»   » 'ಪವರ್ ಸ್ಟಾರ್' ಕ್ರೇಜ್ ಕಮ್ಮಿ ಆಗಿದೆ: ಆತಂಕಗೊಂಡ ಅಭಿಮಾನಿಗಳಿಂದ ಅಪ್ಪುಗೆ ಪತ್ರ!

'ಪವರ್ ಸ್ಟಾರ್' ಕ್ರೇಜ್ ಕಮ್ಮಿ ಆಗಿದೆ: ಆತಂಕಗೊಂಡ ಅಭಿಮಾನಿಗಳಿಂದ ಅಪ್ಪುಗೆ ಪತ್ರ!

Posted By:
Subscribe to Filmibeat Kannada

'ಜಾಕಿ' ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಕ್ರೇಜ್ ಕಮ್ಮಿ ಆಗಿದ್ಯಂತೆ. ರೀಸೆಂಟ್ ಆಗಿ ರಿಲೀಸ್ ಆಗಿರುವ ಅಪ್ಪು ಸಿನಿಮಾಗಳಲ್ಲಿ 'ಡ್ಯಾನ್ಸ್' ಗುಣಮಟ್ಟ ಕಳಪೆ.! ಇನ್ನೂ 'ದೊಡ್ಮನೆ ಹುಡ್ಗ' ಚಿತ್ರದ ಆಲ್ಬಂನಲ್ಲಿ ಎರಡು ಹಾಡುಗಳು ಬಿಟ್ರೆ, ಮಿಕ್ಕವು ಸುಮಾರು.! - ಹೀಗಂತ ಹೇಳುತ್ತಿರುವವರು ಸ್ವತಃ ಪವರ್ ಸ್ಟಾರ್ ಅಭಿಮಾನಿಗಳು.!

ಅಪ್ಪು ಕ್ರೇಜ್ ಕಡಿಮೆ ಆಗುತ್ತಿರುವ ಕುರಿತು ಆತಂಕಗೊಂಡಿರುವ ಮೈಸೂರಿನ ಅಪ್ಪು ಅಭಿಮಾನಿ ಬಳಗ, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಓಪನ್ ಲೆಟರ್ ಬರೆದಿದ್ದಾರೆ. ಪುನೀತ್ ಗೆ ಈ ಲೆಟರ್ ರೀಚ್ ಆಗುವವರೆಗೂ ಶೇರ್ ಮಾಡಿ ಅಂತ ಅಭಿಮಾನಿಗಳು ವಿನಂತಿ ಮಾಡಿಕೊಂಡಿದ್ದಾರೆ. [ಪುನೀತ್ ರಾಜ್ ಕುಮಾರ್ ಬಗ್ಗೆ ಸ್ಫೋಟಗೊಂಡ ರೋಚಕ ಸುದ್ದಿ ನಿಜ.?]

ಅಣ್ಣಾವ್ರ ಮಗ ಅಪ್ಪುಗೆ ಅಭಿಮಾನಿಗಳು ಬರೆದಿರುವ ಬಹಿರಂಗ ಪತ್ರವನ್ನ ಯಥಾವತ್ತಾಗಿ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ - ಸಂಪಾದಕ

ಅಪ್ಪುಗೆ ಪತ್ರ ಬರೆದಿರುವವರು ಯಾರು?

ಇಂದ,
ಮೈಸೂರು ಅಪ್ಪು ಅಭಿಮಾನಿಗಳು
ಗೆ,
ಪುನೀತ್ ರಾಜ್ ಕುಮಾರ್
ವಿಷಯ: ದಯವಿಟ್ಟು ಸಾಮಾಜಿಕ ಜಾಲತಾಣಕ್ಕೆ ಬನ್ನಿ

ಇತ್ತೀಚಿನ ಸಿನಿಮಾಗಳು ಖುಷಿ ಕೊಡುತ್ತಿಲ್ಲ!

ನಮಸ್ತೆ ಅಪ್ಪು ಸರ್, ನಾವು ನಿಮ್ಮ ಮೈಸೂರು ಅಭಿಮಾನಿಗಳು ನಿಮ್ಮ ಎಲ್ಲ ಚಿತ್ರಗಳನ್ನು ಮೊದಲ ದಿನವೇ ಚಿತ್ರಮಂದಿರದಲ್ಲಿ ಬ್ಲಾಕ್ ನಲ್ಲಿ ಟಿಕೆಟ್ ತಗೊಂಡು ನೋಡಿದ್ದೇವೆ. ಆದರೆ ನಿಮ್ಮ ಇತ್ತೀಚಿನ ಚಿತ್ರಗಳು ನಮಗೆ ಖುಷಿಕೊಡುತ್ತಿಲ್ಲ.

ಪವರ್ ಕಾಣಿಸುತ್ತಿಲ್ಲ!

ನಿಮ್ಮಲಿದ್ದ ಆ ಪವರ್ ಫುಲ್ ಪವರ್ 'ಜಾಕಿ' ನಂತರ ಯಾವ ಚಿತ್ರದಲ್ಲೂ ಕಾಣಿಸುತ್ತಿಲ್ಲ.

ಕ್ರೇಜ್ ಕಮ್ಮಿ ಆಗಿದೆ

'ಜಾಕಿ' ಮುಂಚೆ ನಿಮ್ಮಲ್ಲಿದ್ದ ಪವರ್ ನಿಮ್ಮ ಕ್ರೇಜ್ ಈಗ ಕೊಂಚ ಕಮ್ಮಿ ಆಗಿದೆ.

ಕಳಪೆ ಡ್ಯಾನ್ಸ್

ಪ್ರತಿಯೊಬ್ಬ ಅಪ್ಪು ಅಭಿಮಾನಿ ನಿಮ್ಮಲ್ಲಿ ಇಷ್ಟ ಪಡುವುದು ಡ್ಯಾನ್ಸ್. ನಿಮ್ಮ ಇತ್ತೀಚಿನ ಚಿತ್ರಗಳಲ್ಲಿ ಕಳಪೆ ಡ್ಯಾನ್ಸ್ ಕಾಣಿಸುತ್ತಿದೆ.

'ದೊಡ್ಮನೆ ಹುಡ್ಗ' ಹಾಡುಗಳು ಹಿಡಿಸೋಲ್ಲ!

ನಿಮ್ಮ 25ನೇ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಆದರೆ ಹಾಡುಗಳು, ನಿಮ್ಮ ಹಳೇ ಚಿತ್ರಕ್ಕೆ ಹೋಲಿಸಿದರೆ 'ದೊಡ್ಮನೆ ಹುಡ್ಗ' ಚಿತ್ರದ ಹಾಡುಗಳು ಕೇಳುಗರಿಗೆ ಹಿಡಿಸೋಲ್ಲ. ['ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?]

ಚೆನ್ನಾಗಿಲ್ಲ!

'ಅಭಿಮಾನಿ ದೇವರು..' ಮತ್ತು 'ಥ್ರಾಸ್ ಆಗೈತಿ...' ಬಿಟ್ರೆ ಇನ್ನೂ ಯಾವುದೂ ಅಷ್ಟೊಂದು ಚೆನ್ನಾಗಿಲ್ಲ. ['ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ]

ಪತ್ರ ಬರೆದಿರುವ ಉದ್ದೇಶ ಇಷ್ಟೇ...

ಅಪ್ಪು ಸರ್ ನಾವು ಪತ್ರ ಬರೆಯುತ್ತಿರುವ ಉದ್ದೇಶ ಇಷ್ಟೇ. ನೀವು ಸೋಷಿಯಲ್ ಮೀಡಿಯಾಗೆ ಬರಬೇಕು. ಪ್ರತಿಯೊಬ್ಬ ಅಭಿಮಾನಿಗೂ ಸ್ಪಂದಿಸಬೇಕು.

ಕ್ಯಾಂಡಿ ಕ್ರಷ್ ಆಡುವ ಬದಲು...

ನಮಗೆ ಗೊತ್ತು ನೀವು ನಿಮ್ಮ ಕುಟುಂಬದ ಜೊತೆ ಜಾಸ್ತಿ ಇರುತ್ತೀರಾ ಅಂತ. ನೀವು ಬಿಡುವಿದ್ದಾಗ ಕ್ಯಾಂಡಿ ಕ್ರಷ್ ಗ್ರೇಮ್ ಆಡುತ್ತೀರಾ, ಅದು ಆಡುವ ಬದಲು ನಿಮ್ಮ ಅಭಿಮಾನಿಗಳ ಜೊತೆ ಸ್ಪಂದಿಸಿ, ಅವರಿಗೂ ಖುಷಿ ಆಗುತ್ತದೆ. ನಿಮಗೂ ದುಪ್ಪಟ್ಟು ಖುಷಿ ಸಿಗುತ್ತದೆ.

ಟ್ವಿಟ್ಟರ್ ಗೆ ಬನ್ನಿ

ಪ್ರತಿಯೊಬ್ಬ ಅಭಿಮಾನಿಗೂ ನೀವು ಟ್ವಿಟ್ಟರ್ ಗೆ ಬರಬೇಕೆಂಬ ಆಸೆ ಇದೆ. ದಯವಿಟ್ಟು ನಿರಾಸೆ ಮಾಡಬೇಡಿ.

ಇಂತಿ ನಿಮ್ಮ ಅಭಿಮಾನಿ
ಮೈಸೂರು ಅಪ್ಪು ಅಭಿಮಾನಿಗಳು

ಟ್ವೀಟ್ ನೋಡಿ....

ಪುನೀತ್ ರಾಜ್ ಕುಮಾರ್ ಗೆ ಬರೆದಿರುವ ಪತ್ರ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

English summary
Power Star Puneeth Rajkumar fans from Mysuru has written open letter to Puneeth Rajkumar requesting him to become active in Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada