»   » ಅನೂಪ್ ಗೆ ಪುರುಸೊತ್ತು ಇಲ್ಲ.! ಆರ್.ಚಂದ್ರುಗೆ ಟೈಮ್ ಸಿಗುತ್ತಿಲ್ಲ.!

ಅನೂಪ್ ಗೆ ಪುರುಸೊತ್ತು ಇಲ್ಲ.! ಆರ್.ಚಂದ್ರುಗೆ ಟೈಮ್ ಸಿಗುತ್ತಿಲ್ಲ.!

Posted By:
Subscribe to Filmibeat Kannada

'ಲಕ್ಷ್ಮಣ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಟೈಮ್ ಇದೆ. ಚಿತ್ರಕ್ಕೆ ಉತ್ತಮ ಪ್ರಚಾರ ಕೊಟ್ಟು, ಕರ್ನಾಟಕದ ಮೂಲೆ ಮೂಲೆಯಲ್ಲೂ ರೀಚ್ ಆಗುವಂತೆ ಆರ್.ಚಂದ್ರು ಹಲವಾರು ಪ್ಲಾನ್ ಗಳನ್ನ ಮಾಡಿಕೊಂಡಿದ್ದಾರೆ. ಆದ್ರೆ, ಅವರಿಗೆ ಸದ್ಯ ಒಂದು ಸಮಸ್ಯೆ ಕಾಡುತ್ತಿದೆ. ಅದು ನಾಯಕ ಅನೂಪ್ ರೇವಣ್ಣ ಅವರ ಸಮಯ.!

'ಲಕ್ಷ್ಮಣ'...ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ. 'ಲಕ್ಷ್ಮಣ' ತೆರೆಗೆ ಅಪ್ಪಳಿಸುವ ಮುನ್ನವೇ ಅನೂಪ್ ರೇವಣ್ಣ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಬಿಜಿ ಆಗ್ಬಿಟ್ಟಿದ್ದಾರೆ. [ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!]


anup-revanna-is-busy-prior-to-lakshmana-release

ಈಗಾಗಲೇ, ಎಸ್.ನಾರಾಯಣ್ ನಿರ್ದೇಶನದ 'ಪಂಟ' ಚಿತ್ರದ ಚಿತ್ರೀಕರಣದಲ್ಲಿ ಅನೂಪ್ ರೇವಣ್ಣ ಭಾಗಿಯಾಗಿದ್ದಾರೆ. ಅಲ್ಲದೇ, ಮೂರ್ನಾಲ್ಕು ಚಿತ್ರಗಳಿಗೆ ಅನೂಪ್ ಬುಕ್ ಆಗಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ಕೆಲ ನಿರ್ಮಾಪಕರೂ ಕಾದು ಕುಳಿತಿದ್ದರೆ, ಕಥೆ ಹೇಳಲು ಹಲವಾರು ನಿರ್ದೇಶಕರು ಕೂಡ ಸರದಿಯಲ್ಲಿದ್ದಾರೆ. [ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ']


ಇವರೆಲ್ಲರ ಮಧ್ಯೆ ಆರ್.ಚಂದ್ರು ರವರಿಗೆ 'ಲಕ್ಷ್ಮಣ' ಪ್ರಮೋಷನ್ ಸಲುವಾಗಿ ಅನೂಪ್ ರೇವಣ್ಣ ಸಮಯ ಬೇಕಾಗಿದೆ. ಯಾರಿಗೂ 'ನೋ' ಎನ್ನದ ಅನೂಪ್, ಹಗಲು ರಾತ್ರಿ 'ಸಿನಿಮಾ, ಸಿನಿಮಾ' ಎನ್ನುವಂತಾಗಿದೆ. [ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]


ಮೊದಲನೇ ಸಿನಿಮಾ ಬಿಡುಗಡೆಗೂ ಮುನ್ನವೇ ಅನೂಪ್ ಗೆ ಗಾಂಧಿನಗರದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿರುವ ಬಗ್ಗೆ 'ಲಕ್ಷ್ಮಣ' ಸಾರಥಿ ಆರ್.ಚಂದ್ರು ಹೆಮ್ಮೆ ಪಡುತ್ತಾರೆ.

English summary
Congress Politician H.M.Revanna's son Anup Revanna starrer R.Chandru directorial 'Lakshmana' is releasing on June 24th. Before the release itself, Anup Revanna has become so busy with other projects.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada