»   » ಮದುವೆ ನಂತರ ಫೇಸ್‌ಬುಕ್ ಲೈವ್ ಬಂದಿದ್ದ ಅಮೂಲ್ಯ ಹೇಳಿದ್ದೇನು?

ಮದುವೆ ನಂತರ ಫೇಸ್‌ಬುಕ್ ಲೈವ್ ಬಂದಿದ್ದ ಅಮೂಲ್ಯ ಹೇಳಿದ್ದೇನು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ನಿನ್ನೆ(ಮೇ 14) ಬೆಂಗಳೂರಿನ ಪ್ರತಿಷ್ಟಿತ ಪಂಚತಾರಾ ಹೋಟೆಲ್ ಐಟಿಸಿ ಗಾರ್ಡೇನಿಯಾದಲ್ಲಿ 'ವೆಡ್ಡಿಂಗ್ ಪಾರ್ಟಿ'ಯನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ.[ಚಿತ್ರಗಳು: ಪಂಚತಾರಾ ಹೋಟೆಲ್ ನಲ್ಲಿ 'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟಿ]

ಅಂದಹಾಗೆ ಇದುವರೆಗೆ ಒಮ್ಮೆಯೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಬರದ ಅಮೂಲ್ಯ, ಮದುವೆ ನಂತರ ಮೊಟ್ಟ ಮೊದಲ ಬಾರಿಗೆ ಪತಿ ಜಗದೀಶ್ ರೊಂದಿಗೆ ಇಂದು(ಮೇ 15) ಲೈವ್ ಬಂದಿದ್ದರು. ಈ ವೇಳೆ ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಜಗದೀಶ್ ಏನು ಹೇಳಿದರು ಎಂಬ ಮಾಹಿತಿ ಇಲ್ಲಿದೆ ಓದಿ..

ಫೇಸ್ ಬುಕ್ ಲೈವ್ ನಲ್ಲಿ ಅಮೂಲ್ಯ ಹೇಳಿದ್ದೇನು?

ಮೊಟ್ಟ ಮೊದಲ ಬಾರಿಗೆ ಮದುವೆ ನಂತರ ಫೇಸ್ ಬುಕ್ ಲೈವ್ ಬಂದಿದ್ದ ಅಮೂಲ್ಯ "ಫೇಸ್ ಬುಕ್ ಲೈವ್ ಬಂದಿರೋದು ನೇರವಾಗಿ ಅಲ್ಲದಿದ್ದರೂ ಮಾತಿನ ಮೂಲಕ ಆರತಕ್ಷತೆಗೆ ಆಹ್ವಾನ ಮಾಡಲು ಬಂದಿದೀವಿ" ಎಂದು ಹೇಳಿದರು.

ಅಭಿಮಾನಿಗಳನ್ನು ಆಹ್ವಾನಿಸಿದ ದಂಪತಿಗಳು

ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದ ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರು ತಮ್ಮ ದಾಂಪತ್ಯ ಜೀವನಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ಅಲ್ಲದೇ ನಾಳೆ (ಮೇ 16) ರಾಜ ರಾಜೇಶ್ವರಿ ನಗರದಲ್ಲಿರುವ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯುವ ಆರತಕ್ಷತೆಗೆ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಆಹ್ವಾನ ನೀಡಿದ್ದಾರೆ. ತುಂಬಾ ದೂರ ಇದ್ದು ಬರೋಕೆ ಆಗ್ಲಿಲ್ಲ ಅಂದ್ರು ಬೇಸರ ಪಟ್ಟುಕೊಳ್ಳದೇ ನಮ್ಮ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಎಂದು ಜಗದೀಶ್ ಫೇಸ್ ಬುಕ್ ಲೈವ್ ವೇಳೆ ಹೇಳಿದ್ದಾರೆ.

ಫೇಸ್ ಬುಕ್ ಲೈವ್ ಬರ್ತೀವಿ

"ಆಗಾಗ ಯಾವುದೇ ವಿಶೇಷ ಕಾರ್ಯಕ್ರಮಗಳು ಇದ್ದರೂ ಫೇಸ್ ಬುಕ್ ಲೈವ್ ಬರ್ತೀವಿ. ಏನಾದ್ರು ವಿಶೇಷ ಕಾರ್ಯಕ್ರಮಗಳಿದ್ದಲ್ಲಿ ಅಪ್ ಡೇಟ್ ನೀಡುತ್ತೇವೆ" - ಜಗದೀಶ್, ಅಮೂಲ್ಯ ಪತಿ.

ಅಮೂಲ್ಯ ಅವರೊಂದಿಗಿನ ಅನುಬಂಧ ಮುಂದುವರೆಸಬಹುದು..

"ಅಮೂಲ್ಯ ಅಭಿಮಾನಿಗಳು ಅವರೊಂದಿಗೆ ಇನ್ನೂ ಮಾತಾಡೋಕೆ ಆಗುತ್ತೋ? ಇಲ್ಲವೋ? ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಮನೆಗೆ ಬಂದು ಎಂದಿನಂತೆ ಅವರ ಹುಟ್ಟು ಹಬ್ಬಕ್ಕೆ ವಿಶ್ ಮಾಡುವುದು ಅಥವಾ ವಿಶೇಷ ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡುವುದು ಮತ್ತು ಮಾತನಾಡಿಸುವುದನ್ನು ಮುಂದುವರೆಸಬಹುದು" - ಜಗದೀಶ್, ಅಮೂಲ್ಯ ಪತಿ

ಸಾಮಾಜಿಕ ಜಾಲತಾಣದಲ್ಲಿ ಕಾಂಟ್ಯಾಕ್ಟ್ ಮಾಡಬಹುದು

"ನಮ್ಮನ್ನು (ಜಗದೀಶ್, ಅಮೂಲ್ಯ) ಫೇಸ್ ಬುಕ್, ಟ್ವಿಟರ್ ನಲ್ಲಿ ಕಾಂಟ್ಯಾಕ್ಟ್ ಮಾಡಬಹುದು. ನಾವು ಏನೇ ಎಕ್ಸ್ ಕ್ಲೂಸಿವ್ ಮಾಹಿತಿ ಇದ್ದರೂ ಅಪ್ ಡೇಟ್ ಮಾಡುತ್ತೇವೆ" ಎಂದು ಅಮೂಲ್ಯ ಹೇಳಿದರು.

ಗೋ ಗ್ರೀನ್

"ಈ ಬೇಸಿಗೆ ಕಾಲದಲ್ಲಿ ಅಸಂಖ್ಯಾತ ಗಿಡಗಳು ಒಣಗಿ ಹೋಗಿವೆ. ನಾವು ಮರೆತು ಅದರ ಬಗ್ಗೆ ಗಮನಹರಿಸದಿರಬಹುದು. ಆದರೆ ಇನ್ನು ಮುಂದಾದರೂ ಎಲ್ಲರೂ ಸಹ ಗೋ ಗ್ರೀನ್ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಸಾಧ್ಯವಾದಗಲೆಲ್ಲಾ ಗಿಡಗಳನ್ನು ನೆಡಿ. ನಮ್ಮ ಆರತಕ್ಷತೆಗೆ ಬರುವವರು ಗಿಫ್ಟ್ ತರಬಾರದು, ಬಂದು ಮನಸ್ಸು ಪೂರ್ತಿಯಾಗಿ ಆಶೀರ್ವಾದ ಮಾಡಿ. ಉಡುಗೊರೆ ಬದಲು ಒಂದು ಚಿಕ್ಕ ಬೌಲ್ ನಲ್ಲಿ ಸಸಿ ಹಾಕಿ ಬೆಳೆಸಿ ಅದರ ಫೋಟೋ ಕಳುಹಿಸಿ. ಅದೇ ನಮಗೆ ಖುಷಿ" ಎಂದು ಅಮೂಲ್ಯ ಫೇಸ್ ಬುಕ್ ಲೈವ್ ವೇಳೆ ಹೇಳಿದರು.

English summary
After Marriage Amulya and Jagadish has come facebook live for the first time to invite fans to their Reception.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada