For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗಳ ಹುಟ್ಟುಹಬ್ಬವನ್ನು ಅನು ಪ್ರಭಾಕರ್ ದಂಪತಿ ಹೇಗೆ ಸಂಭ್ರಮಿಸಿದ್ದಾರೆ ನೋಡಿ?

  |

  ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಸದ್ಯ ಸಿನಿಮಾ ಜೊತೆಗೆ ಮಗಳ ಜೊತೆಯೂ ಕಾಲಕಳೆಯುತ್ತಿರುತ್ತಾರೆ. ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿಗೆ ನಂದನಾ ಎನ್ನುವ ಮುದ್ದಾದ ಮಗಳಿದ್ದಾರೆ. ಅನು ಪ್ರಭಾಕರ್ ಆಗಾಗ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಐರಾ ಯಶ್, ಯಥರ್ವ್, ಜೂ. ಚಿರು ಹಾಗೆ ನಂದನಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್. ಆಗಾಗ ನಂದನಾಳ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ.

  ಅಂದಹಾಗೆ ಅನು ಪ್ರಭಾಕರ್ ಪುತ್ರಿ ನಂದಳಾಗೆ ಮೂರು ವರ್ಷ ತುಂಬಿದೆ. ಇತ್ತೀಚಿಗಷ್ಟೆ ನಂದನಾ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಮುದ್ದು ಮಗಳ ಹುಟ್ಟುಹಬ್ಬವನ್ನು ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಅದ್ದೂರಿಯಾಗಿ ಕುಟುಂಬದ ಸದಸ್ಯರ ಜೊತೆ ಆಚರಣೆ ಮಾಡಿದ್ದಾರೆ. ಮಗಳ ಹುಟ್ಟುಹಬ್ಬದ ಫೋಟೋವನ್ನು ಅನು ಪ್ರಭಾಕರ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

  ಕೇಕ್ ಕತ್ತರಿಸಿ ಸಂಭ್ರಮಿಸಿದ ನಂದನಾ

  ಕೇಕ್ ಕತ್ತರಿಸಿ ಸಂಭ್ರಮಿಸಿದ ನಂದನಾ

  ಸುಂದರವಾದ ಕೇಕ್ ಕತ್ತರಿಸುವ ಮೂಲಕ ನಂದನಾ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ. ಕೇಕ್ ಕತ್ತರಿಸಿ ನಂದನಾ ಕೂಡ ಸಂತಸ ಪಟ್ಟಿದೆ. ಮಗಳ ಹುಟ್ಟುಹಬ್ಬದ ಒಂದಿಷ್ಟು ಫೋಟೋಗಳನ್ನು ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆೆ. ಫೋಟೋದಲ್ಲಿ ಅನು ಪ್ರಭಾಕರ್ ಇಡೀ ಕುಟುಂಬ ಭಾಗಿಯಾಗಿದೆ.

  ಧನ್ಯವಾದ ತಿಳಿಸಿದ ಅನು ಪ್ರಭಾಕರ್

  ಧನ್ಯವಾದ ತಿಳಿಸಿದ ಅನು ಪ್ರಭಾಕರ್

  ಫೋಟೋ ಶೇರ್ ಮಾಡಿ, "ನಂದನಾಗೆ ಮೂರು ವರ್ಷ ತುಂಬಿದೆ. ಅವಳಿಗೆ ಶುಭಾಶಯ ತಿಳಿಸಿ ಆಶೀರ್ವಾದ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಹೇಳಿದ್ದಾರೆ. ಟ್ರೈನ್ ಕೇಕ್ ಮತ್ತು ಸುಂದರ ಬಟ್ಟೆ ಡಿಸೈನ್ ಮಾಡಿದವರಿಗೆ ಅನು ಪ್ರಭಾಕರ್ ಧನ್ಯವಾದ ತಿಳಿಸಿದ್ದಾರೆ.

  ಪ್ರಿಯಾ ಸುದೀಪ್ ವಿಶ್

  ಪ್ರಿಯಾ ಸುದೀಪ್ ವಿಶ್

  ಅನು ಪ್ರಭಾಕರ್ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ಮುದ್ದು ನಂದನಾಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ನಂದನಾ ಬೊಂಬೆ ಹಾಗೆ ಇದ್ದಾಳೆ. ಒಳ್ಳೆಯದಾಗಲಿ. ಸದ್ಯದಲ್ಲೇ ಭೇಟಿ ಮಾಡೋಣ" ಎಂದು ಹೇಳಿದ್ದಾರೆ. ಪ್ರಿಯಾ ಸುದೀಪ್ ಮಾತಿಗೆ ಅನು ಪ್ರಭಾಕರ್ ಕೂಡ ಪ್ರತಿಕ್ರಿಯೆ ನೀಡಿ, ಧನ್ಯವಾದಗಳು ಸ್ವೀಟ್ ಹಾರ್ಟ್ ಎಂದು ಹೇಳಿದ್ದಾರೆ.

  2016ರಲ್ಲಿ ಅನು- ರಘು ಮದುವೆ

  2016ರಲ್ಲಿ ಅನು- ರಘು ಮದುವೆ

  ನಟಿ ಅನು ಪ್ರಭಾಕರ್ 2016ರಲ್ಲಿ ನಟ ರಘು ಮುಖರ್ಜಿ ಜೊತೆ ಎರಡನೇ ಮದುವೆಯಾದರು. ಮೊದಲು ಹಿರಿಯ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಮದುವೆಯಾಗಿದ್ದ ಅನು ಪ್ರಭಾಕರ್ ಬಳಿಕ ಇಬ್ಬರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದು ದೂರ ದೂರ ಆಗಿದ್ದರು. ನಂತರ ಅನು ಪ್ರಭಾಕರ್ ನಟ ರಘು ಮುಖರ್ಜಿಯನ್ನು ಪ್ರೀತಿಸಿ ವಿವಾಹ ಆದರು.

  ಲವ್ ಸ್ಟೋರಿ ಬಗ್ಗೆ ಅನು ಪ್ರಭಾಕರ್ ಹೇಳಿದ್ದೇನು?

  ಲವ್ ಸ್ಟೋರಿ ಬಗ್ಗೆ ಅನು ಪ್ರಭಾಕರ್ ಹೇಳಿದ್ದೇನು?

  ಇಬ್ಬರ ಪ್ರೀತಿಯ ಬಗ್ಗೆ ನಟಿ ಅನು ಪ್ರಭಾಕರ್ ಹಿಂದೆ ಬಹಿರಂಗ ಪಡಿಸಿದ್ದರು. ''ಸೂಪರ್ ಕಾರ್ಯಕ್ರಮದಲ್ಲಿ ನಾವೆಲ್ಲ ಜಡ್ಜ್ ಆಗಿದ್ವಿ. ಅದಾದ್ಮೇಲೆ ಫ್ರೆಂಡ್ಸ್ ಆದ್ವಿ. ಮೀಟ್ ಮಾಡ್ತಿದ್ವಿ. ಕಷ್ಟದಲ್ಲಿ ಇರುವಾಗ ಸ್ನೇಹ ಗಟ್ಟಿ ಆಯ್ತು. ಕುಟುಂಬಗಳು ಒಂದಾದಾಗ ಮದುವೆ ಆಯ್ತು. ಮದುವೆ ಆಗುವ ಯೋಚನೆ ಖಂಡಿತ ನನಗೆ ಇರಲಿಲ್ಲ. ವಿದ್ಯಾಭ್ಯಾಸ, ಸಿನಿಮಾ ಅಂತ ಇದ್ದೆ. ಆದ್ರೆ, ಕುಟುಂಬದವರೇ ಮುಂದೆ ಬಂದಾಗ ತುಂಬಾ ಟೈಮ್ ತೆಗೆದುಕೊಂಡು ಒಪ್ಪಿಕೊಂಡ್ವಿ'' ಎಂದು ಅನು ಪ್ರಭಾಕರ್ ತಮ್ಮ ಲವ್ ಸ್ಟೋರಿ ಹೇಳಿಕೊಂಡಿದ್ದರು.

  2018ರಲ್ಲಿ ನಂದನಾಳ ಜನನ

  2018ರಲ್ಲಿ ನಂದನಾಳ ಜನನ

  ಇನ್ನು 2018ರಲ್ಲಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಮೊದಲ ಮಗುವಿನ ಪೋಷಕರಾದರು. ಇಬ್ಬರೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚಿಗಷ್ಟೆ ಅನು ಪ್ರಭಾಕರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ನಟಿಸಿದ್ದರು. ಈ ಮೊದಲ ಬಾರಿಗೆ ಪವರ್ ಸ್ಟಾರ್ ತೊರೆ ಹಂಚಿಕೊಂಡಿದ್ದರು.

  English summary
  Actress Anu Prabhakar and Raghu Mukherjee celebrate their daughter birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X