನಿರ್ದೇಶಕ

English summary
Director Amr Ramesh responded to the legal notice issued by Indira Lankesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada