For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಸಿನಿಮಾಗೆ ಅಮಿತಾಬ್ ಇಲ್ಲ.! ಅನಂತ್ ಬಂದ್ರಲ್ಲ.!

  By Harshitha
  |

  ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟ ಯಾರು ಅಂದ್ರೆ, ಎಲ್ಲರಿಂದಲೂ ಸಲೀಸಾಗಿ ಬರುವ ಉತ್ತರ ಅನಂತ್ ನಾಗ್.

  ಚಿತ್ರದ ನಾಯಕ ಅಥವಾ ನಾಯಕಿಗೆ ತಂದೆಯಾಗಿ ಕಾಣಿಸಿಕೊಳ್ಳುವ ನಟ ಅನಂತ್ ನಾಗ್, ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಗುರುಗಳಾಗಿ ಅಭಿನಯಿಸುತ್ತಿದ್ದಾರೆ.

  ಶಿವರಾಜ್ ಕುಮಾರ್ ನಟಿಸುತ್ತಿರುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಗುರು ರಮಾನಂದ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗ್ನೋಡಿದ್ರೆ, ಇದೇ ಪಾತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಿಂಚಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗ್ಲಿಲ್ಲ. [ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]

  ಈಗ ಇದೇ ಪಾತ್ರಕ್ಕೆ ಅನಂತ್ ನಾಗ್ ಫಿಕ್ಸ್ ಆಗಿದ್ದಾರೆ. ಈಗಾಗಲೇ ಅವರ ಭಾಗದ ದೃಶ್ಯಗಳಿಗೆ ನಿರ್ದೇಶಕ ಇಂದ್ರ ಬಾಬು ಶ್ರೀರಂಗಪಟ್ಟಣದಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. [ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್]

  ಇದೇ ಚಿತ್ರದಲ್ಲಿ ಕಾಲಿವುಡ್ ನ ಖ್ಯಾತ ನಟ ಶರತ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕಬೀರ' ಪಾತ್ರದ ಶಿವರಾಜ್ ಕುಮಾರ್ ಜೊತೆ ನಟಿ ಸನುಷ ಮಿಂಚಿದ್ದಾರೆ. ದತ್ತಣ್ಣ, ಅವಿನಾಶ್ ರಂತಹ ದೊಡ್ಡ ತಾರಾಬಳಗವಿರುವ 'ಸಂತೆಯಲ್ಲಿ ನಿಂತ ಕಬೀರ' ಸದ್ಯಕ್ಕೆ ಚಿತ್ರೀಕರಣದಲ್ಲಿ ಬಿಜಿ.

  English summary
  Kannada Actor Anant Nag is roped into play Guru Ramanand in Shivarajkumar starrer new movie 'Santheyalli Ninta Kabira'. Indra Babu of 'Kabbadi' fame is directing this movie. The film features Akshatha Rao, Om Puri, Sarath Kumar and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X