»   » ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?

ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?

By: ರಮೇಶ್.ಬಿ
Subscribe to Filmibeat Kannada

ನಟಿ ಅನುಶ್ರೀಯನ್ನ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೀವೆಲ್ಲಾ ನೋಡಿದ್ದೀರಾ. ತಂಟೆಗೆ ಬಂದ್ರೆ ತರಾಟೆಗೆ ತೆಗೆದುಕೊಳ್ಳುವ ಹುಡುಗಿ ಅನುಶ್ರೀ. ಬಾಯ್ಬಿಟ್ರೆ ಪಟ ಪಟ ಅಂತ ಮಾತನಾಡುವ ಅನುಶ್ರೀಗೆ ಕಿರಿಕಿರಿ ಆಗುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಅಂಥದ್ದೇನಪ್ಪಾ ಆಯ್ತು ಅಂದ್ರೆ, ನಟಿ ಅನುಶ್ರೀ ಫಂಕ್ಷನ್ ಒಂದಕ್ಕೆ ಹೋಗಿದ್ರು. ಅಲ್ಲಿ, ಯಾರೋ ಒಬ್ಬ ಯುವಕ ನಟಿ ಅನುಶ್ರೀಗೆ ಚುಡಾಯಿಸಿದ್ದಾರೆ. ಸಾಲದಕ್ಕೆ ಅನುಚಿತವಾಗಿ ವರ್ತಿಸಿದ್ದಾರೆ.

anushree

ಸಿಟ್ಟಿಗೆದ್ದ ಅನುಶ್ರೀ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ದೂರು ದಾಖಲಾದ ಕೂಡಲೆ ಪೊಲೀಸರು ಆ ಯುವಕನನ್ನ ಹಿಡಿದು ಏರೋಪ್ಲೇನ್ ಹತ್ತಿಸಿದ್ದಾರೆ. ''ಛೇ..ಮೂಡೆಲ್ಲಾ ಹಾಳಾಯ್ತಲ್ಲಾ..''ಅಂತ ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಂಡು ಅನುಶ್ರೀ ಮತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು.

ಇಂತಹ ಸೇಮ್ ಟು ಸೇಮ್ ಘಟನೆ ಮೊನ್ನೆಯಷ್ಟೇ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ನಟಿ ಹರಿಪ್ರಿಯಾಗೆ ಆಗಿದ್ದು ನೆನಪಿದೆ ತಾನೆ. ಇಲ್ಲಾಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ....[ನಟಿ ಹರಿಪ್ರಿಯಾ ಜೊತೆ ಅಪರಿಚಿತ ಯುವಕನ ಅಸಭ್ಯ ವರ್ತನೆ] ಪಾಪಾ...ನಟಿಯರ ಪಾಡು ಯಾಕ್ ಕೇಳ್ತೀರಾ..!?

English summary
Annoyed with misbehavior of so called fan in Kundapur district Karnataka, Kannada Actress and TV Host Anushree lodges complaint in Kundapur police station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada