»   » ಸ್ಕೂಟಿಯಿಂದ ಬಿದ್ದ ಬ್ಯೂಟಿ ಅಮೂಲ್ಯ ಕಾಲಿಗೆ ಪೆಟ್ಟು

ಸ್ಕೂಟಿಯಿಂದ ಬಿದ್ದ ಬ್ಯೂಟಿ ಅಮೂಲ್ಯ ಕಾಲಿಗೆ ಪೆಟ್ಟು

Posted By:
Subscribe to Filmibeat Kannada

ಮೊನ್ನೆ ಭಾನುವಾರ 'ಮಳೆ' ಚಿತ್ರದ ಪತ್ರಿಕಾಗೋಷ್ಠಿ ಗಾಂಧಿನಗರದಲ್ಲಿ ನಡೆಯಿತು. ಪತ್ರಿಕಾಗೋಷ್ಠಿ ಅಂದ್ಮೇಲೆ 'ಮಳೆ' ಚಿತ್ರದ ನಟ ಲವ್ಲಿ ಸ್ಟಾರ್ ಪ್ರೇಮ್, ನಾಯಕಿ ಅಮೂಲ್ಯ, ನಿರ್ದೇಶಕ ತೇಜಸ್ ಎಲ್ಲರೂ ಇರಲೇಬೇಕು. ಹಾಗೆ, ಎಲ್ಲರೂ ಆಗಮಿಸಿದ್ದರು ಕೂಡ.

ಟೈಮ್ ಗೆ ಸರಿಯಾಗಿ ಹಾಜರಾದ ಅಮೂಲ್ಯ ಕುಂಟುತ್ತಲೇ, ವೇದಿಕೆ ಮೇಲೆ ಹತ್ತಿದರು. ನೋಡಿದ್ರೆ, ಅವರ ಎಡಗಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಕೊಂಚ ಮಂಕಾಗಿ ಕಾಣುತ್ತಿದ್ದ ಅಮೂಲ್ಯ ಇಡೀ ಪ್ರೆಸ್ ಮೀಟ್ ನ ನೋವಲ್ಲೇ ನಿಭಾಯಿಸಿದರು.


ಅಷ್ಟಕ್ಕೂ ಅಮೂಲ್ಯಗೆ ಆಗಿರೋದೇನು ಅಂದ್ರೆ, ಸ್ಕೂಟಿಯಿಂದ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. 7 ವರ್ಷಗಳ ಬಳಿಕ ಸ್ಕೂಟಿಯನ್ನ ಹಿಡಿದಿರುವ ಅಮೂಲ್ಯ, ಬ್ಯಾಲೆನ್ಸ್ ಮಿಸ್ಸಾಗಿ ಬಿದ್ದ ಕಾರಣ ಕಾಲಿಗೆ ಏಟಾಗಿದೆ. [ಏಪ್ರಿಲ್ ನಲ್ಲಿ ಪ್ರೇಮ್-ಅಮೂಲ್ಯ 'ಮಳೆ' ಆರ್ಭಟ]


Amulya injured on the sets of Maduveya Mamatheya Kareyole

ಕವಿರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ತಯಾರಿಯಲ್ಲಿ ಅಮೂಲ್ಯ ತೊಡಗಿದ್ದರು. ಸಿನಿಮಾದಲ್ಲಿ ಅಮೂಲ್ಯ ಸ್ಕೂಟಿಯನ್ನ ಓಡಿಸಬೇಕು. ಅದಕ್ಕೆ ಪ್ರ್ಯಾಕ್ಟೀಸ್ ಮಾಡುತ್ತಿರುವಾಗ ಈ ಘಟನೆ ಸಂಭವಿಸಿದೆ. [ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']


'ಚೆಲುವಿನ ಚಿತ್ತಾರ' ಸಿನಿಮಾವೊಂದನ್ನ ಬಿಟ್ಟರೆ, ಅಮೂಲ್ಯ ಬೇರಾವ ಚಿತ್ರದಲ್ಲೂ ದ್ವಿಚಕ್ರ ವಾಹನವನ್ನ ಮುಟ್ಟಿರಲಿಲ್ಲ. ನಿಜ ಜೀವನದಲ್ಲೂ ಅಮೂಲ್ಯ ಗಾಡಿ ಓಡಿಸೋಲ್ಲ. ಪ್ರ್ಯಾಕ್ಟೀಸ್ ಮಿಸ್ ಆಗಿದ್ರಿಂದ ಹೀಗಾಗಿದೆ ಅಂತಾರೆ ಅಮೂಲ್ಯ. [ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!]


ಸಣ್ಣ ಏಟಾಗಿದ್ದು, ಗಾಬರಿ ಪಡುವಂಥದ್ದು ಏನಿಲ್ಲ ಅಂತ ವೈದ್ಯರು ಹೇಳಿದ್ದಾರಂತೆ. ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಬದಲು, ನೋವಲ್ಲೂ ಪ್ರೆಸ್ ಮೀಸ್ ಗೆ ಆಗಮಿಸಿ ತಮ್ಮ ವೃತ್ತಿಪರತೆ ಮೇಲಿನ ನಿಷ್ಠೆಯನ್ನ ಅಮೂಲ್ಯ ತೋರಿಸಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಅಮೂಲ್ಯ ಮೊದಲಿನಂತಾಗಲಿ ಅಂತ ನಾವೂ ಹಾರೈಸೋಣ. (ಫಿಲ್ಮಿಬೀಟ್ ಕನ್ನಡ)

English summary
Kannada Actress Amulya has injured her left leg while learning bike ride for her upcoming film 'Maduveya Mamatheya Kareyole'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada