»   » ನಿರೂಪಕ ಚಂದನ್ ದುರ್ಮರಣ: ಮಗನ ಕತ್ತು ಸೀಳಿ, ಆಸಿಡ್ ಸೇವಿಸಿದ ಪತ್ನಿ ಮೀನಾ

ನಿರೂಪಕ ಚಂದನ್ ದುರ್ಮರಣ: ಮಗನ ಕತ್ತು ಸೀಳಿ, ಆಸಿಡ್ ಸೇವಿಸಿದ ಪತ್ನಿ ಮೀನಾ

Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ನಿರೂಪಕ ಚಂದನ್ ಸಾವಿನಿಂದ ಆಘಾತಕ್ಕೆ ಒಳಗಾದ ಪತ್ನಿಯಿಂದ ಅನಾಹುತ | Filmibeat Kannada

  ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದ ಖ್ಯಾತ ನಿರೂಪಕ ಚಂದನ್ ಇತ್ತೀಚೆಗಷ್ಟೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದರು. ಮೇ 24 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಚಂದನ್ ಮೃತಪಟ್ಟಿದ್ದರು.

  ಚಂದನ್ ಇಹಲೋಕ ತ್ಯಜಿಸಿದ ಒಂದು ವಾರದಲ್ಲಿಯೇ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.

  ಪತಿ ಚಂದನ್ ದೂರವಾದ ಬೇಸರದಲ್ಲಿ ಇಂದು ಬೆಳಗ್ಗೆ ಪತ್ನಿ ಮೀನಾ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾಲದಕ್ಕೆ ಪುತ್ರ ತುಷಾರ್ ಕತ್ತು ಸೀಳಿ ಹತ್ಯೆಗೈದಿದ್ದಾರೆ. ಸಂಪೂರ್ಣ ವಿವರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

  ಆತ್ಮಹತ್ಯೆಗೆ ಯತ್ನಿಸಿದ ಮೀನಾ

  ಪತಿ ಚಂದನ್ ನಿಧನರಾದ ಮೇಲೆ ಆಘಾತಗೊಂಡಿದ್ದ ಮೀನಾ ಇಂದು ಮಗನನ್ನೂ ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ.

  ಅಪಘಾತದಲ್ಲಿ ಖ್ಯಾತ ನಿರೂಪಕ ಚಂದನ್ ಸಾವು

  ಮಗ ತುಷಾರ್ ಸ್ಕೂಲ್ ಗೆ ಹೋಗಬೇಕಿತ್ತು.!

  ಮೂಲತಃ ದೊಡ್ಡಬಳ್ಳಾಪುರದ ನಿವಾಸಿ ಆಗಿರುವ ಮೀನಾ ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಸಹೋದರನ ಜೊತೆಗೆ ಚೆನ್ನಾಗಿಯೇ ಮಾತನಾಡುತ್ತಿದ್ದರಂತೆ. ಪುತ್ರ ತುಷಾರ್ ಸ್ಕೂಲ್ ಗೆ ಹೋಗಲು ರೆಡಿ ಆಗುತ್ತಿದ್ದನಂತೆ. ತಿಂಡಿ ತಿಂದು ಬರುವೆ ಎಂದು ಮೀನಾ ಸಹೋದರ ಹೊರಗೆ ಹೋಗಿ ಬರುವಷ್ಟರಲ್ಲಿ ದುರಂತ ನಡೆದು ಹೋಗಿದೆ.

  ಸ್ಟಾರ್ ಆಂಕರ್ ಚಂದನ್ ನಿಧನ : ಅಣ್ಣಾವ್ರ ಅಭಿಮಾನಿಯ ಕಥೆ-ವ್ಯಥೆ

  ಪುತ್ರನ ಕತ್ತು ಸೀಳಿದ ತಾಯಿ

  ಮನೆಯಲ್ಲಿದ್ದ ಚಾಕು ಬಳಸಿ ತಮ್ಮ 13 ವರ್ಷದ ಪುತ್ರ, ಎಂಟನೇ ತರಗತಿಯಲ್ಲಿ ಓದುತ್ತಿದ್ದ ತುಷಾರ್ ಕತ್ತು ಸೀಳಿ ಕೊಂದಿದ್ದಾರೆ ತಾಯಿ ಮೀನಾ. ಜೊತೆಗೆ ಬಾತ್ ರೂಮ್ ನಲ್ಲಿ ಟೈಲ್ಸ್ ತೊಳೆಯಲು ಇದ್ದ ಆಸಿಡ್ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ.

  ಸ್ಥಳದಲ್ಲೇ ಮೃತಪಟ್ಟ ತುಷಾರ್

  ಕತ್ತು ಸೀಳಿ ರಕ್ತಸ್ರಾವ ಹೆಚ್ಚಾದ ಪರಿಣಾಮ, ಮನೆಯಲ್ಲಿಯೇ ತುಷಾರ್ ಮೃತಪಟ್ಟಿದ್ದಾನೆ. ಇನ್ನೂ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮೀನಾರನ್ನ ಕೂಡಲೆ ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲು ಮಾಡಲಾಯಿತು.

  ಮೀನಾ ಪರಿಸ್ಥಿತಿ ಚಿಂತಾಜನಕ

  ಮೀನಾ ಪರಿಸ್ಥಿತಿ ಕೊಂಚ ಸೀರಿಯಸ್ ಆಗಿದ್ದ ಕಾರಣ, ಅವರನ್ನ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈಗಲೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

  ಖುಷಿಯಾಗಿದ್ದ ದಂಪತಿ

  ''ಹದಿನಾಲ್ಕು ವರ್ಷಗಳ ಹಿಂದೆ ಚಂದನ್-ಮೀನಾ ವಿವಾಹವಾಗಿದ್ದರು. ಇಬ್ಬರದ್ದು ಅರೇಂಜ್ಡ್ ಮ್ಯಾರೇಜ್. ದಂಪತಿಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಮೀನಾ ಗೃಹಿಣಿ ಆಗಿದ್ದರು. ಗಂಡ ಹೆಂಡತಿ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಖುಷಿ ಖುಷಿಯಾಗಿಯೇ ಇದ್ದರು. ಚಂದನ್ ಸಾವನ್ನಪ್ಪಿದ ಬಳಿಕ ಮೀನಾ ಆಘಾತಕ್ಕೊಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ'' ಎನ್ನುತ್ತಾರೆ ಸಂಬಂಧಿ ಪ್ರೀತಮ್.

  English summary
  Anchor Chandan (who died at an road accident recently) wife Meena kills her 13 year old son Tushar and attempts to commit suicide today morning (May 31st) at Doddaballapur.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more