»   » ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ

ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ

Posted By:
Subscribe to Filmibeat Kannada

'ರಾಮ್ ಲೀಲಾ' ಆಗಲಿದ್ದಾರೆ ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ! ಹಾಗಂದಾಕ್ಷಣ, ಇದು ಬಾಲಿವುಡ್ ಬಾಕ್ಸ್ ಆಫೀಸ್ ಲೂಟಿ ಮಾಡಿದ 'ರಾಮ್ ಲೀಲಾ' ಚಿತ್ರದ ರೀಮೇಕ್ ಅಂತ ಭಾವಿಸಬೇಕಿಲ್ಲ.

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ರಾಮ್ ಲೀಲಾ' ಚಿತ್ರಕ್ಕೂ, ಈ ಚಿತ್ರಕ್ಕೂ ಸಂಬಂಧ ಇಲ್ಲ. ಕನ್ನಡದ 'ರಾಮ್ ಲೀಲಾ' ರೀಮೇಕ್ ಸಿನಿಮಾ ಅನ್ನುವುದು ದಿಟ. ಆದ್ರೆ, ಇದು ಟಾಲಿವುಡ್ ಅಂಗಳದಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ್ದ 'ಲೌಕ್ಯಂ' ಚಿತ್ರದ ರೀಮೇಕ್.

amulya-chiranjeevi sarja

ಗೋಪಿಚಂದ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ತೆಲುಗಿನ 'ಲೌಕ್ಯಂ' ಚಿತ್ರವನ್ನ ಕನ್ನಡಕ್ಕೆ ತರುತ್ತಿರುವುದು ನಿರ್ದೇಶಕ ವಿಜಯ್ ಕಿರಣ್. ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ರಂತಹ ದೊಡ್ಡ ತಾರಾಬಳಗವಿರುವ 'ರಾಮ್ ಲೀಲಾ' ಚಿತ್ರದಲ್ಲಿ ಮೊದಲ ಬಾರಿಗೆ ಚಿರಂಜೀವಿ ಸರ್ಜಾಗೆ ಜೋಡಿಯಾಗಿದ್ದಾರೆ ಅಮೂಲ್ಯ.

'ರುದ್ರತಾಂಡವ' ಯಶಸ್ಸಿನಲ್ಲಿ ತೇಲುತ್ತಿರುವ ಚಿರಂಜೀವಿ ಸರ್ಜಾ ರೀಮೇಕ್ ಲಿಸ್ಟ್ ಗೆ 'ರಾಮ್ ಲೀಲಾ' ಹೊಸ ಸೇರ್ಪಡೆಯಾಗಿದೆ. ರೀಮೇಕ್ ಆದ್ರೂ ಒಳ್ಳೆ ಪಾತ್ರ ಮುಖ್ಯ ಅಂತ ಹೇಳುವ ಅಮೂಲ್ಯಗೆ 'ಲೌಕ್ಯಂ' ಚಿತ್ರದ ನಾಯಕಿ ಪಾತ್ರ ಬಹಳ ಇಷ್ಟವಂತೆ. ಅದಕ್ಕೆ ಈ ಆಫರ್ ನ ಒಪ್ಪಿಕೊಂಡರಂತೆ. [ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']

ಬಿಗ್ ಬಜೆಟ್ ನಲ್ಲಿ 'ರಾಮ್ ಲೀಲಾ' ರೆಡಿಯಾಗಲಿದ್ದು, ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಏಪ್ರಿಲ್ ನಲ್ಲಿ ಕನ್ನಡದ 'ರಾಮ್ ಲೀಲಾ' ಸೆಟ್ಟೇರಲಿದೆ.

English summary
For the first time Amulya will be sharing her onscreen space with Chiranjeevi Sarja in 'Ramleela', which is the official remake of Telugu Superhit movie 'Loukyam'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada