»   » ಆಮಿ ಜಾಕ್ಸನ್ ಮಾಡಿದ ಸ್ಟಂಟ್ ನೋಡಿ ನಿಬ್ಬೆರಗಾದ 'ಜೋಗಿ' ಪ್ರೇಮ್

ಆಮಿ ಜಾಕ್ಸನ್ ಮಾಡಿದ ಸ್ಟಂಟ್ ನೋಡಿ ನಿಬ್ಬೆರಗಾದ 'ಜೋಗಿ' ಪ್ರೇಮ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಸ್ಕ್ರೀನ್ ಶೇರ್ ಮಾಡುತ್ತಿರುವ ಮೆಗಾ ಬಜೆಟ್ ಸಿನಿಮಾ 'ದಿ ವಿಲನ್' ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಬ್ಯಾಂಕಾಕ್ ನಲ್ಲಿ 'ದಿ ವಿಲನ್' ಚಿತ್ರೀಕರಣ ಮುಗಿದಿದೆ. ಕಿಚ್ಚ ಸುದೀಪ್ ಜೊತೆಗೆ ನಟಿ ಆಮಿ ಜಾಕ್ಸನ್ ಕೂಡ ಬ್ಯಾಂಕಾಕ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಹೇಳಿ ಕೇಳಿ ಆಮಿ ಜಾಕ್ಸನ್ ಪರಭಾಷೆ ನಟಿ. ಬಹು ಬೇಡಿಕೆಯಲ್ಲಿರುವ ತಾರಾಮಣಿ. ಯಶಸ್ಸಿನ ಏಣಿ ಹತ್ತುತ್ತಿರುವ ಆಮಿ ಜಾಕ್ಸನ್ 'ದಿ ವಿಲನ್' ಚಿತ್ರತಂಡಕ್ಕೆ ಕೋ-ಆಪರೇಟ್ ಮಾಡುತ್ತಾರಾ.? ಟೈಮ್ ಗೆ ಸರಿಯಾಗಿ ಶೂಟಿಂಗ್ ಸ್ಪಾಟ್ ಗೆ ಹಾಜರ್ ಅಗುತ್ತಾರಾ.? ಇಲ್ಲ ಕೆಲವರಂತೆ ತಂಟೆ-ತಕರಾರು ಮಾಡಿಕೊಳ್ಳುತ್ತಾರಾ.? ಎಂಬ ಅನುಮಾನ ಅನೇಕರಿಗೆ ಕಾಡಿದ್ದು ಸುಳ್ಳಲ್ಲ. ಈಗ ಇದೇ ಅನುಮಾನಕ್ಕೆ ಬ್ರೇಕ್ ಬಿದ್ದಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಪಕ್ಕಾ ಪ್ರೊಫೆಶನಲ್ ಅಂತೆ ಆಮಿ ಜಾಕ್ಸನ್

ಆಮಿ ಜಾಕ್ಸನ್ ಪಕ್ಕಾ ಪ್ರೊಫೆಶನಲ್ ನಟಿ ಎನ್ನುತ್ತಾರೆ ನಿರ್ದೇಶಕ ಪ್ರೇಮ್. ಹೇಳಿರುವ ಟೈಮ್ ಗೆ ಸರಿಯಾಗಿ ಶೂಟಿಂಗ್ ಸ್ಪಾಟ್ ಗೆ ಆಮಿ ಜಾಕ್ಸನ್ ಹಾಜರ್ ಆಗುತ್ತಾರಂತೆ.

ಕೊನೆಗೂ 'ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಆಮಿ ಜಾಕ್ಸನ್

ಒಂದು ವಾರ ಚಿತ್ರೀಕರಣ

''ಒಂದು ವಾರ ಆಮಿ ಜಾಕ್ಸನ್ ಜೊತೆ ಶೂಟಿಂಗ್ ಮಾಡಿದ್ದೇವೆ. ಒಂದು ಸೀನ್ ನ ಸರಿಯಾಗಿ ಅರ್ಥ ಮಾಡಿಕೊಳ್ಳುವವರೆಗೂ ಆಕೆ ಕ್ಯಾಮರಾ ಮುಂದೆ ಬರುವುದಿಲ್ಲ'' ಎನ್ನುತ್ತಾರೆ ನಿರ್ದೇಶಕ ಪ್ರೇಮ್.

'ದಿ ವಿಲನ್' ಬಗ್ಗೆ ಥ್ರಿಲ್ಲಿಂಗ್ ಅನುಭವ ಹಂಚಿಕೊಂಡ ಸುದೀಪ್

ಪ್ರೇಮ್ ಗೆ ನಿಬ್ಬೆರಗಾಯಿತು

''ದಿ ವಿಲನ್' ಚಿತ್ರದಲ್ಲಿ ಒಂದು ಕಾರ್ ಸ್ಟಂಟ್ ಇದೆ. ಆ ಸ್ಟಂಟ್ ನಲ್ಲಿ ಆಮಿ ಜಾಕ್ಸನ್ ಭಾಗಿಯಾಗಬೇಕಿತ್ತು. ಆದ್ರೆ, ಅವರ ಸುರಕ್ಷತೆ ಗಮನದಲ್ಲಿ ಇಟ್ಟುಕೊಂಡು ನಾವು ಡ್ಯೂಪ್ ಅರೇಂಜ್ ಮಾಡಿದ್ವಿ. ಅಷ್ಟರೊಳಗೆ, ಆಮಿ ಜಾಕ್ಸನ್ ರವರೇ ನನ್ನ ಬಳಿ ಬಂದು ತಾನೇ ಸ್ಟಂಟ್ ಮಾಡುವುದಾಗಿ ತಿಳಿಸಿದರು. ಬಳಿಕ ಅವರು ಮಾಡಿದ ಸ್ಟಂಟ್ ನೋಡಿ ನನಗೆ ಆಶ್ಚರ್ಯ ಆಯಿತು'' ಎನ್ನುತ್ತಾರೆ ಪ್ರೇಮ್.

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಫೇವರೆಟ್ ದೃಶ್ಯ ಇದೇ ನೋಡಿ.!

ಬ್ಯಾಂಕಾಕ್ ಬಳಿಕ ಲಡಾಕ್ ನಲ್ಲಿ ಶೂಟಿಂಗ್

ಬ್ಯಾಂಕಾಕ್ ಭಾಗದ ಚಿತ್ರೀಕರಣ ಸದ್ಯ ಮುಗಿದಿದ್ದು, ಚಿತ್ರತಂಡ ಲಡಾಕ್ ಗೆ ಪ್ರಯಾಣ ಬೆಳೆಸಲಿದೆ. ಲಡಾಕ್ ನಲ್ಲಿ ಚೇಸಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯಲಿದ್ದು, ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ.

English summary
Actress Amy Jackson surprised Director Prem with her stunts in 'The Villain'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada