»   » ಪುನೀತ್ ರಾಜ್ ಕುಮಾರ್ ಮೇಲೆ ಅಭಿಮಾನಿ ದೇವರುಗಳ ಸಿಟ್ಟು-ಸಿಡುಕು!

ಪುನೀತ್ ರಾಜ್ ಕುಮಾರ್ ಮೇಲೆ ಅಭಿಮಾನಿ ದೇವರುಗಳ ಸಿಟ್ಟು-ಸಿಡುಕು!

Posted By:
Subscribe to Filmibeat Kannada

ಸರಳ, ಸಜ್ಜನ ನಡವಳಿಕೆಯಿಂದ ಜನಸಾಮಾನ್ಯರ ಹೃದಯ ಸಿಂಹಾಸನದಲ್ಲಿ ಅಜರಾಮರವಾಗಿ ನೆಲೆಸಿರುವ ನಟ ಡಾ.ರಾಜ್ ಕುಮಾರ್.

ಅಪ್ಪನ ಆದರ್ಶಗಳನ್ನ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ವಿನಯದಿಂದ ಪಾಲಿಸುತ್ತಾ ಬಂದಿದ್ದಾರೆ.

ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೆ ಕೆಲಸವನ್ನ ಶ್ರದ್ಧೆಯಿಂದ ಮಾಡುವ ಅಣ್ಣಾವ್ರ ಮಕ್ಕಳು ಇಡೀ ಸ್ಯಾಂಡಲ್ ವುಡ್ ಗೆ ಅಚ್ಚುಮೆಚ್ಚು. ['ಪವರ್ ಸ್ಟಾರ್' ಕ್ರೇಜ್ ಕಮ್ಮಿ ಆಗಿದೆ: ಆತಂಕಗೊಂಡ ಅಭಿಮಾನಿಗಳಿಂದ ಅಪ್ಪುಗೆ ಪತ್ರ!]

ಹೀಗಿದ್ದರೂ, ಡಾ.ರಾಜ್ ರವರ ಕಿರಿ ಪುತ್ರ ಪುನೀತ್ ರಾಜ್ ಕುಮಾರ್ ಮೇಲೆ 'ಅಭಿಮಾನಿ ದೇವರುಗಳು' ಸಿಟ್ಟು ಮಾಡಿಕೊಂಡಿದ್ದಾರೆ. ಅಪ್ಪುಗೆ ಅಭಿಮಾನಿಗಳು ಕೋಪದಿಂದ ಬಹಿರಂಗ ಪತ್ರ ಬರೆದಿದ್ದಾರೆ. ಮುಂದೆ ಓದಿ....

ಅಭಿಮಾನಿಗಳಿಗೆ ಸಿಟ್ಟು ಯಾಕೆ?

ಪುನೀತ್ ರಾಜ್ ಕುಮಾರ್ ಮೇಲೆ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಅಂತ ತಿಳಿಯುವ ಕುತೂಹಲ ನಿಮಗೆ ಇದ್ದರೆ, ಮುಂದಿನ ಸ್ಲೈಡ್ ನಲ್ಲಿ ಓದಿರಿ....

ಬಹಿರಂಗ ಪತ್ರ ಇಲ್ಲಿದೆ ಓದಿರಿ....

ಅಪ್ಪು ಮೇಲೆ ಸಿಟ್ಟು ಮಾಡಿಕೊಂಡು ಫ್ಯಾನ್ಸ್ ಬರೆದಿರುವ ಪತ್ರ ಇಲ್ಲಿದೆ. ಮುಂದಿನ ಸ್ಲೈಡ್ ನಲ್ಲಿ ಓದಿರಿ....

ಪತ್ರದಲ್ಲಿ ಏನಿದೆ?

ನಮ್ಮ ಪ್ರೀತಿಯ ಅಪ್ಪು ಸರ್ ಗೆ ಟ್ವಿಟ್ಟರ್ ಅಭಿಮಾನಿಗಳಿಂದ ಪತ್ರ

[ಪುನೀತ್ ರಾಜ್ ಕುಮಾರ್ ಬಗ್ಗೆ ಸ್ಫೋಟಗೊಂಡ ರೋಚಕ ಸುದ್ದಿ ನಿಜ.?]

ಅಪ್ಪು ಸರ್, ನಮಸ್ಕಾರ,

ಈ ಪತ್ರ ಬರೆಯುತ್ತಿರುವ ಕಾರಣ ಇಷ್ಟೆ. ನೀವು ಟ್ವಿಟ್ಟರ್ ಗೆ ಬರಬೇಕು ಎಂದು ಕೇಳಿ, 2-3 ವರ್ಷಗಳಿಂದ ನಾವು ಟ್ವಿಟ್ಟರ್ ಫ್ಯಾನ್ಸ್ ಕ್ಲಬ್ ಗಳನ್ನು ಯಶಸ್ವಿ ಆಗಿ ನಡೆಸುತ್ತಾ ಇದ್ದೀವಿ.

ಕಾಲ ತಳ್ಳುತ್ತಿದ್ದೇವೆ!

ನಿಮ್ಮ ಆಗಮನಕ್ಕೆ ನಾವು ಬಕಪಕ್ಷಿಯಂತೆ ಕಾಯುತ್ತಾ ಕಾಲ ತಳ್ಳುತ್ತಿದ್ದೇವೆ. ನೀವು ಟ್ವಿಟ್ಟರ್ ಗೆ ಬರ್ತೀನಿ ಅಂತ ಹೇಳುವಿರಾದರೂ, ಇನ್ನೂ ಬರುವ ಮನಸ್ಸು ಮಾಡಿಲ್ಲ.

ಫ್ಯಾನ್ಸ್ ಕೇಳ್ತಿದ್ದಾರೆ

ಅಭಿಮಾನಿಗಳು ನಮಗೆ ನಿರಂತರವಾಗಿ ಅಪ್ಪು ಸರ್ ಯಾವಾಗ ಟ್ವಿಟ್ಟರ್ ಗೆ ಬರುತ್ತಾರೆ ಎಂದು ಕೇಳುತ್ತಲೇ ಇರುತ್ತಾರೆ.

ನಮ್ಮ ಮಾತಿನ ಮೇಲೆ ನಂಬಿಕೆ ಇಲ್ಲ

ನಾವು ಸದ್ಯದ್ಲಲೇ ಬರುತ್ತಾರೆ ಎಂದು ಸಮಾಧಾನ ಪಡಿಸಿದ್ದೆವು. ಆದರೆ ಅವರಿಗೆ ಈಗ ನಮ್ಮ ಮಾತಿನ ಮೇಲೆ ನಂಬಿಕೆ ಇಲ್ಲದಂತಾಗಿದೆ.

ಆಶಯವೇನು?

ಟ್ವಿಟ್ಟರ್ ಮೂಲಕ ನೀವು ಇನ್ನೂ ಹೆಚ್ಚು ಅಭಿಮಾನಿಗಳಿಗೆ ಹತ್ತಿರವಾಗಲಿ ಎಂಬುದು ನಮ್ಮ ಆಶಯ.

ಸಿಟ್ಟಿನ ಪರಿಣಾಮ...

ಅದರಂತೆಯೇ ನೀವು ಬರುವ ತನಕ ನಾವು ಟ್ವಿಟ್ಟರ್ ಬಳಸಬಾರದು ಅಂತ ತೀರ್ಮಾನ ತೆಗೆದುಕೊಂಡಿದ್ದೇವೆ.

ಸ್ವಾರ್ಥ ಇಲ್ಲ

ನಮ್ಮ ಈ ತೀರ್ಮಾನ ನಿಮಗೆ ಅತಿರೇಕ ಅಂತ ಅನಿಸಬಹುದು, ಆದರೆ ನಮ್ಮ ತೀರ್ಮಾನ ಯಾವ ಸ್ವಾರ್ಥಕ್ಕಾಗಿ ಅಲ್ಲ.

ಬೇಸರ ತಂದರೆ ಕ್ಷಮಿಸಿ

ನಮ್ಮ ಉದ್ದೇಶ ನೀವು ಜನರೊಂದಿಗೆ ಜನರ ಪರಸ್ಪರ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು. ನಿಮ್ಮೊಡನೆ ಜನರು ಸುಲಭವಾಗಿ ಮಾತನಾಡುವಂತೆ ಆಗಬೇಕು ಎಂಬುದು ನಮ್ಮ ಆಸೆ. ನಮ್ಮ ಈ ವರ್ತನೆ ನಿಮಗೆ ಬೇಸರ ತಂದರೆ ಕ್ಷಮಿಸಿ...

ಧನ್ಯವಾದಗಳು
ಇಂತಿ,
ಟ್ವಿಟ್ಟರ್ ಫ್ಯಾನ್ಸ್ ಕ್ಲಬ್ ಆಡ್ಮಿನ್ಸ್

English summary
Power Star Puneeth Rajkumar's Twitter fans club Admin have written open letter to Puneeth Rajkumar requesting him to enter Twitter World.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada