For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಚಕ್ರವರ್ತಿ' ನಿರ್ಮಾಪಕ ಹಠಾತ್ ಬದಲಾವಣೆ.! ಕಾರಣ ಇದೇನಾ?

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಜಗ್ಗುದಾದಾ' ಚಿತ್ರೀಕರಣ ಮುಗಿದಿದೆ. ಮೊನ್ನೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿ ಆಗಿ ಜರುಗಿದೆ. ರೀ-ರೆಕಾರ್ಡಿಂಗ್ ಮುಗಿದು, ಸೆನ್ಸಾರ್ ಆದ ಕೂಡಲೆ 'ಜಗ್ಗುದಾದಾ' ನಿಮ್ಮ ಮುಂದೆ ಬರಲು ಸಿದ್ಧ.

  ಹೀಗಿರುವಾಗ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ ಮುಂದಿನ ಚಿತ್ರ ಯಾವುದು? ಎಂಬ ಪ್ರಶ್ನೆಗೆ ಸದ್ಯ ಸಿಕ್ಕಿರುವ ಉತ್ತರ 'ಚಕ್ರವರ್ತಿ'.[ದರ್ಶನ್ ಹುಟ್ಟುಹಬ್ಬಕ್ಕಿಲ್ಲ 'ಚಕ್ರವರ್ತಿ' ಮುಹೂರ್ತ!]

  ಎಲ್ಲವೂ ದರ್ಶನ್ ರವರ ಪ್ಲಾನ್ ಪ್ರಕಾರ ನಡೆದಿದ್ರೆ, ಇಷ್ಟೊತ್ತಿಗಾಗಲೇ 'ಚಕ್ರವರ್ತಿ' ಮುಹೂರ್ತ ಆಗಿರ್ಬೇಕಿತ್ತು. ಆದ್ರೆ, 'ಚಕ್ರವರ್ತಿ' ಸಿನಿಮಾ ಇನ್ನೂ ಸೆಟ್ಟೇರಿಲ್ಲ. 'ಚಕ್ರವರ್ತಿ' ಶುರುವಾಗುವ ಮುನ್ನವೇ ನಿರ್ಮಾಪಕರು ಬದಲಾಗಿದ್ದಾರೆ.! ಅದಕ್ಕೆ ಕಾರಣ ಏನು? ಕಾರಣ ಯಾರು? ಎಂಬುದರ ಸಂಪೂರ್ಣ ಮಾಹಿತಿ ನಾವು ನಿಮಗೆ ಕೊಡ್ತೀವಿ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

  'ಚಕ್ರವರ್ತಿ' ಯಾರ ಕನಸಿನ ಕೂಸು?

  'ಚಕ್ರವರ್ತಿ' ಯಾರ ಕನಸಿನ ಕೂಸು?

  ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್ ರವರ ಕನಸಿನ ಕೂಸು 'ಚಕ್ರವರ್ತಿ'. ಇದೇ ಚಿತ್ರಕ್ಕಾಗಿ ದರ್ಶನ್ ರವರ ಕಾಲ್ ಶೀಟ್ ನ ವರ್ಷದ ಹಿಂದೆಯೇ ಬುಕ್ ಮಾಡಿದ್ದವರು ಕೆ.ವಿ.ಸತ್ಯಪ್ರಕಾಶ್. ಆದ್ರೀಗ, 'ಚಕ್ರವರ್ತಿ' ಚಿತ್ರಕ್ಕೆ ಅವರು ಬಂಡವಾಳ ಹಾಕುತ್ತಿಲ್ಲ.[ಹೊಸ ಅವತಾರ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

  ಯಾರು ಈ ಸತ್ಯಪ್ರಕಾಶ್.?

  ಯಾರು ಈ ಸತ್ಯಪ್ರಕಾಶ್.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾ 'ಸಾರಥಿ' ಚಿತ್ರದ ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್.

  'ಚಕ್ರವರ್ತಿ' ಪ್ಲಾನ್.!

  'ಚಕ್ರವರ್ತಿ' ಪ್ಲಾನ್.!

  'ಸಾರಥಿ' ಚಿತ್ರದ ಬಳಿಕ ದರ್ಶನ್ ರವರಿಗೆ ಆಪ್ತರಾದ ಕೆ.ವಿ.ಸತ್ಯಪ್ರಕಾಶ್, ಕೆ.ಎಸ್.ಸೂರಜ್ ಗೌಡ ಎಂಬುವರ ಜೊತೆ ಸೇರಿ 'ಚಕ್ರವರ್ತಿ' ನಿರ್ಮಾಣ ಮಾಡಲು ಮುಂದಾಗಿದ್ದರು. ಆದ್ರೀಗ, 'ಚಕ್ರವರ್ತಿ' ಚಿತ್ರತಂಡದಿಂದ ಈ ಇಬ್ಬರು ನಿರ್ಮಾಪಕರು ದಿಢೀರ್ ಬದಲಾಗಿದ್ದಾರೆ.

  ಹೊಸ ನಿರ್ಮಾಪಕರು ಯಾರು?

  ಹೊಸ ನಿರ್ಮಾಪಕರು ಯಾರು?

  'ಚಕ್ರವರ್ತಿ' ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದಿರುವವರು ನಿರ್ಮಾಪಕ, ದರ್ಶನ್ ಅತ್ಯಾಪ್ತ ಅಣಜಿ ನಾಗರಾಜ್.

  ನಿರ್ಮಾಪಕರು ಬದಲಾಗಲು ದರ್ಶನ್ ಕಾರಣ?

  ನಿರ್ಮಾಪಕರು ಬದಲಾಗಲು ದರ್ಶನ್ ಕಾರಣ?

  ಮೂಲಗಳ ಪ್ರಕಾರ, 'ಚಕ್ರವರ್ತಿ' ಚಿತ್ರದ ನಿರ್ಮಾಪಕರ ಸ್ಥಾನಕ್ಕೆ ಅಣಜಿ ನಾಗರಾಜ್ ಬರಲು ಖುದ್ದು ದರ್ಶನ್ ಕಾರಣವಂತೆ.

  ಕೆ.ವಿ.ಸತ್ಯಪ್ರಕಾಶ್ ಔಟ್ ಆಗಿದ್ಯಾಕೆ?

  ಕೆ.ವಿ.ಸತ್ಯಪ್ರಕಾಶ್ ಔಟ್ ಆಗಿದ್ಯಾಕೆ?

  ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್ ರವರಿಗೆ ಬೇರೊಂದು ಕಮ್ಮಿಟ್ಮೆಂಟ್ ಇದೆ. ಅದನ್ನ ಮುಗಿಸಿ, 'ಚಕ್ರವರ್ತಿ' ಚಿತ್ರಕ್ಕೆ ಚಾಲನೆ ನೀಡ್ಬೇಕು ಅಂದ್ರೆ ಇನ್ನೆರಡು-ಮೂರು ತಿಂಗಳು ಬೇಕು. ಹೀಗಾಗಿ, ಅವರ ಜಾಗಕ್ಕೆ ದರ್ಶನ್, ಅಣಜಿ ನಾಗರಾಜ್ ರವರನ್ನು ಕರೆ ತಂದಿದ್ದಾರಂತೆ.

  ಫೆಬ್ರವರಿಯಲ್ಲಿ 'ಚಕ್ರವರ್ತಿ' ಯಾಕೆ ಸೆಟ್ಟೇರಲಿಲ್ಲ.!

  ಫೆಬ್ರವರಿಯಲ್ಲಿ 'ಚಕ್ರವರ್ತಿ' ಯಾಕೆ ಸೆಟ್ಟೇರಲಿಲ್ಲ.!

  ಹಾಗ್ನೋಡಿದ್ರೆ, ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ 'ಚಕ್ರವರ್ತಿ' ಸಿನಿಮಾದ ಮುಹೂರ್ತ ನಡೆಯಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಮುಹೂರ್ತ ಜರುಗಲಿಲ್ಲ.

  ಕಾಯಲು ದರ್ಶನ್ ತಯಾರಿಲ್ಲ.!

  ಕಾಯಲು ದರ್ಶನ್ ತಯಾರಿಲ್ಲ.!

  'ಜಗ್ಗುದಾದಾ' ಶೂಟಿಂಗ್ ಮುಗಿದಿದೆ. ಇನ್ನೆರಡು ಮೂರು ತಿಂಗಳು ಸುಮ್ಮನೆ ಕಾಯಲು ದರ್ಶನ್ ತಯಾರಿಲ್ಲ. ಹೀಗಾಗಿ ನಿರ್ಮಾಪಕರನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

  ಕೆ.ವಿ.ಸತ್ಯಪ್ರಕಾಶ್ ಜೊತೆ ಬೇರೆ ಡೀಲ್!

  ಕೆ.ವಿ.ಸತ್ಯಪ್ರಕಾಶ್ ಜೊತೆ ಬೇರೆ ಡೀಲ್!

  ಮುಂದಿನ ಚಿತ್ರಕ್ಕೆ ಕೆ.ವಿ.ಸತ್ಯಪ್ರಕಾಶ್ ರವರಿಗೆ ಕಾಲ್ ಶೀಟ್ ನೀಡುವುದಾಗಿ ದರ್ಶನ್ ಮಾತುಕತೆ ಮಾಡಿದ್ದಾರಂತೆ. ಎಲ್ಲವೂ ಓಕೆ ಆದ್ಮೇಲೆ, 'ಚಕ್ರವರ್ತಿ' ಅಡ್ಡಕ್ಕೆ ಅಣಜಿ ನಾಗರಾಜ್ ಬಂದಿದ್ದಾರೆ.

  ಅಣಜಿ ನಾಗರಾಜ್ ಏನಂತಾರೆ?

  ಅಣಜಿ ನಾಗರಾಜ್ ಏನಂತಾರೆ?

  ''ಮುಂಚಿನ ನಿರ್ಮಾಪಕರಿಗೆ ಬೇರೆ ಕಮಿಟ್ಮೆಂಟ್ ಇದೆ. ತಡವಾಗುತ್ತೆ ಎಂಬ ಕಾರಣಕ್ಕೆ ದರ್ಶನ್ ರವರ ಮಾತಿನ ಮೇಲೆ ನಾನು 'ಚಕ್ರವರ್ತಿ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದೇನೆ'' ಎನ್ನುತ್ತಾರೆ ನಿರ್ಮಾಪಕ ಅಣಜಿ ನಾಗರಾಜ್.

  'ಚಕ್ರವರ್ತಿ' ನಿರ್ದೇಶಕ?

  'ಚಕ್ರವರ್ತಿ' ನಿರ್ದೇಶಕ?

  ಈ ಹಿಂದೆ ದರ್ಶನ್ ರವರ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಚಿಂತನ್, ಚೊಚ್ಚಲ ಬಾರಿಗೆ 'ಚಕ್ರವರ್ತಿ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

  'ಚಕ್ರವರ್ತಿ' ನಾಯಕಿ?

  'ಚಕ್ರವರ್ತಿ' ನಾಯಕಿ?

  ವರದಿಗಳ ಪ್ರಕಾರ, 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಜೊತೆ ಅಂಜಲಿ ಡ್ಯುಯೆಟ್ ಹಾಡಲಿದ್ದಾರೆ.

  'ಚಕ್ರವರ್ತಿ' ಮುಹೂರ್ತ

  'ಚಕ್ರವರ್ತಿ' ಮುಹೂರ್ತ

  ಇದೇ ತಿಂಗಳು 'ಚಕ್ರವರ್ತಿ' ಮುಹೂರ್ತ ನಡೆಯಲಿದೆ. ಮುಹೂರ್ತದ ದಿನಾಂಕ ನಮಗೆ ಗೊತ್ತಾದ ಕೂಡಲೆ ನಿಮಗೆ ಹೇಳ್ತೀವಿ.

  English summary
  Kannada Actor Darshan close associate, Producer Anaji Nagaraj has come up to produce 'Chakravarthi', directed by Chintan. As, previous producer Satya Prakash has stuck up with his prior commitments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X