For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಸೆಟ್ ಗೆ ಹೋದ ದಿನವೇ ನಟಿ ಆಮಿ ಜಾಕ್ಸನ್ ಗೆ ಕಿರಿಕಿರಿ ಆಗಿತ್ತು.! ಕಾರಣ.?

  By Harshitha
  |

  'ದಿ ವಿಲನ್' ಚಿತ್ರದ ಚಿತ್ರೀಕರಣ ಬ್ಯಾಂಕಾಕ್ ನಲ್ಲಿ ಪ್ಯಾಕಪ್ ಆಗಿದೆ. ಬ್ಯಾಂಕಾಕ್ ನಿಂದ ವಾಪಸ್ ಆಗಿರುವ 'ದಿ ವಿಲನ್' ಚಿತ್ರತಂಡ ಇದೀಗ ಲಡಾಕ್ ಕಡೆ ಪ್ರಯಾಣ ಬೆಳೆಸಲಿದೆ.

  ಬ್ಯಾಂಕಾಕ್ ನಲ್ಲಿ ಕಿಚ್ಚ ಸುದೀಪ್ ಹಾಗೂ ಆಮಿ ಜಾಕ್ಸನ್ ಭಾಗವಹಿಸಿರುವ ಅನೇಕ ಸ್ಟಂಟ್ ಸನ್ನಿವೇಶಗಳನ್ನ ಚಿತ್ರೀಕರಿಸಲಾಗಿದೆ. ಈ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನಾವು ಅಪ್ ಡೇಟ್ ನೀಡುತ್ತಲೇ ಇದ್ವಿ.

  ಇದೀಗ ಬ್ಯಾಂಕಾಕ್ ನಲ್ಲಿ ಬಿಹೈಂಡ್ ದಿ ಸ್ಕ್ರೀನ್ ನಡೆದ ಒಂದು ಘಟನೆ ಬಗ್ಗೆ ವಿವರವಾಗಿ ಹೇಳ್ತೀವಿ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಬ್ಯಾಂಕಾಕ್ ಗೆ ಕಾಲಿಟ್ಟ ದಿನವೇ ಆಮಿ ಜಾಕ್ಸನ್ ಗೆ ಶುರು ಆಗಿತ್ತು ಕಿರಿಕಿರಿ.!

  ಬ್ಯಾಂಕಾಕ್ ಗೆ ಕಾಲಿಟ್ಟ ದಿನವೇ ಆಮಿ ಜಾಕ್ಸನ್ ಗೆ ಶುರು ಆಗಿತ್ತು ಕಿರಿಕಿರಿ.!

  ಮೊಟ್ಟಮೊದಲ ಬಾರಿಗೆ 'ದಿ ವಿಲನ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಆಮಿ ಜಾಕ್ಸನ್ ಗೆ, 'ದಿ ವಿಲನ್' ಚಿತ್ರತಂಡ ಸೇರಿಕೊಳ್ಳುವ ಮೊದಲ ದಿನವೇ ಕಿರಿಕಿರಿ ಆಗಿತ್ತು. ಅದಕ್ಕೆ ಕಾರಣ ಮುಂಬೈ ಏರ್ ಪೋರ್ಟ್ ನಲ್ಲಾದ ಗಜಿಬಿಜಿ.!

  ಆಮಿ ಜಾಕ್ಸನ್ ಮಾಡಿದ ಸ್ಟಂಟ್ ನೋಡಿ ನಿಬ್ಬೆರಗಾದ 'ಜೋಗಿ' ಪ್ರೇಮ್

  ಬ್ಯಾಗ್ ಮಿಸ್ ಪ್ಲೇಸ್.!

  ಬ್ಯಾಗ್ ಮಿಸ್ ಪ್ಲೇಸ್.!

  ಮುಂಬೈನಿಂದ ಥೈಲ್ಯಾಂಡ್ ಗೆ ಪ್ರಯಾಣ ಬೆಳೆಸಿದ ಆಮಿ ಜಾಕ್ಸನ್ ಬ್ಯಾಗ್ ಏರ್ ಪೋರ್ಟ್ ನಲ್ಲಿ ಮಿಸ್ ಪ್ಲೇಸ್ ಆಗಿತ್ತು. ಮುಂಬೈನಿಂದ ಥೈಲ್ಯಾಂಡ್ ಗೆ ತಲುಪಬೇಕಾದ ಆಮಿ ಜಾಕ್ಸನ್ ಲಗೇಜು ಬೇರೆ ಜಾಗ ತಲುಪಿತ್ತು. ಈ ವಿಚಾರ ಆಮಿ ಜಾಕ್ಸನ್ ಗೆ ಗೊತ್ತಾಗಿದ್ದು ಥೈಲ್ಯಾಂಡ್ ತಲುಪಿದ ಮೇಲೆ. ಆಮಿ ಜಾಕ್ಸನ್ ಪ್ರಯಾಣ ಬೆಳೆಸಿದ ಏರ್ ಲೈನ್ಸ್ ಸಂಸ್ಥೆ, ಆಕೆಯ ಲಗೇಜ್ ನ ಮಿಸ್ ಪ್ಲೇಸ್ ಮಾಡಿತ್ತು. ಎರಡು ದಿನಗಳಲ್ಲಿ ಲಗೇಜ್ ನ ವಾಪಸ್ ತಲುಪಿಸುವುದಾಗಿ ಏರ್ ಲೈನ್ಸ್ ಸಂಸ್ಥೆ ತಿಳಿಸಿತ್ತು.

  ಪರದಾಡಿದ ಆಮಿ ಜಾಕ್ಸನ್

  ಪರದಾಡಿದ ಆಮಿ ಜಾಕ್ಸನ್

  ತಮಗೆ ಬೇಕಾದ ಅಗತ್ಯ ವಸ್ತುಗಳಿದ್ದ ಬ್ಯಾಗ್ ಇಲ್ಲದಿದ್ರಿಂದ ಎರಡು ದಿನಗಳ ಕಾಲ ಥೈಲ್ಯಾಂಡ್ ನಲ್ಲಿ ಆಮಿ ಜಾಕ್ಸನ್ ಪರದಾಡುವಂತಾಗಿತ್ತು. ಬಟ್ಟೆ-ಬರೆ ಇಲ್ಲದೇ ಕಿರಿಕಿರಿ ಅನುಭವಿಸುವಂತಾಗಿತ್ತು.

  ವೃತ್ತಿಪರತೆ ಮೆರೆದ ಆಮಿ ಜಾಕ್ಸನ್

  ವೃತ್ತಿಪರತೆ ಮೆರೆದ ಆಮಿ ಜಾಕ್ಸನ್

  ಬ್ಯಾಗ್ ಮಿಸ್ ಆಗಿದ್ದರೂ, 'ದಿ ವಿಲನ್' ಚಿತ್ರದ ಚಿತ್ರೀಕರಣಕ್ಕೆ ಆಮಿ ಜಾಕ್ಸನ್ ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟಿಲ್ವಂತೆ. ತಮಗೆ ಕಿರಿಕಿರಿ ಆಗಿದ್ದರೂ, ಅದನ್ನ ಶೂಟಿಂಗ್ ಸ್ಪಾಟ್ ನಲ್ಲಿ ತೋರಿಸಿಕೊಳ್ಳದೇ, ವೃತ್ತಿಪರತೆ ಮೆರೆದರಂತೆ ಆಮಿ ಜಾಕ್ಸನ್. ಚಿತ್ರೀಕರಣದ ಬಿಡುವಿನಲ್ಲಿ ಬ್ಯಾಂಕಾಕ್ ಬೀದಿಗಳಲ್ಲಿಯೇ, ಕೆಲ ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡಿ ಎರಡು ದಿನ ಮ್ಯಾನೇಜ್ ಮಾಡಿದರಂತೆ ಆಮಿ ಜಾಕ್ಸನ್.

  ಕೊನೆಗೂ 'ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಆಮಿ ಜಾಕ್ಸನ್

  ಬ್ಯಾಗ್ ಬಂದ್ಮೇಲೆ ಖುಷ್

  ಬ್ಯಾಗ್ ಬಂದ್ಮೇಲೆ ಖುಷ್

  ಎರಡು ದಿನಗಳ ನಂತರ ತಮ್ಮ ಬ್ಯಾಗ್ ತಮ್ಮ ಕೈಸೇರಿದ್ಮೇಲೆ, ಆಮಿ ಜಾಕ್ಸನ್ ಗೆ ಸಮಾಧಾನ ಆಗಿದೆ.

  ಲಡಾಕ್ ಕಡೆ 'ದಿ ವಿಲನ್' ಚಿತ್ರತಂಡ

  ಲಡಾಕ್ ಕಡೆ 'ದಿ ವಿಲನ್' ಚಿತ್ರತಂಡ

  ಸದ್ಯ ಬ್ಯಾಂಕಾಕ್ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ 'ದಿ ವಿಲನ್' ಚಿತ್ರತಂಡ ಲಡಾಕ್ ಕಡೆ ಪ್ರಯಾಣ ಬೆಳೆಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ದಿ ವಿಲನ್' ಟೀಂ ಸೇರಿಕೊಳ್ಳಲಿದ್ದಾರೆ.

  English summary
  Actress Amy Jackson was at a loss when her baggage was misplaced at Mumbai Airport while she had been travelling from Mumbai to Thailand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X