»   » ಹುಚ್ಚ ವೆಂಕಟ್ ಮೇಲೆ ಹಲ್ಲೆ: ಯುವಕನಿಂದ ಫೈರಿಂಗ್ ಸ್ಟಾರ್ ಗೆ ಥಳಿತ

ಹುಚ್ಚ ವೆಂಕಟ್ ಮೇಲೆ ಹಲ್ಲೆ: ಯುವಕನಿಂದ ಫೈರಿಂಗ್ ಸ್ಟಾರ್ ಗೆ ಥಳಿತ

Posted By:
Subscribe to Filmibeat Kannada
ಹುಚ್ಚ ವೆಂಕಟ್ ಮೇಲೆ ಹಲ್ಲೆ, ಯುವಕನಿಂದ ಫೈರಿಂಗ್ ಸ್ಟಾರ್ ಗೆ ಥಳಿತ | Filmibeat Kannada

ಫೈರಿಂಗ್ ಸ್ಟಾರ್... ಯೂಟ್ಯೂಬ್ ಸ್ಟಾರ್... ಟಿ.ಆರ್.ಪಿ ಕಿಂಗ್ ಅಂತಲೇ ಫೇಮಸ್ ಆಗಿದ್ದ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಭರಪೂರ ಮನರಂಜನೆ ನೀಡುತ್ತಿರುವಾಗಲೇ, ಸಹ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಕಾರ್ಯಕ್ರಮದಿಂದ ಕಿಕ್ ಔಟ್ ಆಗಿದ್ದರು.

ನಂತರ ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದಾಗಲೂ, ಪ್ರಥಮ್ ಗೆ ಥಳಿಸಿ ಬಂದಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ.

ಹಾಗಂತ ಈ ಬಾರಿ ಹುಚ್ಚ ವೆಂಕಟ್ ಯಾರ ಮೇಲೂ ಹಲ್ಲೆ ಮಾಡಿಲ್ಲ. ಬದಲಾಗಿ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ. ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಯುವಕನೋರ್ವ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂದೆ ಓದಿರಿ...

ಹುಚ್ಚ ವೆಂಕಟ್ ಮೇಲೆ ಹಲ್ಲೆ

ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿದೆ. ನಡುಬೀದಿಯಲ್ಲಿ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಯುವಕನೊಬ್ಬ ಥಳಿಸಿದ್ದಾನೆ.

ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್: ಮನೆ ಸದಸ್ಯರಿಗೂ ಪ್ರಥಮ್ ಟಾರ್ಗೆಟ್

ಅಷ್ಟಕ್ಕೂ ಆಗಿದ್ದೇನು.?

ರಾತ್ರಿ ಊಟ ತರಲು ಹುಚ್ಚ ವೆಂಕಟ್ ಯಶವಂತಪುರದಲ್ಲಿರುವ ಹೋಟೆಲ್ ಒಂದಕ್ಕೆ ಹೋಗಿದ್ದರಂತೆ. ಊಟ ಮಾಡಿ ವಾಪಸ್ ಆಗುತ್ತಿದ್ದಾಗ, ಯುವಕರು ಮಾತನಾಡಿಸಿ ಕೀಟಲೆ ಮಾಡಿದರಂತೆ. ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿ ಯುವಕನೊಬ್ಬ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಹುಚ್ಚ ವೆಂಕಟ್ ತಲೆಗೆ ಹೊಡೆದಿದ್ದಾನೆ.

ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!

ಸುಮ್ಮನಾದ ಹುಚ್ಚ ವೆಂಕಟ್

ತಲೆಗೆ ಪೆಟ್ಟು ಬಿದ್ದ ಮೇಲೆ ಏನ್ನನ್ನೂ ಮಾತನಾಡದೆ ಮನೆಗೆ ತೆರಳಿದ ಹುಚ್ಚ ವೆಂಕಟ್, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ದೂರು ದಾಖಲಿಸಿಲ್ಲ.

'ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!

ಸಿಸಿಟಿವಿಯಲ್ಲಿ ಸೆರೆ

ಹುಚ್ಚ ವೆಂಕಟ್ ಗೆ ಥಳಿಸಿರುವ ದೃಶ್ಯ ಸಮೀಪದ ಮನೆಯೊಂದರ ಸಿಸಿಟಿವಿ ದೃಶ್ಯದಲ್ಲಿ ಸೆರೆ ಆಗಿದೆ.

ಘಟನೆ ನಡೆದಿದ್ದು ಯಾವಾಗ.?

ನವೆಂಬರ್ 29 ರ ರಾತ್ರಿ ಸುಮಾರು ಹತ್ತು ಗಂಟೆಗೆ ಈ ಗಲಾಟೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

English summary
An unidentified man assaults Huccha Venkat on November 29th at Yeshwanthpur, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada